Under-19 ಏಷ್ಯಾ ಕಪ್; ಭಾರತ, ಪಾಕ್ಗೆ ಆಘಾತ: ಬಾಂಗ್ಲಾ vs ಯುಎಇ ಫೈನಲ್
Team Udayavani, Dec 15, 2023, 11:30 PM IST
ದುಬಾೖ: ಎಸಿಸಿ ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಅಚ್ಚರಿಯ ಫಲಿತಾಂಶಗಳು ದಾಖಲಾಗಿವೆ. ಭಾರತ ಮತ್ತು ಪಾಕಿಸ್ಥಾನ ಸೋಲನುಭವಿಸಿ ನಿರ್ಗಮಿಸಿವೆ. ಈ ತಂಡಗಳನ್ನು ಮಣಿಸಿದ ಬಾಂಗ್ಲಾದೇಶ ಮತ್ತು ಯುಎಇ ತಂಡಗಳು ಫೈನಲ್ನಲ್ಲಿ ಎದುರಾಗಲಿವೆ.
ಶುಕ್ರವಾರದ ಮುಖಾಮುಖೀಯಲ್ಲಿ ಭಾರತ 42.4 ಓವರ್ಗಳಲ್ಲಿ 188ಕ್ಕೆ ಕುಸಿದರೆ, ಬಾಂಗ್ಲಾ 42.5 ಓವರ್ಗಳಲ್ಲಿ 6 ವಿಕೆಟಿಗೆ 189 ರನ್ ಮಾಡಿ ಫೈನಲ್ಗೆ ನೆಗೆಯಿತು. ಇನ್ನೊಂದು ಸೆಮಿಫೈನಲ್ನಲ್ಲಿ ಯುಎಇ 11 ರನ್ನುಗಳಿಂದ ಪಾಕಿಸ್ಥಾನಕ್ಕೆ ಆಘಾತವಿಕ್ಕಿತು.
ಭಾರತದ ಪರ ಎಂ. ಅಭಿಷೇಕ್ 62, ಮುಶೀರ್ ಖಾನ್ 50 ರನ್ ಹೊಡೆದರೂ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ಬಾಂಗ್ಲಾ ಪರ ಮರೂಫ್ ರಿಧ 41ಕ್ಕೆ 4 ವಿಕೆಟ್ ಕಿತ್ತರು. ಚೇಸಿಂಗ್ ವೇಳೆ ಅರೀಫುಲ್ ಇಸ್ಲಾಮ್ 94 ರನ್ ಬಾರಿಸಿ ಬಾಂಗ್ಲಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಯುಎಇ ಪರಾಕ್ರಮ
ಮೊದಲ ಸೆಮಿಫೈನಲ್ನಲ್ಲಿ ಯುಎಇ 47.5 ಓವರ್ಗಳಲ್ಲಿ 193 ರನ್ ಗಳಿಸಿದರೆ, ಪಾಕಿಸ್ಥಾನ 49.3 ಓವರ್ಗಳಲ್ಲಿ 182ಕ್ಕೆ ಆಲೌಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…