Udayavni Special

ಲಕ್ಷ್ಮಣ್‌ಗೂ ಶರ್ಟ್‌ ತೆಗೆಯುವಂತೆ ಸೂಚಿಸಿದ್ದ  ಸೌರವ್‌ ಗಂಗೂಲಿ!


Team Udayavani, Jul 28, 2018, 6:00 AM IST

23.jpg

ಕೋಲ್ಕತಾ: “ಕ್ರಿಕೆಟಿನ ರಾಜಾಂಗಣ ಲಾರ್ಡ್ಸ್‌’ನಲ್ಲಿ ಭಾರತದ ಪಾಲಿಗೆ ಎರಡು ನೆನಪುಗಳು ಸದಾ ಹಸುರು. ಒಂದು, 1983ರಲ್ಲಿ ಕಪಿಲ್‌ದೇವ್‌ ಬಳಗ ಏಕದಿನ ವಿಶ್ವಕಪ್‌ ಚಾಂಪಿಯನ್‌ ಎನಿಸಿಕೊಂಡು ಪ್ರುಡೆನ್ಶಿಯಲ್‌ ಟ್ರೋಫಿ ಎತ್ತಿಹಿಡಿದ್ದದ್ದು; ಇನ್ನೊಂದು, 2002ರ ನಾಟ್‌ವೆಸ್ಟ್‌ ಟ್ರೋಫಿ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 326 ರನ್‌ ಬೆನ್ನಟ್ಟಿ ಗೆದ್ದ ಬಳಿಕ ನಾಯಕ ಸೌರವ್‌ ಗಂಗೂಲಿ ಅಂಗಿ ಕಳಚಿ ಸಂಭ್ರಮಿಸಿದ್ದು!

16 ವರ್ಷಗಳ ಹಿಂದೆ ಜುಲೈನಲ್ಲೇ (ಜು. 13) ಭಾರತ ನಾಟ್‌ವೆಸ್ಟ್‌ ಚಾಂಪಿಯನ್‌ ಆಗಿ ಮೂಡಿ ಬಂದಿತ್ತು. ಈ ಸಂಭ್ರಮದ ವೇಳೆ ಗಂಗೂಲಿ ಟೀಮ್‌ ಇಂಡಿಯಾದ ಜೆರ್ಸಿಯನ್ನು ತೆಗೆದು ಸಂಭ್ರಮಿಸಿದ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಶರ್ಟ್‌ ತೆಗೆಯಬೇಡ ಎಂದಿದ್ದ ಲಕ್ಷ್ಮಣ್‌
“ಬ್ರೇಕ್‌ಫಾಸ್ಟ್‌ ವಿತ್‌ ಚಾಂಪಿಯನ್ಸ್‌’ ವೆಬ್‌ ಸರಣಿಯಲ್ಲಿ ಸೌರವ್‌ ಗಂಗೂಲಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ; ತಾನು ವಿವಿಎಸ್‌ ಲಕ್ಷ್ಮಣ್‌ಗೂ ಅಂಗಿ ಕಳಚುವಂತೆ ಸೂಚಿಸಿದ್ದೆ ಎಂದಿದ್ದಾರೆ. “ಘಟನೆಯ ವೇಳೆ ಲಕ್ಷ್ಮಣ್‌ ನನ್ನ ಎಡ ಭಾಗದಲ್ಲಿದ್ದರು, ಹರ್ಭಜನ್‌ ನನ್ನ ಹಿಂದಿದ್ದರು. ನಾನು ಶರ್ಟ್‌ ತೆಗೆಯುತ್ತಿರುವುದನ್ನು ಕಂಡು ದಂಗಾದ ಲಕ್ಷ್ಮಣ್‌, “ಬೇಡ, ಹಾಗೆ ಮಾಡ ಬೇಡ…’ ಎಂದು ನನಗೆ ಹೇಳಲು ಪ್ರಯತ್ನಿಸು ತ್ತಿದ್ದರು. ನಾನು ಅಂಗಿ ತೆಗೆದ ಬಳಿಕ ಅವರು “ನಾನೀಗ ಏನು ಮಾಡಬೇಕು?’ ಎಂದು ಕೇಳಿ ದರು. ನೀವೂ ಶರ್ಟ್‌ ತೆಗೆದುಬಿಡಿ ಎಂದು ನಾನು ಲಕ್ಷ್ಮಣ್‌ಗೆ ಹೇಳಿದೆ….’ ಎಂಬುದಾಗಿ ಗಂಗೂಲಿ ಅಂದಿನ ವಿದ್ಯಮಾನವನ್ನು ವಿವರಿಸಿದರು.

“ಹೀಗೆ ಅಂಗಿ ತೆಗೆದು ಸಂಭ್ರಮಿಸಬೇಕೆಂಬ ಯೋಚನೆ ನನಗೆ ಹೊಳೆದದ್ದೇ ಅಂತಿಮ ಕ್ಷಣದಲ್ಲಿ. ಇದಕ್ಕೂ ಹಿಂದಿನ ಭಾರತ ಪ್ರವಾಸದ ವೇಳೆ ಇಂಗ್ಲೆಂಡ್‌ ಮುಂಬಯಿ ಏಕದಿನ ಗೆದ್ದು ಸರಣಿಯನ್ನು 3-3 ಸಮಬಲಕ್ಕೆ ತಂದಾಗ ಆ್ಯಂಡ್ರೂé ಫ್ಲಿಂಟಾಫ್ ವಾಂಖೇಡೆಯಲ್ಲಿ ಇದೇ ರೀತಿ ವರ್ತಿಸಿದ್ದರು. ನಾನೇಕೆ ಲಾರ್ಡ್ಸ್‌ನಲ್ಲಿ ಇದನ್ನು ಪುನರಾವರ್ತಿಸಬಾರದು ಎಂದು ತೀರ್ಮಾನಿಸಿದೆ…’ ಎಂದು ಈ ಘಟನೆಯ ಹಿಂದಿನ “ಪ್ರೇರಣೆ’ಯನ್ನು ತೆರೆದಿಟ್ಟರು.

ಮಗಳೂ ಇದನ್ನು ಪ್ರಶ್ನಿಸಿದ್ದಳು!
“ಈ ವರ್ತನೆಯಿಂದ ನನಗೂ ನಾಚಿಕೆಯಾ ಗಿದೆ. ಒಮ್ಮೆ ನನ್ನ ಮಗಳು ಕೂಡ ಇದನ್ನು ಪ್ರಶ್ನಿಸಿದ್ದಳು-ನೀನೇಕೆ ಹಾಗೆ ಮಾಡಿದೆ ಅಪ್ಪ, ಕ್ರಿಕೆಟ್‌ನಲ್ಲಿ ಹೀಗೆಲ್ಲ ಮಾಡಲೇಬೇಕೇ? ಎಂದು ಕೇಳಿದ್ದಳು. ಇಲ್ಲ, ಅರಿವಿಲ್ಲದೆ ಹೀಗೆ ಮಾಡಿದೆ ಎಂದು ಉತ್ತರಿಸಿದ್ದೆ. ಕೆಲವೊಮ್ಮೆ ಬದುಕಿನಲ್ಲಿ ನಮ್ಮ ಮೇಲೆಯೇ ನಮಗೆ ನಿಯಂತ್ರಣ ಇರುವುದಿಲ್ಲ. ಆಗ ಇಂಥದ್ದೆಲ್ಲ ಸಂಭವಿಸುತ್ತದೆ’ ಎಂದು ಗಂಗೂಲಿ ಕಾರ್ಯಕ್ರಮದಲ್ಲಿ ಹೇಳಿದರು.

ಟಾಪ್ ನ್ಯೂಸ್

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

gfjfytfyjt

ಬೆಳಗಾವಿ:  ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾವು

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

gfgrr

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟಿ20 ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರಿಯಬೇಕಿತ್ತು: ಶಾರ್ದೂಲ್ ಠಾಕೂರ್

ಟಿ20 ನಾಯಕನಾಗಿ ವಿರಾಟ್ ಕೊಹ್ಲಿ ಮುಂದುವರಿಯಬೇಕಿತ್ತು: ಶಾರ್ದೂಲ್ ಠಾಕೂರ್

ಮುಖ್ಯ ಕೋಚ್ ಕೆಲಸದಿಂದ ತೃಪ್ತಿಯಾಗಿದೆ, ಆದರೆ ಅಲ್ಪ ಬೇಸರವೂ ಇದೆ: ರವಿ ಶಾಸ್ತ್ರಿ

ಮುಖ್ಯ ಕೋಚ್ ಕೆಲಸದಿಂದ ತೃಪ್ತಿಯಾಗಿದೆ, ಆದರೆ ಅಲ್ಪ ಬೇಸರವೂ ಇದೆ: ರವಿ ಶಾಸ್ತ್ರಿ

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ: ಮತ್ತೆ ಕನ್ನಡಿಗನಿಗೆ ಆಫರ್ ನೀಡಿದ ಬಿಸಿಸಿಐ

ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ: ಮತ್ತೆ ಕನ್ನಡಿಗನಿಗೆ ಆಫರ್ ನೀಡಿದ ಬಿಸಿಸಿಐ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಪಂದ್ಯ ನಡೆಯಲು ಕೆಲವೇ ಗಂಟೆ ಬಾಕಿ : ನ್ಯೂಜಿಲ್ಯಾಂಡಿನ ಪಾಕ್‌ ಪ್ರವಾಸ ದಿಢೀರ್‌ ರದ್ದು!

ಪಂದ್ಯ ನಡೆಯಲು ಕೆಲವೇ ಗಂಟೆ ಬಾಕಿ : ನ್ಯೂಜಿಲ್ಯಾಂಡಿನ ಪಾಕ್‌ ಪ್ರವಾಸ ದಿಢೀರ್‌ ರದ್ದು!

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

xfser4er4

ಪಾಕ್ ಪಿಎಂ ಈತನಿಗೆ ಗುಡ್ ಫ್ರೆಂಡ್|ಸಿಎಂ ಸ್ಥಾನಕ್ಕೆ ಸಿಧು ಆಯ್ಕೆಗೆ ನನ್ನ ವಿರೋಧ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.