ಬಾಲಿ ಬುಡಾಂಗ್ ಓಪನ್ ಇಂಟರ್ನ್ಯಾಷನಲ್ ಚಾಂಪಿಯನ್ಶಿಪ್ ಗೆದ್ದ ಸುಜಲ್ ಜೆ ಶೆಟ್ಟಿ
Team Udayavani, Oct 26, 2023, 1:02 PM IST
ಬೆಂಗಳೂರು: ಅಕ್ಟೋಬರ್ 19 ರಿಂದ 23 ರವರೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ (ಬಾಲಿ ಬುಡಾಂಗ್ ಓಪನ್ ಇಂಟರ್ನ್ಯಾಷನಲ್ ಚಾಂಪಿಯನ್ಶಿಪ್) ನಲ್ಲಿ ಕರ್ನಾಟಕದ ಸುಜಲ್ ಜೆ ಶೆಟ್ಟಿ ಚಿನ್ನದ ಪದಕ ಗೆದ್ದಿದ್ದಾರೆ.
ಜಯಕರ್ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ಅವರ ಪುತ್ರಿಯಾಗಿರುವ ಸುಜಲ್ ಜೆ ಶೆಟ್ಟಿ ಅವರು ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ನ ವಿದ್ಯಾರ್ಥಿನಿ ಮತ್ತು ಬಂಟ್ಸ್ ಸಂಘದ ಆರ್ಎನ್ಎಸ್ ವಿದ್ಯಾ ನಿಕೇತನ ಬೆಂಗಳೂರಿನ ಮಾಜಿ ವಿದ್ಯಾರ್ಥಿನಿಯಾಗಿದ್ದಾರೆ.