ಐಸಿಸಿ ವರ್ಷದ ಕ್ರಿಕೆಟಿಗ ಯಾರು? ರೂಟ್‌, ವಿಲಿಯಮ್ಸನ್‌, ಅಫ್ರಿದಿ, ರಿಜ್ವಾನ್‌

Team Udayavani, Jan 1, 2022, 7:15 AM IST

ಐಸಿಸಿ ವರ್ಷದ ಕ್ರಿಕೆಟಿಗ ಯಾರು? ರೂಟ್‌, ವಿಲಿಯಮ್ಸನ್‌, ಅಫ್ರಿದಿ, ರಿಜ್ವಾನ್‌

ದುಬಾೖ: “ಐಸಿಸಿ ವರ್ಷದ ಕ್ರಿಕೆಟಿಗ’ ಪ್ರಶಸ್ತಿ ಸುತ್ತಿಗೆ ನಾಲ್ವರ ಹೆಸರು ಅಂತಿಮಗೊಂಡಿದೆ. ಆದರೆ ಇದರಲ್ಲಿ ಭಾರತೀಯರ್ಯಾರೂ ಇಲ್ಲ. ಇಂಗ್ಲೆಂಡಿನ ಟೆಸ್ಟ್‌ ನಾಯಕ ಜೋ ರೂಟ್‌, ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌, ಪಾಕಿಸ್ಥಾನದ ಮೊಹಮ್ಮದ್‌ ರಿಜ್ವಾನ್‌ ಮತ್ತು ಶಾಹೀನ್‌ ಶಾ ಅಫ್ರಿದಿ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ. ವಿಜೇತರಿಗೆ ಸರ್‌ ಗ್ಯಾರ್‌ಫೀಲ್ಡ್‌ ಸೋಬರ್ ಟ್ರೋಫಿ ನೀಡಿ ಗೌರವಿಸಲಾಗುವುದು.

ರೂಟ್‌ 1,855 ರನ್‌
ಜೋ ರೂಟ್‌ 2021ರ 18 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,855 ರನ್‌ ಪೇರಿಸಿ ಮೆರೆದಿದ್ದಾರೆ. ಸರಾಸರಿ 58.37. ಇದರಲ್ಲಿ 6 ಶತಕಗಳು ಸೇರಿವೆ. ಶ್ರೀಲಂಕಾ ಎದುರಿನ ಗಾಲೆ ಟೆಸ್ಟ್‌ ಪಂದ್ಯದಲ್ಲಿ 228 ರನ್‌ ಬಾರಿಸುವ ಮೂಲಕ ರೂಟ್‌ ತಮ್ಮ ಅಭಿಯಾನ ಆರಂಭಿಸಿದ್ದರು. ಬಳಿಕ ಭಾರತದೆದುರಿನ ಚೆನ್ನೈ ಟೆಸ್ಟ್‌ನಲ್ಲಿ 218 ರನ್‌ ರಾಶಿ ಹಾಕಿದರು. ಭಾರತದೆದುರಿನ 4 ಪಂದ್ಯಗಳಲ್ಲಿ 3 ಶತಕ ಸೇರಿದಂತೆ 564 ರನ್‌ ಪೇರಿಸಿದ ಹಿರಿಮೆ ರೂಟ್‌ ಅವರದಾಗಿದೆ. ಐಸಿಸಿ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನೂ ಅಲಂಕರಿಸಿದರು. ಆದರೆ ವರ್ಷಾಂತ್ಯದ ಆ್ಯಶಸ್‌ ಸರಣಿಯಲ್ಲಿ ಸತತ 3 ಟೆಸ್ಟ್‌ ಗಳಲ್ಲಿ ಸೋಲನುಭವಿಸಿದ್ದು ರೂಟ್‌ ಅವರ ಅಷ್ಟೂ ಸಾಧನೆಗೆ ಕಪ್ಪುಚುಕ್ಕಿಯಾಗಿ ಪರಿಣಮಿಸಿದೆ.

ಅಫ್ರಿದಿ ಘಾತಕ ಬೌಲಿಂಗ್‌
ಪಾಕಿಸ್ಥಾನದ ವೇಗಿ ಶಾಹೀನ್‌ ಶಾ ಅಫ್ರಿದಿ ವರ್ಷವಿಡೀ ಘಾತಕ ಬೌಲಿಂಗ್‌ ಮೂಲಕ ಮೂರೂ ಮಾದರಿಗಳಲ್ಲಿ ಎದುರಾಳಿಗಳಿಗೆ ಅಪಾಯಕಾರಿಯಾಗಿ ಗೋಚರಿಸಿದರು. ಆರಂಭಿಕ ಸ್ಪೆಲ್‌ ಹಾಗೂ ಡೆತ್‌ ಓವರ್‌ಗಳೆರಡರಲ್ಲೂ ಅಫ್ರಿದಿ ಎಸೆತಗಳು ಅತ್ಯಂತ ಹರಿತವಾಗಿದ್ದವು. 36 ಅಂತಾರಾಷ್ಟ್ರೀಯ ಪಂದ್ಯಗಳಿಂದ 78 ವಿಕೆಟ್‌ ಕೆಡವಿದ ಸಾಧನೆ ಇವರದಾಗಿದೆ. ಟಿ20 ವಿಶ್ವಕಪ್‌ನಲ್ಲಿ ಮಿಂಚಿನ ದಾಳಿ ಸಂಘಟಿಸಿದ ಅಫ್ರಿದಿ ಭಾರತವನ್ನು ಸೋಲಿಸುವಲ್ಲಿ, ಪಾಕಿಸ್ಥಾನವನ್ನು ಸೆಮಿಫೈನಲ್‌ಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ವರ್ಷದ 21 ಟಿ20 ಪಂದ್ಯಗಳಲ್ಲಿ 23 ವಿಕೆಟ್‌ ಉರುಳಿಸಿದ ಸಾಧನೆ ಅಫ್ರಿದಿ ಅವರದು.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ : ರಾಹುಲ್ ಟೀಮ್ ಇಂಡಿಯಾ ನಾಯಕ

ವಿಲಿಯಮ್ಸನ್‌ ರಿಯಲ್‌ ಲೀಡರ್‌
ಕೇನ್‌ ವಿಲಿಯಮ್ಸನ್‌ ಸಾಧನೆಯನ್ನು ಕೇವಲ ಬ್ಯಾಟಿಂಗ್‌ ಮೂಲಕ ಅಳೆದರು ಸಾಲದು, ಅವರ ನಾಯಕತ್ವದ ಯಶಸ್ಸು ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಇದಕ್ಕೆ ಅತ್ಯು ತ್ತಮ ನಿದರ್ಶನವೆಂದರೆ, ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಪ್ರಶಸ್ತಿ ಎತ್ತಿದ್ದು. 16 ಅಂತಾರಾಷ್ಟ್ರೀಯ ಪಂದ್ಯಗಳಿಂದ 2,021 ರನ್‌ ಪೇರಿಸಿದ ಹೆಗ್ಗಳಿಕೆ ಕಿವೀಸ್‌ ಕಪ್ತಾನನದು. ಬಳಿಕ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲೂ ವಿಲಿಯಮ್ಸನ್‌ ಪಡೆ ಫೈನಲ್‌ಗೆ ಪ್ರವೇಶಿಸಿತಾದರೂ ಇಲ್ಲಿ ಅದೃಷ್ಟ ಕೈಕೊಟ್ಟಿತು. ಆದರೆ ಬ್ಯಾಟಿಂಗ್‌ ಹೋರಾಟದ ಮೂಲಕ ಅವರು ಬಾರಿಸಿದ 85 ರನ್‌ ಎಲ್ಲರ ಪ್ರಶಂಸೆ ಗಳಿಸಿತು.

ರಿಜ್ವಾನ್‌: 1,915 ರನ್‌ ಸಾಧನೆ
ಪಾಕಿಸ್ಥಾನದ ವಿಕೆಟ್‌ ಕೀಪಿಂಗ್‌ ಓಪನರ್‌ ಮೊಹಮ್ಮದ್‌ ರಿಜ್ವಾನ್‌ 2021ರಲ್ಲಿ ರನ್‌ ಪ್ರವಾಹವನ್ನೇ ಹರಿಸಿದರು. 44 ಪಂದ್ಯಗಳಿಂದ 1,915 ರನ್‌ ಬಾರಿಸಿದ ಸಾಧನೆ ಇವರದು. ಸರಾಸರಿ 56.32. ಇದರಲ್ಲಿ 2 ಶತಕ ಕೂಡ ಸೇರಿದೆ. ಕೀಪಿಂಗ್‌ ವೇಳೆ 56 ವಿಕೆಟ್‌ ಪತನಕ್ಕೆ ಕಾರಣರಾಗಿದ್ದಾರೆ. ಮುಖ್ಯವಾಗಿ ಟಿ20 ಕ್ರಿಕೆಟ್‌ನಲ್ಲಿ ರಿಜ್ವಾನ್‌ ಸಾಧನೆ ಅಮೋಘವಾಗಿತ್ತು. 29 ಪಂದ್ಯಗಳಿಂದ ಪೇರಿಸಿದ್ದು ಬರೋಬ್ಬರಿ 1,326 ರನ್‌! ಸರಾಸರಿ 73.66, ಸ್ಟ್ರೈಕ್‌ರೇಟ್‌ 134.89. ಹಾಗೆಯೇ 9 ಟೆಸ್ಟ್‌ಗಳಿಂದ 455 ರನ್‌ ಗಳಿಸಿದ್ದಾರೆ.

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.