ಶಾರ್ದೂಲ್ ‘ಸುಂದರ’ ಆಟ: 336 ರನ್ ಗಳಿಸಿದ ಟೀಂ ಇಂಡಿಯಾ, ಅಲ್ಪ ಹಿನ್ನಡೆ
Team Udayavani, Jan 17, 2021, 12:39 PM IST
ಬ್ರಿಸ್ಬೇನ್: ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 336 ರನ್ ಗಳಿಸಿದೆ. ಆದರೂ 33 ರನ್ ಗಳ ಅಲ್ಪ ಹಿನ್ನಡೆ ಅನುಭವಿಸಿದೆ.
ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಅರ್ಧಶತಕ ಬಾರಿಸಿ ಶತಕದ ಜೊತೆಯಾಟ ಆಡಿದರು. ಠಾಕೂರ್ 67 ರನ್ ಮತ್ತು ಸುಂದರ್ 62 ರನ್ ಗಳಿಸಿದರು.
ರೋಹಿತ್ ಶರ್ಮಾ 44 ರನ್, ಮಯಾಂಕ್ ಅಗರ್ವಾಲ್ 39 ರನ್ ಗಳಿಸಿದರು. ಆಸೀಸ್ ಪರ ಹ್ಯಾಜಲ್ ವುಡ್ ಐದು ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಕಮಿನ್ಸ್ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಲಯಾನ್ ಪಾಲಾಯಿತು.
ಇದನ್ನೂ ಓದಿ:ಗಾಬ್ಬಾದಲ್ಲಿ ದಾಖಲೆ ಬರೆದ ಶಾರ್ದೂಲ್ ಠಾಕೂರ್- ವಾಷಿಂಗ್ಟನ್ ಸುಂದರ್
ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ ಲಬುಶೇನ್ ಶತಕದ ನೆರವಿನಿಂದ 369 ರನ್ ಗಳಿಸಿತ್ತು. ಭಾರತ 336 ರನ್ ಗಳಿಸಿದ್ದು, 33 ರನ್ ಹಿನ್ನಡೆ ಅನುಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್ ಲೀಗ್ ಮುಂದೂಡಿಕೆ
ಮೊಟೆರಾದಲ್ಲಿ ಮುಂದುವರಿದ ವಿಕೆಟ್ ಬೇಟೆ: ಇಂಗ್ಲೆಂಡ್ ಆಲ್ ಔಟ್, ಭಾರತಕ್ಕೂ ಆರಂಭಿಕ ಆಘಾತ
ಪಿಚ್ ನ ಆಟ ಬಲ್ಲವರಾರು..! ಅಂತಿಮ ಟೆಸ್ಟ್ ನಲ್ಲಿ ಟಾಸ್ ಗೆದ್ದ ರೂಟ್: ತಂಡದಲ್ಲಿ 1 ಬದಲಾವಣೆ
ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಕೈರನ್ ಪೊಲಾರ್ಡ್! ಆರು ಬಾಲ್ ಗೆ ಆರು ಸಿಕ್ಸ್ !
ಟೆಸ್ಟ್ ಫಲಿತಾಂಶಕ್ಕಿಂತ ಪಿಚ್ ಕೌತುಕವೇ ಜಾಸ್ತಿ!ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ