ವಿಶ್ವಕಪ್ ಫುಟ್ಬಾಲ್ ಅರ್ಹತಾ ಕೂಟಕ್ಕೆ 26 ಸದಸ್ಯರ ತಂಡ
Team Udayavani, Nov 6, 2019, 11:08 PM IST
ಹೊಸದಿಲ್ಲಿ: 2022ರ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಾಗಿ ಅಫ್ಘಾನಿಸ್ಥಾನ ಮತ್ತು ಒಮಾನ್ ವಿರುದ್ಧ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಗಳಿಗೆ ಭಾರತದ ಕೋಚ್ ಐಗರ್ ಸ್ಟಿಮಾಕ್ 26 ಸದಸ್ಯರ ತಂಡವನ್ನು ಹೆಸರಿಸಿದ್ದಾರೆ. ಈ ಪಂದ್ಯಗಳು ಕ್ರಮವಾಗಿ ನ. 14 ಮತ್ತು 19ರಂದು ದುಶಾನ್ಬೆ (ತಜಿಕಿಸ್ಥಾನ್) ಮತ್ತು ಮಸ್ಕತ್ನಲ್ಲಿ (ಒಮಾನ್) ನಡೆಯಲಿವೆ.
ಫಿಫಾ ಅಂಡರ್-17 ವಿಶ್ವಕಪ್ ಪಂದ್ಯಾವಳಿಯ ವೇಳೆ ಗಮನ ಸೆಳೆದ ಯುವ ಗೋಲ್ಕೀಪರ್ ಧೀರಜ್ ಸಿಂಗ್ ಮೊರಂಥೆಮ್ ಈ ತಂಡದ ಹೊಸಮುಖ. ಇದಕ್ಕೂ ಮುನ್ನ ಕಿರಿಯರ ತಂಡದ ನಾಯಕ ಅಮರ್ಜೀತ್ ಸಿಂಗ್ ಮತ್ತು ಡಿಫೆಂಡರ್ ಅನ್ವರ್ ಅಲಿ ಸೀನಿಯರ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ನಿಖೀಲ್ ಪೂಜಾರಿ, ಸಂದೇಶ್ ಜಿಂಗಾನ್ ಈ ಬಾರಿ ಅವಕಾಶ ಪಡೆದಿಲ್ಲ.