ಸ್ಟ್ರಾಂಜಾ ಮೆಮೋರಿಯಲ್ ಬಾಕ್ಸಿಂಗ್:ಎಂಟರ ಸುತ್ತಿಗೆ ಸೋನಿಯಾ, ಲೌಲಿನಾ
Team Udayavani, Feb 16, 2019, 12:30 AM IST
ಹೊಸದಿಲ್ಲಿ: ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ “ಸ್ಟ್ರಾಂಜಾ ಮೆಮೋರಿಯಲ್ ಬಾಕ್ಸಿಂಗ್’ ಕೂಟದಲ್ಲಿ ಭಾರತದ ವನಿತೆಯರು ಓಟ ಮುಂದು ವರಿಸಿದರೆ, ಪುರುಷರು ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ವನಿತೆಯರ ಮುಖಾ ಮುಖಿಯಲ್ಲಿ ಸೋನಿಯಾ ಲಾಥರ್, ಲೌಲಿನಾ ಬೊರ್ಗೊಹೈನ್ ಮತ್ತು ಪಿಲಾವೊ ಬಸುಮತರಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಗುರುವಾರ ರಾತ್ರಿ ನಡೆದ 57 ಕೆಜಿ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸೋನಿಯಾ ಲಾಥರ್ ಸರ್ಬಿಯಾದ ಜೆಲೆನಾ ಝೆಕಿಕ್ ಅವರನ್ನು 5-0 ಅಂಕಗಳ ಅಂತರದಿಂದ ಸೋಲಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಭಾರತೀಯಳ ಎದುರಾಳಿ ಅಮೆರಿಕದ ಯಾರಿಸೆಲ್ ರಮಿರೆಜ್.
69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಲೌಲಿನಾ ಬೊರ್ಗೊಹೈನ್ ಆಸ್ಟ್ರೇಲಿಯದ ಜೆಸ್ಸಿಕಾ ಮೆಸ್ಸಿನಾ ವಿರುದ್ಧ ಗೆಲುವು ದಾಖಲಿಸಿದರು. ಲೌಲಿನಾ ಕಳೆದ ವರ್ಷದ ಇಂಡಿಯನ್ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಹಿರಿಮೆ ಹೊಂದಿದ್ದಾರೆ. 64 ಕೆಜಿ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ಪಿಲಾವೊ ಬಸುಮತರಿ ಸ್ಥಳೀಯ ಬಾಕ್ಸರ್ ಮೆಲಿಸ್ ಯೊನುಜೋವಾ ಅವರಿಂದ ಸ್ವಲ್ಪ ಪೈಪೋಟಿ ಎದುರಿಸಿದರೂ 3-2 ಅಂಕಗಳಿಂದ ಜಯ ಕಾಣುವಲ್ಲಿ ಯಶಸ್ವಿಯಾದರು.
ಪುರುಷ ಬಾಕ್ಸರ್ಗಳಿಂದ ನಿರಾಸೆ
ಪುರುಷರ 69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮನ್ದೀಪ್ ಜಂಗ್ರಾ ಉಕ್ರೇನ್ನ ವಿಕ್ಟರ್ ಪೆಟ್ರೋವ್ ವಿರುದ್ಧ 0-5 ಅಂಕಗಳ ಅಂತರದಿಂದ ಸೋತರು. 81 ಕೆಜಿ ವಿಭಾಗದಲ್ಲಿ ಹರ್ಷ್ ಲಾಕ್ರ ಅಜರ್ಬೈಜಾನಿನ ರವೂಫ್ ರಹಿಮೋವ್ ವಿರುದ್ಧ ಮುಗ್ಗರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್