ದಕ್ಷಿಣ ಆಫ್ರಿಕಾ ಆಲ್ರೌಂಡರ್ ಫರ್ಹಾನ್ ಬೆಹರ್ಡಿಯನ್ ವಿದಾಯ
Team Udayavani, Dec 28, 2022, 12:33 AM IST
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಫರ್ಹಾನ್ ಬೆಹರ್ಡಿಯನ್ ಮಂಗಳವಾರ ಕ್ರಿಕೆಟ್ ಬಾಳ್ವೆಗೆ ವಿದಾಯ ಘೋಷಿಸಿದರು.
39 ವರ್ಷದ ಬೆಹರ್ಡಿಯನ್ ದಕ್ಷಿಣ ಆಫ್ರಿಕಾ ಪರ 59 ಏಕದಿನ ಹಾಗೂ 38 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 1,074 ರನ್ ಹಾಗೂ 14 ವಿಕೆಟ್, ಟಿ20ಯಲ್ಲಿ 518 ರನ್ ಹಾಗೂ 3 ವಿಕೆಟ್ ಸಂಪಾದಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಕುಟುಂಬದವರಿಗೆ, ಮಿತ್ರರಿಗೆ, ಎಲ್ಲ ತರಬೇತುದಾರರಿಗೆ, ಸಹಾಯಕ ಸಿಬಂದಿಗೆ, ಸಹ ಆಟಗಾರರಿಗೆ ಹಾಗೂ ಟೈಟಾನ್ಸ್ ತಂಡಕ್ಕೆ ಬೆಹದೀìನ್ ಕೃತಜ್ಞತೆ ಸಲ್ಲಿಸಿದರು.