IPL ಅಭ್ಯಾಸ ಆರಂಭಿಸಿದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್
Team Udayavani, Mar 3, 2024, 6:55 AM IST
ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 2024ರ ಐಪಿಎಲ್ ಪಂದ್ಯಾವಳಿಗಾಗಿ ಶನಿವಾರ ಅಭ್ಯಾಸ ಆರಂಭಿಸಿತು. ಭಾರತೀಯ ಆಟಗಾರರ ಮೊದಲ ತಂಡ ಇದರಲ್ಲಿ ಪಾಲ್ಗೊಳ್ಳುತ್ತಿದೆ.
“ಭಾರತೀಯ ಕ್ರಿಕೆಟಿಗರ ಮೊದಲ ತಂಡ ಶುಕ್ರವಾರ ಚೆನ್ನೈಗೆ ಆಗಮಿಸಿದೆ. ಉಳಿದ ಆಟಗಾರರು ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಆಗಮಿಸಲಿದ್ದಾರೆ’ ಎಂಬುದಾಗಿ ತಮಿಳುನಾಡು ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರದ ತಂಡದಲ್ಲಿ ಸಿಮರ್ಜೀತ್ ಸಿಂಗ್, ರಾಜ್ಯವರ್ಧನ್ ಹಂಗಗೇìಕರ್, ಮುಕೇಶ್ ಚೌಧರಿ, ಅಜಯ್ ಮಂಡಲ್ ಮತ್ತು ದೀಪಕ್ ಚಹರ್ ಆಗಮಿಸಿದ್ದಾರೆ. ಆದರೆ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಅವರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಧೋನಿ ಯಾವಾಗ ಬರುತ್ತಾರೆಂಬುದು ಇನ್ನೂ ಖಚಿತಪಟ್ಟಿಲ್ಲ.
ದೀಪಕ್ ಚಹರ್ ಫಿಟ್
ಇವರಲ್ಲಿ ದೀಪಕ್ ಚಹರ್ ಕಳೆದ ಡಿಸೆಂಬರ್ನಿಂದ ಯಾವುದೇ ಕ್ರಿಕೆಟ್ ಪಂದ್ಯವಾಡಿಲ್ಲ. ಫಿಟ್ನೆಸ್ ಸಮಸ್ಯೆ ಹಾಗೂ ತಂದೆಯ ತೀವ್ರ ಅನಾರೋಗ್ಯದ ಕಾರಣ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಿಂದ ನಡುವಲ್ಲೇ ಹಿಂದೆ ಸರಿದರು. ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ದೂರ ಉಳಿದರು. ಬಳಿಕ ಬೆಂಗಳೂರಿನ ಎನ್ಸಿಎಗೆ ತೆರಳಿ ಫಿಟ್ನೆಸ್ ಸಾಬೀತುಪಡಿಸಿದರು. ಇನ್ನೀಗ ಐಪಿಎಲ್ ಆಡಿ ಟಿ20 ವಿಶ್ವಕಪ್ ತಂಡಕ್ಕೆ ಮರಳುವುದು ದೀಪಕ್ ಚಹರ್ ಗುರಿ ಆಗಿದೆ. ಅವರು ಶನಿವಾರವೇ ಅಭ್ಯಾಸಕ್ಕೆ ಇಳಿದರು. ಚೆನ್ನೈ ಮತ್ತು ಆರ್ಸಿಬಿ ಮಾ. 22ರ ಉದ್ಘಾಟನ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ