10 ವಿಕೆಟ್ ಜೆರ್ಸಿಯನ್ನು ಹರಾಜಿಗಿಟ್ಟ ಅಜಾಜ್ ಪಟೇಲ್
Team Udayavani, May 6, 2022, 6:30 AM IST
ಆಕ್ಲೆಂಡ್: ಇನ್ನಿಂಗ್ಸ್ನ ಎಲ್ಲ 10 ವಿಕೆಟ್ ಉರುಳಿಸಿ ಐತಿಹಾಸಿಕ ಸಾಧನೆಗೈದ ವೇಳೆ ತಾನು ಧರಿಸಿದ ಜೆರ್ಸಿಯನ್ನು ನ್ಯೂಜಿಲ್ಯಾಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಹರಾಜಿಗೆ ಇಡಲಿದ್ದಾರೆ. ಇದರಿಂದ ಒಟ್ಟುಗೂಡಿದ ಮೊತ್ತವನ್ನು ನ್ಯೂಜಿಲ್ಯಾಂಡಿನ ಮಕ್ಕಳ ಆಸ್ಪತ್ರೆಗಾಗಿ “ಸ್ಟಾರ್ಶಿಪ್ ಫೌಂಡೇ ಶನ್’ಗೆ ನೀಡಲು ನಿರ್ಧರಿಸಿದ್ದಾರೆ.
ಅಜಾಜ್ ಪಟೇಲ್ ದಂಪತಿ ಕಳೆದ ವರ್ಷ ಮಗಳ ಚಿಕಿತ್ಸೆಗಾಗಿ “ಸ್ಟಾರ್ಶಿಪ್’ನಲ್ಲಿ ಉಳಿದುಕೊಂಡ ವೇಳೆ ಅಲ್ಲಿನ ಮಕ್ಕಳ ಸ್ಥಿತಿ ಕಂಡು ಮರುಗಿದ್ದರು.
ಮುಂಬಯಿ ಮೂಲದ ಅಜಾಜ್ ಪಟೇಲ್ ಕಳೆದ ಭಾರತ ಪ್ರವಾಸದ ವೇಳೆ ಮುಂಬಯಿ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ನ ಎಲ್ಲ 10 ವಿಕೆಟ್ ಕೆಡವಿದ್ದರು. ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ಬಳಿಕ ಈ ಸಾಧನೆಗೈದ ಮೊದಲ ಬೌಲರ್ ಆಗಿ ಮೂಡಿಬಂದಿದ್ದರು.