ಏಶ್ಯನ್‌ ವೇಟ್‌ಲಿಫ್ಟಿಂಗ್‌: ಜೆರೆಮಿ ನೂತನ ದಾಖಲೆ


Team Udayavani, Apr 22, 2019, 10:11 AM IST

jeremy

ನಿಂಗ್ಬೊ (ಚೀನ): ಯೂತ್‌ ಒಲಿಂಪಿಕ್‌ ಚಿನ್ನದ ಪದಕ ವಿಜೇತ 16ರ ಹರೆಯದ ಜೆರೆಮಿ ಲಾಲಿನ್ನುಂಗ “ಏಶ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌’ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ರವಿವಾರ ನಡೆದ ಪುರುಷರ 67 ಕೆಜಿ ವಿಭಾಗದ “ಬಿ’ ಗುಂಪಿನ ಸ್ಪರ್ಧೆಯಲ್ಲಿ ಜೆರೆಮಿ, ಸ್ನಾಚ್‌ ವಿಭಾಗದಲ್ಲಿ ವಿಶ್ವದಾಖಲೆ, ಯೂತ್‌ ದಾಖಲೆ ನಿರ್ಮಿಸಿದರು.
ಕ್ಲೀನ್‌ ಮತ್ತು ಜರ್ಕ್‌ ಸೇರಿ ಒಟ್ಟು 297 ಕೆಜಿ (134+163) ತೂಕ ಎತ್ತಿ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದರು. ಪಾಕಿಸ್ಥಾನದ ತಲ್ಹಾ ತಾಲಿಬ್‌ ಒಟ್ಟು 304 ಕೆಜಿ ತೂಕ ಎತ್ತಿ ಅಗ್ರಸ್ಥಾನ ಪಡೆದರು. ಈ ವಿಭಾಗದ ಅಂತಿಮ ಫ‌ಲಿತಾಂಶ “ಎ’ ಗುಂಪಿನ ಸ್ಪರ್ಧೆಯ ಅನಂತರ ತಿಳಿದು ಬರಲಿದೆ.

ಯೂತ್ ವಿಶ್ವದಾಖಲೆ
ಜೆರೆಮಿ ಸ್ನಾಚ್‌ ವಿಭಾಗದ 3 ಪ್ರಯತ್ನಗಳಲ್ಲಿ ಎರಡರಲ್ಲಿ ಯಶಸ್ವಿಯಾಗಿ (130 ಕೆಜಿ, 134 ಕೆಜಿ) ನೂತನ ಯೂತ್‌ ವಿಶ್ವದಾಖಲೆ ಬರೆದರು. ಹಿಂದಿನ ದಾಖಲೆ ಕೂಡ ಜೆರೆಮಿ ಹೆಸರಿನಲ್ಲಿತ್ತು. ಫೆಬ್ರವರಿಯಲ್ಲಿ ಥಾಯ್ಲೆಂಡ್‌ನ‌ಲ್ಲಿ ನಡೆದ “ಇಜಿಎಟಿ ಕಪ್‌’ನಲ್ಲಿ 131 ಕೆಜಿ ತೂಕ ಎತ್ತಿ ದಾಖಲೆ ನಿರ್ಮಿಸಿದ್ದರು.
ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ ತಮ್ಮ ದೇಹದ ತೂಕಕ್ಕಿಂತ ದುಪ್ಪಟ್ಟು ಭಾರ ಎತ್ತಿದ ಜೆರೆಮಿ (157 ಕೆಜಿ, 163 ಕೆಜಿ) ಕಜಕೀಸ್ಥಾನದ ವೇಟ್‌ಲಿಫ್ಟರ್‌ ಸೈಖಾನ್‌ ತೈಸುಯೇವ್‌ ಅವರ ಯೂತ್‌ ವಿಶ್ವ ದಾಖಲೆ ಮುರಿದರು (161 ಕೆಜಿ).
ಇದು ಜೆರೆಮಿ ಅವರ ವೈಯಕ್ತಿಕ ಉತ್ತಮ ಪ್ರದರ್ಶನ. ಅವರು “ಇಜಿಎಟಿ ಕಪ್‌’ ಕೂಟದಲ್ಲಿ ಯೂತ್‌ ವಿಶ್ವ ದಾಖಲೆಯಾದ 288 ಕೆಜಿ ಗಿಂತ 9 ಕೆಜಿ ಹೆಚ್ಚು ತೂಕ ಎತ್ತಿದ್ದಾರೆ. ಅಲ್ಲಿ ಅವರಿಗೆ ಬೆಳ್ಳಿ ಪದಕ ಒಲಿದಿತ್ತು. “ಏಶ್ಯನ್‌ ಚಾಂಪಿಯನ್‌ಶಿಪ್‌’ ಒಲಿಂಪಿಕ್‌ ಅರ್ಹತಾ ಸುತ್ತುಗಳಲ್ಲಿ ಒಂದಾಗಿದ್ದು, ಇಲ್ಲಿನ ಅಂಕ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗೆ ನೆರವಾಗಲಿದೆ.

ಭಾರತಕ್ಕೆ ಮೊದಲ ಪದಕ ತಂದ ಜಿಲ್ಲಿ ದಲಾಬೆಹೆರಾ

“ಏಶ್ಯನ್‌ ವೇಟ್‌ಲಿಪ್ಟಿಂಗ್‌ ಚಾಂಪಿಯನ್‌ಶಿಪ್‌’ ಕೂಟದಲ್ಲಿ ಭಾರತ ಪದಕದ ಖಾತೆ ತೆರೆದಿದೆ. ರವಿವಾರದ ವನಿತೆಯರ 45 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಜಿಲ್ಲಿ ದಲಾಬೆಹೆರಾ 167 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು, ವಿಯೆಟ್ನಾಂನ ಹುಯೆನ್‌ ತಿ ವಿಜಾಂಗ್‌ ಚಿನ್ನ ಜಯಿಸಿದರು. ಕಳೆದ ವರ್ಷ ದಲಾಬೆಹೆರಾ “ಐಡಬ್ಲ್ಯುಎಫ್ ಜೂನಿಯರ್‌ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.

ಮೀರಾಗೆ ಕೈತಪ್ಪಿದ ಕಂಚು
49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ವೈಯಕ್ತಿಯ ದಾಖಲೆಯನ್ನು ಉತ್ತಮಗೊಳಿಸಿದ್ದರೂ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು.ಮೀರಾಬಾಯಿ ಸ್ನಾಚ್‌ ವಿಭಾಗದಲ್ಲಿ 86 ಕೆಜಿ, ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ ವೈಯಕ್ತಿಕ ಉತ್ತಮ 113 ಕೆಜಿ  ತೂಕ ಎತ್ತಿ (ಒಟ್ಟು 199 ಕೆಜಿ) 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಫೆಬ್ರವರಿಯಲ್ಲಿ ನಡೆದ “ಇಜಿಎಟಿ ಕಪ್‌’ ನಲ್ಲಿ ಮೀರಾ 192 ಕೆಜಿ ತೂಕ ಎತ್ತಿದ್ದರು.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.