T20 ರ್ಯಾಂಕಿಂಗ್; ಅಗ್ರ ಹತ್ತರಲ್ಲಿ ಕಾಣಿಸಿಕೊಂಡ ಅಕ್ಷರ್, ಜೈಸ್ವಾಲ್
Team Udayavani, Jan 17, 2024, 10:13 PM IST
ದುಬಾೖ: ಅಫ್ಘಾನಿಸ್ಥಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ ನೂತನ ಟಿ20 ರ್ಯಾಂಕಿಂಗ್ ಯಾದಿಯ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಕ್ಷರ್ ಪಟೇಲ್ 5ನೇ ಮತ್ತು ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಯಶಸ್ವಿ ಜೈಸ್ವಾಲ್ 6ನೇ ಸ್ಥಾನಿಯಾಗಿದ್ದಾರೆ. ಇಬ್ಬರದೂ ಜೀವನಶ್ರೇಷ್ಠ ರ್ಯಾಂಕಿಂಗ್ ಆಗಿದೆ.
ಅಕ್ಷರ್ ಪಟೇಲ್ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 23ಕ್ಕೆ 2 ಹಾಗೂ 16ಕ್ಕೆ 2 ವಿಕೆಟ್ ಕೆಡವಿದ್ದರು. ಇಂದೋರ್ನಲ್ಲಿ ಪಂದ್ಯಶ್ರೇಷ್ಠ ಗೌರ ವಕ್ಕೂ ಪಾತ್ರರಾಗಿದ್ದರು. ಅಕ್ಷರ್ ಟಿ20 ಆಲ್ರೌಂಡರ್ ರ್ಯಾಂಕಿಂಗ್ ಯಾದಿ ಯಲ್ಲಿ 2 ಸ್ಥಾನ ಪ್ರಗತಿ ಸಾಧಿಸಿದ್ದು, 16ನೇ ಸ್ಥಾನದಲ್ಲಿದ್ದಾರೆ.
ಯಶಸ್ವಿ ಜೈಸ್ವಾಲ್ ಇಂದೋರ್ ಟಿ20 ಪಂದ್ಯದಲ್ಲಿ 34 ಎಸೆತಗಳಿಂದ 68 ರನ್ ಬಾರಿಸಿದ್ದರು. ಎರಡೂ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದ ಶಿವಂ ದುಬೆ ಅವರದು ಭರ್ಜರಿ ನೆಗೆತ. ಅವರು 265ನೇ ಸ್ಥಾನದಿಂದ 58ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಶುಭಮನ್ ಗಿಲ್ 7 ಸ್ಥಾನ ಮೇಲೇರಿದ್ದು, 60ನೇ ರ್ಯಾಂಕಿಂಗ್ ಹೊಂದಿದ್ದಾರೆ.ಎಡಗೈ ಬೌಲರ್ ಅರ್ಷದೀಪ್ ಸಿಂಗ್ 4 ಸ್ಥಾನ ಮೇಲೇರಿದ್ದು, 21ನೇ ರ್ಯಾಂಕಿಂಗ್ ಗಳಿಸಿದ್ದಾರೆ.