ಬಿದ್ದು ಎದ್ದು ಗುರಿ ಮುಟ್ಟಿದ ಸಾಧಕಿ
Team Udayavani, Aug 3, 2021, 6:25 AM IST
ಟೋಕಿಯೊ: ಓಟದ ಸ್ಪರ್ಧೆ ವೇಳೆ ಎಡವಿ ಬಿದ್ದರೂ ಹಠ ಬಿಡದೆ ಎದ್ದು ಓಡಿ ಮೊದಲಿಗಳಾಗಿ ಹೊರಹೊಮ್ಮಿದ ಈ ಸಾಧಕಿ ಅನೇಕರಿಗೆ ಸ್ಫೂರ್ತಿಯಾದ ಕತೆ ಇದು. ನೆದರ್ಲೆಂಡ್ಸ್ನ ವಿಶ್ವ ಚಾಂಪಿಯನ್ ಸಿಫಾನ್ ಹಸನ್ ಅವರೇ ಇಲ್ಲಿನ ತಾರೆ.
ಸೋಮವಾರ ನಡೆದ 1,500 ಮೀ. ಹೀಟ್ಸ್ನ ಅಂತಿಮ ಲ್ಯಾಪ್ನಲ್ಲಿ ಓಡುವಾಗ ಸಿಫಾನ್ ಹಸನ್ ಕೀನ್ಯಾದ ಓಟಗಾರ್ತಿ ಎಡಿನಾ ಜೆಬಿಟೋಕ್ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದರು. ಇಬ್ಬರೂ ನೆಲಕ್ಕುರುಳಿದರು. ಆದರೆ ಸಿಫಾನ್ ಹಸನ್ ತತ್ಕ್ಷಣವೇ ಚೇತರಿಸಿಕೊಂಡು ಮೇಲೆದ್ದು ತಮ್ಮ ಗುರಿಯತ್ತ ಮುನ್ನುಗ್ಗಿದರು. ಆಗಲೇ ತಮ್ಮ ಹಿಂದಿದ್ದ ಎಲ್ಲ ಸ್ಪರ್ಧಿಗಳು ಮುಂದಕ್ಕೆ ಹೋಗಿದ್ದರು. ಈ ವೇಳೆ ಧೃತಿಗೆಡದ ಸಿಫಾನ್ ತಮ್ಮ ಓಟದ ವೇಗವನ್ನು ಹೆಚ್ಚಿಸಿ ಎಲ್ಲ ಅಥ್ಲೀಟ್ಗಳನ್ನೂ ಹಿಂದಿಕ್ಕಿದರು. 4 ನಿಮಿಷ, 5.17 ಸೆಕೆಂಡ್ಸ್ನಲ್ಲಿ ಗುರಿ ಮುಟ್ಟಿ ಮೊದಲಿಗರಾದರು. ಅವರೀಗ ಸೆಮಿಫೈನಲ್ ಅರ್ಹತೆ ಪಡೆದಿದ್ದಾರೆ.
5 ಸಾವಿರ ಹಾಗೂ 10 ಸಾವಿರ ಮೀ. ರೇಸ್ನಲ್ಲೂ ಸಿಫಾನ್ ಪಾಲ್ಗೊಳ್ಳಲಿದ್ದು, ಹ್ಯಾಟ್ರಿಕ್ ಚಿನ್ನ ಗೆಲ್ಲುವ ಗುರಿ ಇರಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?