ಭಾರತವನ್ನು ಮಣಿಸಿದ ಲಂಕಾ
Team Udayavani, Aug 3, 2018, 10:49 AM IST
ಕೊಲಂಬೊ: ಎರಡನೇ ಅಂಡರ್-19 ಏಕದಿನ ಪಂದ್ಯದಲ್ಲಿ ಭಾರತವನ್ನು 5 ವಿಕೆಟ್ಗಳಿಂದ ಮಣಿಸಿದ ಆತಿಥೇಯ ಶ್ರೀಲಂಕಾ, 5 ಪಂದ್ಯಗಳ ಸರಣಿಯನ್ನು 1-1 ಸಮಬಲಕ್ಕೆ ತಂದಿದೆ.ಗುರುವಾರ ಕೊಲಂಬೊದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಕಿರಿಯರು 47 ಓವರ್ಗಳಲ್ಲಿ 193ಕ್ಕೆ ಆಲೌಟಾದರೆ, ಶ್ರೀಲಂಕಾ ಕಿರಿಯರು 45.4 ಓವರ್ಗಳಲ್ಲಿ 5 ವಿಕೆಟಿಗೆ 195 ರನ್ ಬಾರಿಸಿ ಗೆದ್ದು ಬಂದರು. ಮೊದಲ ಪಂದ್ಯವನ್ನು ಭಾರತ 6 ವಿಕೆಟ್ಗಳಿಂದ ಜಯಿಸಿತ್ತು. 3ನೇ ಮುಖಾಮುಖೀ ಆ. 5ರಂದು ನಡೆಯಲಿದೆ.
ಶ್ರೀಲಂಕಾ ಸಾಂಕ ಬೌಲಿಂಗ್ ಮೂಲಕ ಭಾರತದ ಬ್ಯಾಟಿಂಗ್ ಸರದಿಯನ್ನು ನಿಯಂತ್ರಿಸಿತು. ದುಲ್ಶನ್ 3, ಫೆರ್ನಾಂಡೊ, ಮಾನಸಿಂಘೆ ಮತ್ತು ಪರಣವಿತನ ತಲಾ 2 ವಿಕೆಟ್ ಉರುಳಿಸಿದರು. ಭಾರತದ ಪರ ಆರಂಭಕಾರ ಪವನ್ ಶಾ ಸರ್ವಾಧಿಕ 49 ರನ್ ಹೊಡೆದರೆ, ಬದೋನಿ 36 ಮತ್ತು ಸಮೀರ್ ಚೌಧರಿ 32 ರನ್ ಮಾಡಿದರು.
ಲಂಕಾ ಚೇಸಿಂಗ್ ವೇಳೆ ನಾಯಕ ನಿಪುನ್ ಧನಂಜಯ ಅಜೇಯ 92 ರನ್ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು. ಪಸಿಂದು ಸೂರ್ಯಬಂಡಾರ 52 ರನ್ ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ