ಶರತ್-ಮಣಿಕಾಗೆ ಒಲಿಂಪಿಕ್ಸ್ ಟಿಕೆಟ್ : ಒಲಿಂಪಿಕ್ಸ್ ಅರ್ಹತೆ ಪಡೆದ ಭಾರತದ ಮೊದಲ ಜೋಡಿ
Team Udayavani, Mar 21, 2021, 7:00 AM IST
ದೋಹಾ (ಕತಾರ್): ಭಾರತಕ್ಕೆ ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಮೊದಲ ಟೇಬಲ್ ಟೆನಿಸ್ ಪದಕವೊಂದು ಲಭಿಸುವ ಅವಕಾಶವೊಂದು ಉಜ್ವಲಗೊಂಡಿದೆ. ಏಶ್ಯನ್ ಕ್ವಾಲಿಫಿಕೇಶನ್ ಟೂರ್ನಿಯ ಮಿಶ್ರ ಡಬಲ್ಸ್ನಲ್ಲಿ ಚಾಂಪಿಯನ್ ಎನಿಸಿಕೊಳ್ಳುವ ಮೂಲಕ ಅಚಂತ ಶರತ್ ಕಮಲ್-ಮಣಿಕಾ ಬಾತ್ರಾ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆದು ನಿರೀಕ್ಷೆಯನ್ನು ಹೆಚ್ಚಿಸುವಂತೆ ಮಾಡಿದ್ದಾರೆ.
ಶನಿವಾರದ ಪಂದ್ಯದಲ್ಲಿ ವಿಶ್ವದ 19 ಶ್ರೇಯಾಂಕದ ಶರತ್-ಮಣಿಕಾ ಜೋಡಿ, ಕೊರಿಯಾದ 8ನೇ ಶ್ರೇಯಾಂಕದ ಸಾಂಗ್ ಸು ಲೀ ಮತ್ತು ಜಿಹೀ ಜಿಯೋನ್ ವಿರುದ್ಧ ದಿಟ್ಟ ಹೋರಾಟ ನೀಡಿ ಗೆಲುವು ಸಾಧಿಸಿತು. ಆರಂಭಿಕ ಎರಡು ಸೆಟ್ಗಳನ್ನು ಕಳೆದುಕೊಂಡು ನಿರ್ಗಮನ ಖಚಿತ ಎಂಬ ಸ್ಥಿತಿಯಲ್ಲಿದ್ದ ಭಾರತೀಯ ಜೋಡಿ ಅನಂತರದ ನಾಲ್ಕೂ ಸೆಟ್ಗಳಲ್ಲಿ ತಿರುಗಿ ಬಿದ್ದ ಪರಿ ಅತ್ಯಂತ ರೋಚಕವಾಗಿತ್ತು. ಅಂತಿಮವಾಗಿ ಇವರು 8-11, 6-11, 11-5, 11-6, 13-11, 11-8 ಅಂತರದ ಗೆಲುವು ದಾಖಲಿದರು. 2018ರ ಏಶ್ಯನ್ ಗೇಮ್ಸ್ನಲ್ಲಿÉ ಮಣಿಕಾ-ಶರತ್ ಜೋಡಿ ಕಂಚಿನ ಪದಕ ಜಯಿಸಿತ್ತು.
“ಇಂದು ಮಣಿಕಾ ಅಮೋಘ ಪ್ರದರ್ಶನ ನೀಡಿದರು. ಅವರನ್ನು ತಡೆಯುವುದೇ ಕಷ್ಟವಾಗಿತ್ತು. ನಾನೂ ನನ್ನ ಪವರ್ ಗೇಮ್ ಪ್ರದರ್ಶಿಸುವಲ್ಲಿ ಯಶಸ್ವಿಯಾದೆ. ಈ ಪಂದ್ಯಾವಳಿಯಲ್ಲಿ ನಾವು ಗೆದ್ದು ಬರುತ್ತೇವೆಂಬ ನಂಬಿಕೆ ಖಂಡಿತ ಇರಲಿಲ್ಲ. ಮುಂದಿನದು ಒಲಿಂಪಿಕ್ಸ್ ಪದಕ. ಇದು ಅತ್ಯಂತ ಕಠಿನ ಸವಾಲು. ಆದರೆ ಗರಿಷ್ಠ ಪ್ರಯತ್ನ ನಡೆಸಲಿದ್ದೇವೆ’ ಎಂದು ಶರತ್ ಕಮಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ