ಜಾವೆಲಿನ್ ಪ್ರಶಸ್ತಿ ಉಳಿಸಿಕೊಂಡ ಸುಂದರ್ ಪ್ಯಾರಾಲಿಂಪಿಕ್ಸ್ಗೆ
Team Udayavani, Nov 12, 2019, 1:06 AM IST
ದುಬಾೖ: ಭುಜದ ನೋವಿನ ಹೊರತಾಗಿಯೂ ವಿಶ್ವ ಪ್ಯಾರಾ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಉಳಿಸಿಕೊಂಡ ಸುಂದರ್ ಸಿಂಗ್ ಗುರ್ಜರ್ ಮುಂದಿನ ವರ್ಷದ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಅವರು ಪುರುಷರ ಎಫ್46 ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.
ಗುರ್ಜರ್ ಅವರೊಂದಿಗೆ ಕಂಚು ಗೆದ್ದ ಅಜಿತ್ ಸಿಂಗ್ ಮತ್ತು ರಿಂಕು ಕೂಡ ಪ್ಯಾರಾಲಿಂಪಿಕ್ಸ್ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು.
ಗುರ್ಜರ್ ಪ್ರಸಕ್ತ ಋತುವಿನ ಶ್ರೇಷ್ಠ ಸಾಧನೆಯೊಂದಿಗೆ (61.22 ಮೀ.) ಚಿನ್ನಕ್ಕೆ ಕೊರಳೊಡ್ಡಿದರು. ಅಜಿತ್ ಸಿಂಗ್ 59.46 ಮೀ. ಸಾಧನೆಯೊಂದಿಗೆ ತೃತೀಯ ಸ್ಥಾನಿಯಾದರೆ, ರಿಂಕು 4ನೇ ಸ್ಥಾನ ಪಡೆದರು. ಈ ಕೂಟದಲ್ಲಿ ಭಾರತ ಒಟ್ಟು 2 ಚಿನ್ನ, 1 ಬೆಳ್ಳಿ , 1 ಕಂಚಿನ ಪದಕಮ ಜಯಿಸಿದೆ.
2017ರ ಲಂಡನ್ ವಿಶ್ವ ಚಾಂಪಿಯನ್ಶಿಪ್ನಲ್ಲೂ ಸುಂದರ್ ಸಿಂಗ್ ಗುರ್ಜರ್ ಬಂಗಾರ ಜಯಿಸಿದ್ದರು. ಇದರೊಂದಿಗೆ ಈ ಕೂಟದಲ್ಲಿ ಪ್ರಶಸ್ತಿ ಉಳಿಸಿಕೊಂಡ ಭಾರತದ 2ನೇ ಸಾಧಕನಾಗಿ ಮೂಡಿಬಂದರು. ದೇವೇಂದ್ರ ಜಜಾರಿಯ ಮೊದಲಿಗ. ಅವರು 2013ರ ಲಿನ್ ಮತ್ತು 2015ರ ದೋಹಾ ಕೂಟಗಳಲ್ಲಿ ಚಿನ್ನ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…