ಮಗು ನೋಡಲು ಸಾನಿಯಾ ಮನೆಗೆ ತೆರಳಿದ ಸಿಂಧು, ಜೋಶ್ನಾ
Team Udayavani, Nov 30, 2018, 6:25 AM IST
ಹೈದರಾಬಾದ್: ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಮಗುವನ್ನು ನೋಡಲು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಹೈದರಾಬಾದ್ನಲ್ಲಿರುವ ಸಾನಿಯಾ ನಿವಾಸಕ್ಕೆ ತೆರಳಿದ್ದರು.
ಈ ವೇಳೆ ಸಿಂಧು ಹಾಗೂ ಜೋಶ್ನಾ ಜತೆಗೆ ಚಾಂಪಿಯನ್ ಟೆನಿಸ್ ಆಟಗಾರ್ತಿ ಸೆಲ್ಫಿà ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಸಾನಿಯಾ ತಮ್ಮ ಟ್ವೀಟರ್ ಪ್ರಕಟಿಸಿದ್ದಾರೆ. ಮಾತ್ರವಲ್ಲ ತಮ್ಮ ಮನೆಗೆ ಆಗಮಿಸಿ ಮಗುವನ್ನು ನೋಡಿ ಶುಭ ಹಾರೈಸಿದ ಇಬ್ಬರು ತಾರೆಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇತ್ತೀಚೆಗೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ತಾಯಿಯಾಗಿದ್ದರು.