ಮತ್ತೆ ಅಕ್ರಮ ಬೌಲಿಂಗ್ ಸುಳಿಗೆ ಸುನೀಲ್ ನಾರಾಯಣ್
Team Udayavani, Mar 17, 2018, 6:00 AM IST
ನವದೆಹಲಿ: ಶ್ರೀಲಂಕಾ ವಿರುದ್ಧ 2016ರಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಅಕ್ರಮ ಬೌಲಿಂಗ್ ಶೈಲಿ ಸುಳಿಗೆ ಸಿಕ್ಕಿಬಿದ್ದು ಆ ವರ್ಷದ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕೂಟದಿಂದ ಹೊರಬೀಳುವ ಆತಂಕಕ್ಕೆ ಒಳಗಾಗಿ ಬಳಿಕ ಬಚಾವ್ ಆಗಿದ್ದ ವಿಂಡೀಸ್ನ ಖ್ಯಾತ ಸ್ಪಿನ್ ಬೌಲರ್ ಸುನೀಲ್ ನಾರಾಯಣ್ ಮತ್ತೂಮ್ಮೆ ಅಂತಹುದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್)ನಲ್ಲಿ ಪಾಲ್ಗೊಂಡಿರುವ ವೇಳೆ ಇವರು ಅಕ್ರಮ ಬೌಲಿಂಗ್ ಎಸೆದಿರುವುದು ಗೊತ್ತಾಗಿದೆ. ಇದರಿಂದ ಇವರು 2018ರ ಐಪಿಎಲ್ ಕೂಟವನ್ನು ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ. 2016ರಲ್ಲಿಯೂ ಹೀಗೆ ಆಗಿತ್ತು. ಕೊನೆಗೆ ಇವರನ್ನು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ಬೌಲಿಂಗ್ ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ಸುನೀಲ್ ನಾರಾಯಣ್ ಪಾಸ್ ಆಗಿ ವಾಪಸ್ ಕೆಕೆಆರ್ ತಂಡವನ್ನು ಕೂಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ