ಇಂದು ಭಾರತ-ದಕ್ಷಿಣ ಆಫ್ರಿಕಾ ಅಂತಿಮ ಏಕದಿನ


Team Udayavani, Feb 16, 2018, 6:05 AM IST

IND-SA-FINAL.jpg

ಸೆಂಚುರಿಯನ್‌: ಟೆಸ್ಟ್‌ ಸರಣಿ ಸೋತರೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಇದೇ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದ ಭಾರತವೀಗ ಇನ್ನೂ ಒಂದು ಮೆಟ್ಟಿಲು ಮೇಲೇರುವ ಗುರಿಯೊಂದಿಗೆ ಶುಕ್ರವಾರ ಕೊನೆಯ ಸಲ ಅಂಗಳಕ್ಕಿಳಿಯಲಿದೆ. ಸರಣಿಯ 6ನೇ ಹಾಗೂ ಅಂತಿಮ ಏಕದಿನ ಪಂದ್ಯ ಸೆಂಚುರಿಯನ್‌ನಲ್ಲಿ ನಡೆಯಲಿದ್ದು, ಕೊಹ್ಲಿ ಪಡೆ 5ನೇ ಗೆಲುವನ್ನು ಎದುರು ನೋಡುತ್ತಿದೆ.

ಇದು ಪ್ರಸಕ್ತ ಸರಣಿ ವೇಳೆ ಸೆಂಚುರಿಯನ್‌ನಲ್ಲಿ ಆಡಲಾಗುವ 2ನೇ ಪಂದ್ಯ. ಇಲ್ಲಿನ ಮೊದಲ ಮುಖಾಮುಖೀಯನ್ನು ಭಾರತ 177 ಎಸೆತ ಬಾಕಿ ಇರುವಾಗಲೇ 9 ವಿಕೆಟ್‌ಗಳಿಂದ ಗೆದ್ದು 2-0 ಮುನ್ನಡೆ ಸ್ಥಾಪಿಸಿತ್ತು. ಅದು ಸರಣಿಯ ಏಕೈಕ ಡೇ ಮ್ಯಾಚ್‌ ಕೂಡ ಆಗಿತ್ತು. ಶುಕ್ರವಾರದ ಸೆಂಚುರಿಯನ್‌ ಪಂದ್ಯ ಹೊನಲು ಬೆಳಕಿನಲ್ಲಿ ಸಾಗಲಿದೆ.

ಭಾರತ ಈಗ ನಿರಾಳ
ಇನ್ನೊಂದು ಪಂದ್ಯ ಬಾಕಿ ಉಳಿದಿರುವಾಗಲೇ ಮಂಗಳವಾರ ಪೋರ್ಟ್‌ ಎಲಿಜಬೆತ್‌ನಲ್ಲಿ ಜಯಭೇರಿ ಮೊಳಗಿಸಿ ಸರಣಿ ವಶಪಡಿಸಿಕೊಂಡ ಭಾರತವೀಗ ಒತ್ತಡ ಮುಕ್ತ ತಂಡವಾಗಿದೆ. ಜತೆಗೆ ಐಸಿಸಿ ರ್‍ಯಾಂಕಿಂಗ್‌ನಲ್ಲೂ ತನ್ನ ಅಗ್ರಸ್ಥಾನಕ್ಕೆ ಸಿಮೆಂಟ್‌ ಹಾಕಿದೆ. ಹೀಗಾಗಿ 6ನೇ ಪಂದ್ಯವನ್ನು ಹೆಚ್ಚು ನಿರಾಳವಾಗಿ ಆಡಬಹುದು. ಈ ಸರಣಿ ಮುಗಿದ ಬೆನ್ನಲೇ 3 ಪಂದ್ಯಗಳ ಟಿ20 ಸರಣಿ ನಡೆಯಲಿರುವುದರಿಂದ ಟೀಮ್‌ ಇಂಡಿಯಾ ತನ್ನ ಮೀಸಲು ಆಟಗಾರರ ಸಾಮರ್ಥ್ಯವನ್ನು ಪರೀಕ್ಷೆಗೊಳಪಡೆಸಬೇಕಿದೆ. ಹೀಗಾಗಿ ಈ ಸರಣಿಯಲ್ಲಿ ಇನ್ನೂ ಆಡುವ ಅವಕಾಶ ಪಡೆಯದ ಕೆಲವರಾದರೂ ಸೆಂಚುರಿಯನ್‌ನಲ್ಲಿ ಕಣಕ್ಕಿಳಿಯಬಹುದು. ನಾಯಕ ಕೊಹ್ಲಿ ಈಗಾಗಲೇ ಇದರ ಸೂಚನೆ ನೀಡಿದ್ದಾರೆ.

ಯಾರಿಗೆ ಲಭಿಸೀತು ಅವಕಾಶ?
ಮನೀಷ್‌ ಪಾಂಡೆ, ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಶಮಿ, ಶಾದೂìಲ್‌ ಠಾಕೂರ್‌ ಅವರೆಲ್ಲ ಈತನಕ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಇವರಲ್ಲಿ ಯಾರಿಗೆಲ್ಲ ಬಾಗಿಲು ತೆರೆದೀತು ಎಂಬ ಕುತೂಹಲ ಸಹಜ. ಇನ್ನೊಂದೆಡೆ ಟೀಮ್‌ ಇಂಡಿಯಾದಲ್ಲೀಗ ನಿರಂತರವಾಗಿ ಆಡುತ್ತ ಬಂದಿರುವ ಸಾಕಷ್ಟು ಆಟಗಾರರಿದ್ದಾರೆ. ಇವರಲ್ಲಿ ಕೆಲವರಿಗಾದರೂ ಸಣ್ಣದೊಂದು ವಿಶ್ರಾಂತಿ ನೀಡುವ ಅಗತ್ಯವಿದೆ.

ಇವರಲ್ಲಿ ಭುವನೇಶ್ವರ್‌ ಕುಮಾರ್‌ ಹೆಸರು ಮುಂಚೂಣಿಯಲ್ಲಿ ಗೋಚರಿಸುತ್ತದೆ. ಕಳೆದ ಶ್ರೀಲಂಕಾ ಪ್ರವಾಸದ ಬಳಿಕ 19 ಏಕದಿನ, 6 ಟಿ20 ಜತೆಗೆ ಪ್ರಸಕ್ತ ಪ್ರವಾಸದಲ್ಲಿ 2 ಟೆಸ್ಟ್‌ ಪಂದ್ಯಗಳಲ್ಲೂ ಭುವಿ ಕಾಣಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ಜಸ್‌ಪ್ರೀತ್‌ ಬುಮ್ರಾ 20 ಏಕದಿನ ಹಾಗೂ 8 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಜತೆಗೆ ಟೆಸ್ಟ್‌ ಸರಣಿಯಲ್ಲೂ ಮೊದಲ ಸಲ ಭಾರತವನ್ನು ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಬೆಂಗಳೂರು ಏಕದಿನದಲ್ಲಿ ಮಾತ್ರ ಭುವಿ-ಬುಮ್ರಾ ಒಟ್ಟಾಗಿ ಆಡಲಿಲ್ಲ, ಅಷ್ಟೇ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಅನಿವಾರ್ಯ ಬೌಲರ್‌ಗಳಾಗಿ ಹೊಸ ಛಾಪು ಮೂಡಿಸಿರುವ ಇವರಿಬ್ಬರಲ್ಲಿ ಒಬ್ಬರಿಗೆ ಶುಕ್ರವಾರ ವಿಶ್ರಾಂತಿ ಲಭಿಸುವುದು ಖಂಡಿತ. ಅಥವಾ ಇಬ್ಬರನ್ನೂ ಹೊರಗಿರಿಸಿ ಶಮಿ-ಠಾಕೂರ್‌ ಜೋಡಿಯನ್ನು ಆಡಿಸುವ ಸಾಧ್ಯತೆಯೂ ಇಲ್ಲದಿಲ್ಲ.

ಶಮಿ 2015ರ ವಿಶ್ವಕಪ್‌ ಬಳಿಕ ಆಡಿದ್ದು 3 ಏಕದಿನ ಪಂದ್ಯ ಮಾತ್ರ. ಇವೆಲ್ಲವನ್ನೂ ಗಾಯದಿಂದ ಚೇತರಿಸಿಕೊಂಡ ಬಳಿಕ ಕಳೆದ ವರ್ಷ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯ ವಿರುದ್ಧ ಆಡಿದ್ದರು. ಮುಂದಿನ ವರ್ಷದ ವಿಶ್ವಕಪ್‌ ಹಿನ್ನೆಲೆಯಲ್ಲಿ ಶಮಿಗೆ ಹೆಚ್ಚಿನ ಅಭ್ಯಾಸ ಲಭಿಸಬೇಕಾಗಿದೆ. ಇನ್ನೊಂದೆಡೆ ಈ ತಂಡದ 4ನೇ ಪೇಸ್‌ ಬೌಲರ್‌ ಶಾದೂìಲ್‌ ಠಾಕೂರ್‌ ಈವರೆಗೆ 2 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಆದರೆ ಯಾವುದೇ ಪ್ರಭಾವ ಬೀರಿಲ್ಲ.

ಮಧ್ಯಮ ಕ್ರಮಾಂಕ ಗಟ್ಟಿ ಇಲ್ಲ
ಭಾರತ ಈಗಾಗಲೇ ಸರಣಿ ಗೆದ್ದರೂ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯವನ್ನು ನಿರ್ಲಕ್ಷಿಸುವಂತಿಲ್ಲ. ಅಗ್ರ ಕ್ರಮಾಂಕದಲ್ಲಿ ಈಗಾಗಲೇ ಧವನ್‌, ರೋಹಿತ್‌ ಮತ್ತು ಕೊಹ್ಲಿ ಶತಕ ಬಾರಿಸಿ ಮೆರೆದರೆ, 4ರಿಂದ 7ನೇ ಕ್ರಮಾಂಕದಲ್ಲಿ ದಾಖಲಾದದ್ದು ಒಂದೇ ಅರ್ಧ ಶತಕ. ಇದನ್ನು ಡರ್ಬನ್‌ ಪಂದ್ಯದಲ್ಲಿ ರಹಾನೆ ಬಾರಿಸಿದ್ದರು. ಇದನ್ನು ಬಿಟ್ಟರೆ ಜೊಹಾನ್ಸ್‌ಬರ್ಗ್‌ನಲ್ಲಿ ಧೋನಿ ಅಜೇಯ 42 ರನ್‌ ಮಾಡಿದ್ದೇ ಹೆಚ್ಚಿನ ಗಳಿಕೆ. ಅಯ್ಯರ್‌, ಪಾಂಡ್ಯ ವಿಫ‌ಲರಾಗಿದ್ದಾರೆ. ಪ್ರತಿ ಪಂದ್ಯದಲ್ಲೂ ಅಗ್ರ ಸರದಿಯ ಬ್ಯಾಟ್ಸ್‌ಮನ್‌ಗಳು 30-35ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡರೂ ಮಧ್ಯಮ-ಕೆಳ ಕ್ರಮಾಂಕದ ಆಟಗಾರರಿಂದ ಹೆಚ್ಚಿನ ರನ್‌ ಹರಿದು ಬರುತ್ತಿಲ್ಲ. ಅಂತಿಮ ಪಂದ್ಯದಲ್ಲಿ ಮನೀಷ್‌ ಪಾಂಡೆ ಮತ್ತು ದಿನೇಶ್‌ ಕಾರ್ತಿಕ್‌ ಅವರಿಗೆ ಅವಕಾಶ ಲಭಿಸುವ ಸಾಧ್ಯತೆಯೊಂದು ಗೋಚರಿಸುತ್ತಿದೆ.

ಮತ್ತೆ ಸ್ಪಿನ್‌ ಮಿಂಚು
ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದು ಭಾರತದ ಸ್ಪಿನ್‌ ದಾಳಿ. ಚಾಹಲ್‌-ಕುಲದೀಪ್‌ ಸೇರಿಕೊಂಡು ಈಗಾಗಲೇ 30 ವಿಕೆಟ್‌ ಬೇಟೆಯಾಡಿದ್ದಾರೆ. ಇವರು ವಾಂಡರರ್ನ 4ನೇ ಪಂದ್ಯದಲ್ಲಿ ವಿಫ‌ಲರಾದಾಗ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಸ್ಪಿನ್‌ ದಾಳಿ ನಿಭಾಯಿಸುವ ವಿದ್ಯೆಯನ್ನು ಕರಗತಮಾಡಿಕೊಂಡರು, ಇನ್ನು ಭಾರತಕ್ಕೆ ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ ಪೋರ್ಟ್‌ ಎಲಿಜಬೆತ್‌ನಲ್ಲಿ ಮತ್ತೆ ಚಾಹಲ್‌-ಕುಲದೀಪ್‌ ಲಯ ಕಂಡುಕೊಂಡದ್ದು ಭಾರತದ ಪಾಲಿನ ಸಮಾಧಾನಕರ ಸಂಗತಿ.

ಆದರೂ ಸರಣಿ ಸೋತು ತೀವ್ರ ಮುಖಭಂಗ ಅನುಭವಿಸಿರುವ ದಕ್ಷಿಣ ಆಫ್ರಿಕಾ ಸಮಾಧಾನಕರ ಗೆಲುವಿಗೆ ಪ್ರಯತ್ನಿಸುವುದು ಖಂಡಿತ.

ಟಾಪ್ ನ್ಯೂಸ್

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

bCharmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

kejriwal

AAP ಮುಗಿಸಲು ಬಿಜೆಪಿ ಆಪರೇಷನ್‌ ಬಲೆ: ಕೇಜ್ರಿವಾಲ್ ಕಿಡಿ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqwe

Thailand Open: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಚಾಂಪಿಯನ್ಸ್‌

1-weee

Italian Open ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್‌

1-weeewqe

KKR vs RR ಪಂದ್ಯ ಮಳೆಯಿಂದಾಗಿ ರದ್ದು: ಆರ್ ಸಿಬಿಗೆ ರಾಜಸ್ಥಾನ್ ಎಲಿಮಿನೇಟರ್‌ ಎದುರಾಳಿ

1-qweqwqe

IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police crime

National Conference ರೋಡ್‌ ಶೋ ವೇಳೆ ಮೂವರಿಗೆ ಚಾಕು ಇರಿತ

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

bCharmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

police crime

Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.