ಪೊಲೀಸರಿಂದ ಸಮನ್ಸ್ : ಕೋಲ್ಕತದಲ್ಲೇ ಉಳಿದ ಮೊಹಮ್ಮದ್ ಶಮಿ
Team Udayavani, Apr 17, 2018, 5:37 PM IST
ಕೋಲ್ಕತ : ತನ್ನ ಪತ್ನಿಯಿಂದ ಕೌಟುಂಬಿಕ ಹಿಂಸೆ ಮತ್ತು ವಿವಾಹೇತರ ಸಂಬಂಧಗಳ ಆರೋಪಕ್ಕೆ ಗುರಿಯಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಕೋಲ್ಕತ ಪೊಲೀಸರು ಪ್ರಶ್ನಿಸಿಲು ಕರೆಸಿಕೊಂಡಿರುವ ಕಾರಣ ಶಮಿ ಇಂದು ಮಂಗಳವಾರ ಇಲ್ಲೇ ಉಳಿಯುವುದು ಅನಿವಾರ್ಯವಾಯಿತು. ಅವರ ಐಪಿಎಲ್ ತಂಡ ಇಲ್ಲಿಂದ ಬೆಂಗಳೂರಿಗೆ ನಿರ್ಗಮಿಸಿತು ಎಂದು ವರದಿಗಳು ತಿಳಿಸಿವೆ.
ನಿನ್ನೆ ಸೋಮವಾರ ರಾತ್ರಿ ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ ನೈಟ್ ರೈಡರ್ಸ್ ಎದುರಿನ ಐಪಿಎಲ್ ಪಂದ್ಯವನ್ನು ಆಡಿದ ಡೆಲ್ಲಿ ಡೇರ್ಡೆವಿಲ್ಸ್ ತಂಡದ ವೇಗದ ಎಸೆಗಾರ ಶಮಿ ಅವರನ್ನು ಪೊಲೀಸರು ಕರೆಸಿಕೊಂಡಿರುವ ಕಾರಣ ಶಮಿ ಇಲ್ಲೇ ಉಳಿದಿದ್ದಾರೆ. ಎಪ್ರಿಲ್ 21ರಂದು ಬೆಂಗಳೂರಿನಲ್ಲಿ ರಾಯಲ್ ಚ್ಯಾಲೆಂಜರ್ಸ್ ತಂಡದೆದುರಿನ ಪಂದ್ಯವನ್ನು ಆಡಲು ಶಮಿ ಅವರ ಡಿಡಿ ತಂಡ ಇಲ್ಲಿಂದ ಬೆಂಗಳೂರಿಗೆ ನಿರ್ಗಮಿಸಿದೆ ಎಂದು ಬಂಗಾಲ ಕ್ರಿಕೆಟ್ ಅಸೋಸಿಯೇಶನ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.