ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತವನ್ನು ಮಣಿಸಿದ ಮಲೇಶ್ಯ

Team Udayavani, May 22, 2019, 10:28 AM IST

ನಾನ್ನಿಂಗ್‌ (ಚೀನ): ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಗ್ರೂಪ್‌ 1ಡಿ ಪಂದ್ಯದಲ್ಲಿ ಭಾರತ ಯುವ ಮಲೇಶ್ಯ ತಂಡದ ವಿರುದ್ಧ ಆಘಾತಕಾರಿ ಸೋಲುಂಡಿದೆ. ಮಂಗಳವಾರದ ಮುಖಾಮುಖೀ ಯಲ್ಲಿ ಮಲೇಶ್ಯ 3-2 ಅಂತರದಿಂದ ಭಾರತವನ್ನು ಮಣಿಸಿತು.

ಇದರಿಂದ ಭಾರತದ ನಾಕೌಟ್‌ ಪ್ರವೇಶಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಬುಧವಾರದ ಪಂದ್ಯದಲ್ಲಿ ಭಾರತ ಆತಿಥೇಯ ಚೀನವನ್ನು ಎದು ರಿಸಬೇಕಿದೆ. ಚೀನ ತನ್ನ ಮೊದಲ ಸ್ಪರ್ಧೆಯಲ್ಲಿ ಮಲೇಶ್ಯಕ್ಕೆ ಸೋಲುಣಿಸಿತ್ತು.

ಗೆಲುವಿನ ಆರಂಭ
ಆರಂಭದ ಮಿಕ್ಸೆಡ್‌ ಡಬಲ್ಸ್‌ ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಅಶ್ವಿ‌ನಿ ಪೊನ್ನಪ್ಪ ಜೋಡಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿ ಯಾಗಿತ್ತು. ಆದರೆ ಪುರುಷರ ಸಿಂಗಲ್ಸ್‌ ನಲ್ಲಿ ಕೆ. ಶ್ರೀಕಾಂತ್‌ ಬದಲು ಸಮೀರ್‌ ವರ್ಮ ಅವರನ್ನು ಕಣಕ್ಕಿಳಿಸಿದ್ದು ದುಬಾರಿಯಾಗಿ ಪರಿಣ ಮಿಸಿತು. ವರ್ಮ ಅವರನ್ನು ಲೀ ಜೀ ಜಿಯ 21-13, 21-15 ಅಂತರದಿಂದ ಹಿಮ್ಮೆಟ್ಟಿಸಿದರು.

ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು 21-12, 21-8ರಿಂದ ಗೋಹ್‌ ಜಿನ್‌ ವೀ ಅವರನ್ನು ಮಣಿಸಿ ಭಾರತಕ್ಕೆ 2-1 ಮುನ್ನಡೆ ಕೊಡಿಸಿದರು. ಆದರೆ ಪುರುಷರ ಡಬಲ್ಸ್‌ನಲ್ಲಿ ಮುನು ಅತ್ರಿ-ಬಿ. ಸುಮೀತ್‌ ರೆಡ್ಡಿ ಜೋಡಿಗೆ ಗೆಲುವು ಮರೀಚಿಕೆಯಾಯಿತು. ಸ್ಪರ್ಧೆ 2-2 ಸಮಬಲಕ್ಕೆ ಬಂತು.

ವನಿತಾ ಡಬಲ್ಸ್‌ ಸೋಲು
ವನಿತಾ ಡಬಲ್ಸ್‌ ವಿಭಾಗದ ನಿರ್ಣಾಯಕ ಪಂದ್ಯದಲ್ಲಿ ಅಶ್ವಿ‌ನಿ ಪೊನ್ನಪ್ಪ-ಎನ್‌. ಸಿಕ್ಕಿ ರೆಡ್ಡಿ ವಿಶ್ವದ 13ನೇ ರ್‍ಯಾಂಕಿಂಗ್‌ ಜೋಡಿಯಾದ ಚೌ ಮೀ ಕುವಾನ್‌-ಲೀ ಮೆಂಗ್‌ ಯೀನ್‌ ಕೈಯಲ್ಲಿ 21-11, 21-19 ಅಂತರದ ಹೊಡೆತ ಅನುಭವಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ