ಕೆರಿಬಿಯನ್ ಲೀಗ್: ಶಕಿಬ್ ಬದಲು ಸ್ಮಿತ್
Team Udayavani, Jul 26, 2018, 6:00 AM IST
ಕಿಂಗ್ಸ್ಟನ್: ಆಸ್ಟ್ರೇಲಿಯದ ನಿಷೇಧಿತ ಕ್ರಿಕೆಟಿಗ ಸ್ಟೀವ್ ಸ್ಮಿತ್ ಅವರಿಗೆ “ಕೆರಿಬಿಯನ್ ಪ್ರೀಮಿಯರ್ ಲೀಗ್’ (ಸಿಪಿಎಲ್) ಪಂದ್ಯಾವಳಿಯ ಬಾಗಿಲು ತೆರೆದಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಈ ಕೂಟದಲ್ಲಿ ಅವರು “ಬಾರ್ಬಡಾಸ್ ಟ್ರೈಡೆಂಟ್ಸ್’ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ ಸಿಪಿಎಲ್ ಕೂಟ ದಿಂದ ಹಿಂದೆ ಸರಿದುದರಿಂದ ಬದಲಿ ಆಟಗಾರನಾಗಿ ಸ್ಟೀವ್ ಸ್ಮಿತ್ ಅವರನ್ನು ಆರಿಸಲಾಗಿದೆ. ನಿಷೇಧಿತ ಅವಧಿಯಲ್ಲಿ ಸ್ಮಿತ್ “ಗ್ಲೋಬಲ್ ಟಿ20 ಕೆನಡ ಲೀಗ್’ ಪಂದ್ಯಾವಳಿಯಲ್ಲೂ ಆಡಿದ್ದರು.
“ಶಕಿಬ್ ಹಿಂದೆ ಸರಿದದ್ದು ದೊಡ್ಡ ನಷ್ಟ. ಆದರೆ ವಿಶ್ವ ದರ್ಜೆಯ ಕ್ರಿಕೆಟಿಗ ಸ್ಟೀವನ್ ಸ್ಮಿತ್ ಲಭಿಸಿರುವುದು ಅಷ್ಟೇ ಸಂತಸದ ಸಂಗತಿ ಎಂದು ಟ್ರೈಡೆಂಟ್ಸ್ ಕೋಚ್ ರಾಬಿನ್ ಸಿಂಗ್ ಹೇಳಿದ್ದಾರೆ.