ಧೋನಿ ಜತೆ ಕ್ರಿಸ್ಮಸ್ ಆಚರಿಸಿದ ಪಂತ್
Team Udayavani, Dec 26, 2019, 11:03 PM IST
ದುಬಾೖ: ರಿಷಭ್ ಪಂತ್ ಅವರು ದುಬಾೖನಲ್ಲಿ ಧೋನಿ ಜತೆ ಕ್ರಿಸ್ಮಸ್ ಪಾರ್ಟಿ ಆಚರಣೆ ಮಾಡಿದ್ದಾರೆ. ಪಂತ್ ತಮ್ಮ ಟ್ವಿಟರ್ ಖಾತೆಯಲ್ಲಿ ಧೋನಿ ಜತೆ ಸಂಭ್ರಮಾಚರಿಸುತ್ತಿರುವ ಚಿತ್ರವೊಂದನ್ನು ಹಾಕಿದ್ದು, ಈ ಬಾರಿಯ ಕ್ರಿಸ್ಮಸ್ ಹಬ್ಬವನ್ನು ಲೆಜೆಂಡ್ ಆಟಗಾರನೊಂದಿಗೆ ಆಚರಿಸಿರುವುದು ಖುಷಿ ನೀಡಿದೆ ಎಂದಿದ್ದಾರೆ.
ಪಂತ್ ಈ ಫೊಟೋವನ್ನು ಪೋಸ್ಟ್ ಮಾಡಿದೊಡನೆಯೇ ಧೋನಿ ಅಭಿಮಾನಿಗಳು ಸಲಹೆ ಯೊಂದನ್ನು ನೀಡಿದ್ದಾರೆ. “ಪಂತ್ ತಮ್ಮ ಕೀಪಿಂಗ್ ಕೌಶಲವನ್ನು ಉತ್ತಮಪಡಿಸಲಿ ಮತ್ತು ಓರ್ವ ಸೂಕ್ತ ಸಲಹೆಗಾರರನ್ನು ಆಯ್ಕೆ ಮಾಡಿ ಅವರ ಕೋಚಿಂಗ್ನಂತೆ ಕಠಿನ ಅಭ್ಯಾಸ ನಡೆಸಲಿ’ ಎಂದಿದ್ದಾರೆ.