Sri Lanka ವಿರುದ್ಧ ಜಿಂಬಾಬ್ವೆ ದಿಕ್ಕಾಪಾಲು: 7 ವಿಕೆಟ್ ಕಬಳಿಸಿದ ವನಿಂದು ಹಸರಂಗಾ
Team Udayavani, Jan 11, 2024, 10:55 PM IST
ಕೊಲಂಬೊ: ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಶ್ರೀಲಂಕಾ ಎಂಟು ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ.
ಕೊಲಂಬೊದಲ್ಲಿ ಮಳೆಯು ನಿರಂತರ ಅಡಚಣೆಯಿಂದಾಗಿ ಪಂದ್ಯವನ್ನು 27 ಓವರ್ಗಳಿಗೆ ಇಳಿಸಲಾಯಿತು. 6 ತಿಂಗಳ ಅಂತರದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ವನಿಂದು ಹಸರಂಗಾ ಅವರು ಏಳು ವಿಕೆಟ್ಗಳ ಸಾಧನೆ ಮೂಲಕ ಗಮನ ಸೆಳೆದರು.
ಕೇವಲ 96 ರನ್ಗಳಿಗೆ ಜಿಂಬಾಬ್ವೆಯನ್ನು ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. 19ಕ್ಕೆ ಏಳು ವಿಕೆಟ್ಗಳನ್ನು ಕಬಳಿಸಿದರು. ನಂತರ ನಾಯಕ ಕುಸಾಲ್ ಮೆಂಡಿಸ್ 51 ರಲ್ಲಿ 66* ರನ್ ಕೊಡುಗೆ ನೀಡಿ ಸುಲಭ ಜಯ ದಾಖಲಿಸಿ 2-0 ಅಂತರದಿಂದ ಸರಣಿಯನ್ನು ವಶ ಪಡಿಸಿಕೊಂಡರು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಸ್ಕೋರ್ ಪಟ್ಟಿ
ಜಿಂಬಾಬ್ವೆ96 (22.5)
ಶ್ರೀಲಂಕಾ 97/2 (16.4)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್