ಬಂಗಾಳ ಕ್ರಿಕೆಟಿಗೆ ಮತ್ತೆ ಗಂಗೂಲಿಯೇ ಅಧ್ಯಕ್ಷ?

Team Udayavani, Sep 22, 2019, 9:39 PM IST

ಕೋಲ್ಕತಾ: ನೂತನ ಸಂವಿಧಾನವನ್ನು ಅಳವಡಿಸಿಕೊಂಡಿರುವ ಭಾರತೀಯ ಕ್ರಿಕೆಟ್‌ ಸಂಸ್ಥೆಗಳಿಗೆ, ದೇಶಾದ್ಯಂತ ಸೆ. 28ರಂದು ಚುನಾವಣೆ ನಡೆಯಲಿದೆ.

ಬಂಗಾಲ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಅವಿರೋಧವಾಗಿ ಪುನರಾಯ್ಕೆಯಾಗಲು ಸಿದ್ಧವಾಗಿದ್ದಾರೆ. ಆದರೆ ಅವರ ಅಧಿಕಾರಾವಧಿ ಕೇವಲ 10 ತಿಂಗಳು ಮಾತ್ರ!

ಅಂದರೆ, ಮುಂದಿನ ವರ್ಷ ಜುಲೈ ತಿಂಗಳ ವರೆಗೆ ಮಾತ್ರ ಅವರು ಅಧಿಕಾರದಲ್ಲಿರಲು ಸಾಧ್ಯ. ಇದಕ್ಕೆ ಕಾರಣ, ಭಾರತೀಯ ಕ್ರಿಕೆಟ್‌ ಸಂವಿಧಾನದಲ್ಲಿ ಆಗಿರುವ ಆಮೂಲಾಗ್ರ ಬದಲಾವಣೆ. ಸತತ 6 ವರ್ಷ ಅಧಿಕಾರಾವಧಿ ಅನಂತರ 3 ವರ್ಷ ಕಡ್ಡಾಯ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. 2020 ಜುಲೈ ವೇಳೆಗೆ ಬಂಗಾಲ ಕ್ರಿಕೆಟ್‌ ಸಂಸ್ಥೆಗೆ ಅಧ್ಯಕ್ಷರಾಗಿ ಗಂಗೂಲಿ 6 ವರ್ಷ ಪೂರೈಸಲಿದ್ದಾರೆ. ಮುಂದೆ ಅವರು ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು!

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ