ನ್ಯೂಜಿಲ್ಯಾಂಡ್ ವಿರುದ್ಧ198 ರನ್ನುಗಳಿಂದ ಗೆದ್ದ ದಕ್ಷಿಣ ಆಫ್ರಿಕಾ
Team Udayavani, Mar 1, 2022, 11:13 PM IST
ಕ್ರೈಸ್ಟ್ಚರ್ಚ್: ಆತಿಥೇಯ ನ್ಯೂಜಿಲ್ಯಾಂಡನ್ನು 198 ರನ್ನುಗಳ ಭಾರೀ ಅಂತರದಿಂದ ಮಣಿಸಿದ ದಕ್ಷಿಣ ಆಫ್ರಿಕಾ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಸಮಬಲದಲ್ಲಿ ಮುಗಿಸಿದೆ. ಇದರೊಂದಿಗೆ ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಸೋಲದ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದೆ.
ಗೆಲುವಿಗೆ 426 ರನ್ ಗುರಿ ಪಡೆದಿದ್ದ ನ್ಯೂಜಿಲ್ಯಾಂಡ್ 4ನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 94 ರನ್ ಗಳಿಸಿ ಸೋಲಿನತ್ತ ಮುಖ ಮಾಡಿತ್ತು. ಅಂತಿಮ ದಿನವಾದ ಮಂಗಳವಾರ 227 ರನ್ನುಗಳಿಗೆ ಆಲೌಟ್ ಆಯಿತು. ಇಲ್ಲೇ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಸೋಲನುಭವಿಸಿತ್ತು.
60 ರನ್ ಮಾಡಿ ಆಡುತ್ತಿದ್ದ ಡೇವನ್ ಕಾನ್ವೆ 92ಕ್ಕೆ ಔಟಾಗಿ ಶತಕವೊಂದನ್ನು ಕಳೆದುಕೊಂಡರು. 269 ನಿಮಿಷಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡ ಅವರು 188 ಎಸೆತಗಳಿಗೆ ಜವಾಬಿತ್ತರು; 13 ಬೌಂಡರಿ ಬಾರಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-364 ಮತ್ತು 9 ವಿಕೆಟಿಗೆ 354 ಡಿಕ್ಲೇರ್. ನ್ಯೂಜಿಲ್ಯಾಂಡ್-293 ಮತ್ತು 227 (ಕಾನ್ವೆ 92, ಬ್ಲಿಂಡೆಲ್ 44, ರಬಾಡ 46ಕ್ಕೆ 3, ಜಾನ್ಸೆನ್ 63ಕ್ಕೆ 3, ಮಹಾರಾಜ್ 75ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Archery World Cup: ಭಾರತದ ರಿಕರ್ವ್ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ
IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್ಗಳ ಅಮೋಘ ಜಯ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್