ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ
Team Udayavani, May 22, 2022, 7:20 AM IST
ಮುಂಬಯಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗಾಗಿ ಆಯ್ಕೆ ಸಮಿತಿಯು ರವಿವಾರ ಸಭೆ ಸೇರಿ ಭಾರತೀಯ ತಂಡವನ್ನು ಪ್ರಕಟಿಸಲಿದೆ.
ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ ಉಮ್ರಾನ್ ಮಲಿಕ್, ಮೊಹ್ಸಿನ್ ಖಾನ್ ಅವನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ:ಥಾಯ್ಲೆಂಡ್ ಓಪನ್ ಸೂಪರ್ ಬ್ಯಾಡ್ಮಿಂಟನ್ : ಪಿ.ವಿ. ಸಿಂಧು ಪತನ
ಹಿರಿಯರಾದ ಶಿಖರ್ ಧವನ್, ದಿನೇಶ್ ಕಾರ್ತಿಕ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ. 5 ಪಂದ್ಯಗಳ ಟಿ20 ಸರಣಿ ಜೂ. 9ರಂದು ಆರಂಭವಾಗಲಿದೆ.