ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಸೀಮಿತ ಪ್ರೇಕ್ಷಕರು?
Team Udayavani, Aug 13, 2021, 9:30 PM IST
ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ಕೊರೊನಾ ತುರ್ತುಸ್ಥಿತಿ ಜಾರಿಯಲ್ಲಿರುವ ಹೊರತಾಗಿಯೂ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶ ನೀಡುವ ಕುರಿತು ಸಂಘಟಕರು ಯೋಚಿಸುತ್ತಿದ್ದಾರೆ. ಈ ಕುರಿತು “ಯೊಮಿಯುರಿ ಶಿಂಬುನ್’ ವರದಿ ಮಾಡಿದೆ.
ಮಧ್ಯ ಜಪಾನ್‌ನ ಶಿಜಿಯೋಕಾದಲ್ಲಿ ಪ್ಯಾರಾಲಿಂಪಿಕ್ಸ್ ಸ್ಪರ್ಧೆಗಳು ನಡೆಯಲಿದ್ದು, ಇಲ್ಲಿ 5 ಸಾವಿರದಷ್ಟು ವೀಕ್ಷಕರಿಗೆ ಸ್ಟೇಡಿಯಂ ಬಾಗಿಲು ತೆರೆಯುವ ಸಾಧ್ಯತೆ ಇದೆ. ಜತೆಗೆ ಶಾಲಾ ವಿದ್ಯಾರ್ಥಿಗಳನ್ನೂ ಆಹ್ವಾನಿಸಲಾಗುವುದು ಎಂದು ವರದಿ ತಿಳಿಸಿದೆ.
ಕಳೆದ ರವಿವಾರ ಮುಗಿದ ಒಲಿಂಪಿಕ್ಸ್ ಕ್ರೀಡಾಕೂಟದ ವೇಳೆ ಪ್ರೇಕ್ಷಕರಿಗೆ ಸಂಪೂರ್ಣ ನಿಷೇಧವಿತ್ತು. ಆದರೆ ಪ್ಯಾರಾಲಿಂಪಿಕ್ಸ್‌ಗೆ ಒಂದಿಷ್ಟು ರಿಯಾಯಿತಿ ನೀಡುವುದು ಆಯೋಜಕರ ಉದ್ದೇಶವಾಗಿದೆ.
ಆ. 24ರಿಂದ ಆರಂಭವಾಗಲಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಈಜು, ಟೇಬಲ್ ಟೆನಿಸ್, ವೀಲ್‌ಚೇರ್ ಫೆನ್ಸಿಂಗ್ ಮತ್ತು ಬಾಸ್ಕೆಟ್‌ಬಾಲ್ ಸ್ಪರ್ಧೆಗಳಿವೆ. 4 ಸಾವಿರದಷ್ಟು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.