ಸೋಲಿನ ಹಾದಿಯಲ್ಲಿದ್ದ ಆಸೀಸ್‌ ಕಿರಿಯರಿಗೆ ರೋಚಕ ಗೆಲುವು

Team Udayavani, Jan 24, 2020, 12:46 AM IST

ಕಿಂಬರ್ಲಿ: ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಗುರುವಾರದ ರೋಚಕ ಮುಖಾಮುಖೀಯಲ್ಲಿ ಆಸ್ಟ್ರೇಲಿಯ 2 ವಿಕೆಟ್‌ಗಳಿಂದ ಇಂಗ್ಲೆಂಡಿಗೆ ಸೋಲುಣಿಸಿದೆ.

ಇಂಗ್ಲೆಂಡ್‌ 7 ವಿಕೆಟಿಗೆ 252 ರನ್‌ ಪೇರಿ ಸವಾಲೊಡ್ಡಿದರೆ, ಆಸ್ಟ್ರೇಲಿಯ ಕೊನೆಯ ಎಸೆತದಲ್ಲಿ 8 ವಿಕೆಟ್‌ ನಷ್ಟದಲ್ಲಿ ಗೆಲುವಿನ ರನ್‌ ಬಾರಿಸಿತು. ಆಸ್ಟ್ರೇಲಿಯದ 8 ವಿಕೆಟ್‌ಗಳು 206ಕ್ಕೆ ಉದುರಿದಾಗ ಇಂಗ್ಲೆಂಡಿಗೆ ಗೆಲುವು ಖಾತ್ರಿಯಾಗಿತ್ತು. ಆದರೆ 9 ನೇ ವಿಕೆಟಿಗೆ ಜತೆಗೂಡಿದ ಕಾನರ್‌ ಸುಲ್ಲಿ (ಔಟಾಗದೆ 35) ಮತ್ತು ಟಾಡ್‌ ಮರ್ಫಿ (ಔಟಾಗದೆ 16) 47 ರನ್‌ ಪೇರಿಸಿ ಆಂಗ್ಲರ ಗೆಲುವಿನ ಕನಸನ್ನು ಛಿದ್ರಗೊಳಿಸಿದರು.

ವಿಂಡೀಸ್‌ ಜಯಭೇರಿ
ಇಲ್ಲೇ ನಡೆದ ಇನ್ನೊಂದು ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 246 ರನ್ನುಗಳ ಭಾರೀ ಅಂತರದಿಂದ ನೈಜೀರಿಯಾವನ್ನು ಮಣಿಸಿತು. ವಿಂಡೀಸ್‌ 8 ವಿಕೆಟಿಗೆ 303 ರನ್‌ ಬಾರಿಸಿದರೆ, ನೈಜೀರಿಯಾ 57 ರನ್ನಿಗೆ ಆಲೌಟ್‌ ಆಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ