ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ನಮಗೆ ಚಿಂತೆಯೇ ಇಲ್ಲ: ನಾಯಕ ರೋಹಿತ್ ಶರ್ಮಾ
Team Udayavani, Feb 12, 2022, 11:15 AM IST
ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ ಕೈವಶ ಮಾಡಿಕೊಂಡಿದೆ. ಶುಕ್ರವಾರ ನಡೆದ ಪಂದ್ಯವನ್ನೂ ಗೆದ್ದ ಭಾರತ ತಂಡ 3-0 ಅಂತರದಿಂದ ಸರಣಿ ಜಯಿಸಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು. ಮೂರು ಪಂದ್ಯದಲ್ಲಿ ವಿರಾಟ್ ಗಳಿಸಿದ್ದು ಕೇವಲ 26 ರನ್. ಪಂದ್ಯದ ಬಳಿಕ ಸುದ್ದಿಗೋಷ್ಠಿಯ ವೇಳೆ ರೋಹಿತ್ ಈ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್, “ವಿರಾಟ್ ಕೊಹ್ಲಿಗೆ ಆತ್ಮವಿಶ್ವಾಸ ಬೇಕೇ? ನೀವು ಏನು ಮಾತನಾಡುತ್ತಿದ್ದೀರಿ? ನನ್ನ ಪ್ರಕಾರ 100 ರನ್ ಗಳಿಸದಿರುವುದು ಬೇರೆ ವಿಷಯ ಆದರೆ ಅವರು ದಕ್ಷಿಣ ಆಫ್ರಿಕಾದಲ್ಲಿ ಸರಣಿಯನ್ನು ಆಡಿದ್ದಾರೆ ಮತ್ತು ಮೂರು ಪಂದ್ಯಗಳಲ್ಲಿ ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ. ನನಗೆ ಏನೂ ಕೊರತೆ ಕಾಣುತ್ತಿಲ್ಲ. ತಂಡದ ಮ್ಯಾನೇಜ್ಮೆಂಟ್ ಗೆ ವಿರಾಟ್ ಫಾರ್ಮ್ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದರು.
ಇದನ್ನೂ ಓದಿ:ಇಂಡಿಯನ್ ಪ್ರೀಮಿಯರ್ ಲೀಗ್-2022: ಮೆಗಾ ಹರಾಜಿನ ಮಹಾ ಕೌತುಕ
“ನಾವು ಚಿಂತಿಸುತ್ತಿರುವುದು ಏನೆಂದು ನಿಮಗೆ ಗೊತ್ತಾ, ಮಧ್ಯಮ ಓವರ್ಗಳಲ್ಲಿ ನಾವು ಹೇಗೆ ಸವಾಲೆಸುವ ಬಗ್ಗೆ ಯೋಜನೆಯಿತ್ತು. ಈ ಸರಣಿಯಲ್ಲಿ ನಮ್ಮ ಮಧ್ಯಮ ಓವರ್ಗಳ ಬ್ಯಾಟಿಂಗ್ ನಿಜವಾಗಿಯೂ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ರೋಹಿತ್ ಹೇಳಿದರು.
“ಮಧ್ಯಮ ಕ್ರಮಾಂಕದ ಪ್ರತಿಯೊಬ್ಬರೂ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಾಗಲೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದಾರೆ, ಕಷ್ಟಕರ ಸಂದರ್ಭಗಳಲ್ಲಿಯೂ ಬ್ಯಾಟ್ ಮಾಡಿದರು” ಎಂದು ಮಿಡಲ್ ಆರ್ಡರ್ ಆಟಗಾರರ ಬಗ್ಗೆ ರೋಹಿತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ