ವಿಂಬಲ್ಡನ್ ಟೆನಿಸ್ 2022: ಸಿಮೋನಾ ಹಾಲೆಪ್, ಎಲೆನಾ ರಿಬಕಿನಾ ಸೆಮಿಫೈನಲ್ ಗೆ
Team Udayavani, Jul 7, 2022, 12:41 AM IST
ಲಂಡನ್: ಮಾಜಿ ಚಾಂಪಿಯನ್ ರುಮಾನಿಯಾದ ಸಿಮೋನಾ ಹಾಲೆಪ್ ಮತ್ತು ಕಝಾಕ್‌ಸ್ಥಾನದ ಎಲೆನಾ ರಿಬಕಿನಾ ಅವರು ವಿಂಬಲ್ಡನ್ ಟೆನಿಸ್ ಕೂಟದ ವನಿತೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಪ್ರಚಂಡ ಫಾರ್ಮ್ ನಲ್ಲಿರುವ ಹಾಲೆಪ್ ಬುಧವಾರ ನಡೆದ ಪಂದ್ಯದಲ್ಲಿ ಅಮೆರಿಕದ ಅಮಂಡಾ ಅನಿಸಿಮೋವಾ ಅವವರನ್ನು 6-2, 6-4 ಸೆಟ್‌ಗಳಿಂದ ಸುಲಭವಾಗಿ ಮಣಿಸಿ ಅಂತಿಮ ನಾಲ್ಕರ ಸುತ್ತಿಗೇರಿದರು. ಈ ವರ್ಷದ ವಿಂಬಲ್ಡನ್‌ನಲ್ಲಿ ಹಾಲೆಪ್ ಇನ್ನೂ ಯಾವುದೇ ಸೆಟ್ ಕಳೆದುಕೊಂಡಿಲ್ಲ.
2019ರ ಚಾಂಪಿಯನ್ ಆಗಿರುವ ಹಾಲೆಪ್ ಕೇವಲ 63 ನಿಮಿಷಗಳ ಹೋರಾಟದಲ್ಲಿ ಅನಿಸಿಮೋವಾ ಅವರನ್ನು ನೆಲಕ್ಕುರುಳಿಸಿದರಲ್ಲದೇ 3ನೇ ಬಾರಿ ಇಲ್ಲಿ ಸೆಮಿಫೈನಲ್ ತಲುಪಿದರು.
ದಿನದ ಇನ್ನೊಂದು ಪಂದ್ಯದಲ್ಲಿ ಎಲೆನಾ ರಿಬಕಿನಾ ಅವರು ಆಸ್ಟ್ರೇಲಿಯದ ಅಜ್ಲಾ ತೋಮ್ಜಾ ನೋವಿಕ್ ಅವರನ್ನು 4-6, 6-2, 6-3 ಸೆಟ್‌ಗಳಿಂದ ಕೆಡಹಿದರು. ಮೊದಲ ಸೆಟ್ ಸೊತರೂ ವಿಚಲಿತರಾಗದ ರಿಬಕಿನಾ ಮುಂದಿನೆರಡು ಸೆಟ್ ಗೆದ್ದು ಸೆಮಿಫೈನಲ್ ತಲುಪಿದರು. ಅವರು ಗ್ರ್ಯಾನ್ ಸ್ಲಾಮ್ ಕೂಟದ ಸೆಮಿಫೈನಲ್ ತಲುಪಿದ ಕಝಾಕ್‌ಸ್ಥಾನದ ಮೊದಲ ಆಟಗಾರ್ತಿ ಎಂದೆನಿಸಿಕೊಂಡರು.
ಜಬಿಯುರ್ ಸೆಮಿಗೇರಿದ
ಮೊದಲ ಅರಬ್ ಮಹಿಳೆ
ಟುನಿಶಿಯಾದ ಆನ್ಸ್ ಜಬಿಯುರ್ ಚೆಕ್ ಗಣರಾಜ್ಯದ ಮೇರಿ ಬೌಜ್ಕೋವಾ ರನ್ನು 3-6, 6-1, 6-1 ಸೆಟ್‌ಗಳಿಂದ ಸೋಲಿಸುವ ಮೂಲಕ ಗ್ರ್ಯಾನ್‌ಸ್ಲಾಮ್ ಟೆನಿಸ್ ಕೂಟವೊಂದರಲ್ಲಿ ಅರಬ್ ರಾಷ್ಟ್ರಗಳ ಮಹಿಳೆಯೊಬ್ಬರು ಮೊದಲ ಬಾರಿಗೆ ಸೆಮಿಫೈನಲಿಗೇರಿದ ಸಾಧನೆ ಮಾಡಿದ್ದಾರೆ.
ರಾಯಲ್ ಬಾಕ್ಸ್‌ನಲ್ಲಿ ನ್ಪೋರ್ಟಿಂಗ್ ರಾಯಲ್ಟಿ
ಖ್ಯಾತ ಫುಟ್ ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಬುಧವಾರ ತನ್ನ ತಾಯಿ ಸಾಂಡ್ರಾ ಜತೆ ರಾಯಲ್ ಬಾಕ್ಸ್‌ನಲ್ಲಿ ಕುಳಿತುಕೊಂಡು ವಿಂಬಲ್ಡನ್ ಟೆನಿಸ್ ಕೂಟದ ಪಂದ್ಯವನ್ನು ವೀಕ್ಷಿಸಿದರು. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬೆಕ್‌ಹ್ಯಾಮ್ ಪಂದ್ಯ ವೀಕ್ಷಿಸುತ್ತಿರುವ ಅವರ ಚಿತ್ರವನ್ನು ಹಾಕಲಾಗಿತ್ತು ಮಾತ್ರವಲ್ಲದೇ “ಸ್ಪೋ ರ್ಟಿಗ್ ರಾಯಲ್ಟಿ ಇನ್ ದ ರಾಯಲ್ ಬಾಕ್ಸ್’ ಎಂದು ಬರೆಯಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿಂಬಾಬ್ವೆ ಸರಣಿಯಿಂದ ಬ್ರೇಕ್ ತೆಗೆದುಕೊಂಡ ಕೋಚ್ ದ್ರಾವಿಡ್: ಲಕ್ಷ್ಮಣ್ ಗೆ ಜವಾಬ್ದಾರಿ
ಮುಂದಿನ ವರ್ಷದಿಂದ ವನಿತಾ ಐಪಿಎಲ್: 5 ತಂಡಗಳ ನಡುವಿನ ಟಿ20 ಮುಖಾಮುಖಿ
ಇಂಡಿಯಾ ಮಹಾರಾಜಾಸ್-ವರ್ಲ್ಡ್ ಜೈಂಟ್ಸ್: 75ರ ಸ್ವಾತಂತ್ರ್ಯ ಸಂಭ್ರಮಕ್ಕೆ ಕ್ರಿಕೆಟ್ ಮೆರುಗು
600 ವಿಕೆಟ್ ಬೇಟೆ : ಟಿ20 ಕ್ರಿಕೆಟ್ನಲ್ಲಿ ದಾಖಲೆ ನಿರ್ಮಿಸಿದ ಡ್ವೇನ್ ಬ್ರಾವೋ
ಕೆನಡಿಯನ್ ಮಾಸ್ಟರ್’ ಟೆನಿಸ್: ಕ್ವಾರ್ಟರ್ ಫೈನಲ್ ಗೆ ನಿಕ್ ಕಿರ್ಗಿಯೋಸ್
MUST WATCH
ಹೊಸ ಸೇರ್ಪಡೆ
ಧಾರವಾಡ ಹೈಕೋರ್ಟ್ ಪೀಠ ಲೋಕ ಅದಾಲತ್: 5 ಕೋಟಿ 77 ಲಕ್ಷ ರೂ.ಮೊತ್ತದ 183 ಪ್ರಕರಣಗಳ ಇತ್ಯರ್ಥ
ಕಾಪು: ಬಿಜೆಪಿ ಮಹಿಳಾ ಮೋರ್ಚಾ ತಿರಂಗಾ ಕಾಲ್ನಡಿಗೆ ಜಾಥಕ್ಕೆ ಸಚಿವೆ ಶೋಭಾ ಚಾಲನೆ
ಪಿನ್ ಕೋಡ್ ಜಾರಿಗೆ ಬಂದು ಆ.15ಕ್ಕೆ 50 ವರ್ಷ: ಅಂಚೆ ಕಚೇರಿಯ ಪಿನ್ ಕೋಡ್ ಇತಿಹಾಸ ಗೊತ್ತಾ?
ರಾರಾಜಿಸಿದ ತ್ರಿವರ್ಣ ಧ್ವಜ-ದಾಖಲೆ ಬರೆದ ರ್ಯಾಲಿ
ಹರ್ ಘರ್ ತಿರಂಗಾ: ಗುಡಿಸಲು,ಜಮೀನಿನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ