ವಿಂಬಲ್ಡನ್ ಟೆನಿಸ್: ಇಗಾ ಸ್ವಿಯಾಟೆಕ್, ಮರಿಯಾ ಸಕ್ಕರಿ ಮುನ್ನಡೆ
Team Udayavani, Jun 29, 2022, 12:19 AM IST
ಲಂಡನ್: ವಿಶ್ವದ ನಂಬರ್ ವನ್ ಆಟಗಾರ್ತಿ ಪೋಲಂಡಿನ ಇಗಾ ಸ್ವಿಯಾಟೆಕ್ ವಿಂಬಲ್ಡನ್ ಟೆನಿಸ್ ಕೂಟದ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ.
ಕ್ರೊವೇಶಿಯದ ಅರ್ಹತಾ ಆಟಗಾರ್ತಿ ಜಾನಾ ಫೆಟ್ ಅವರನ್ನು 6-0, 6-3 ಸೆಟ್‌ಗಳಿಂದ ಸೋಲಿಸಿದ ಸಿಯಾಟೆಕ್ ಅವರು ತನ್ನ ಸತತ ಗೆಲುವಿನ ಸಾಧನೆಯನ್ನು 36 ಪಂದ್ಯಗಳಿಗೆ ವಿಸ್ತರಿಸಿದರು.
ಮೊದಲ ಸೆಟ್‌ನಲ್ಲಿ ಪೂರ್ಣ ಹಿಡಿತ ಸಾಧಿಸಿದ ಸ್ವಿಯಾಟೆಕ್ ಸುಲಭವಾಗಿ ಮೇಲುಗೈ ಸಾಧಿಸಿದ್ದರು. ಈ ವರ್ಷ ಅವರು 17ನೇ ಬಾರಿ 6-0 ಅಂತರದಿಂದ ಸೆಟ್ ಜಯಿಸಿದ ಸಾಧನೆ ಮಾಡಿದ್ದಾರೆ.
ಆದರೆ ದ್ವಿತೀಯ ಸೆಟ್‌ನಲ್ಲಿ ಅವರು ಎದುರಾಳಿಯಿಂದ ಸ್ವಲ್ಪಮಟ್ಟಿಗೆ ಪ್ರತಿರೋಧ ಎದುರಿಸಿದ್ದರು. ಆದರೂ ಅಂತಿಮ ಹಂತದಲ್ಲಿ ಮತ್ತೆ ಬಿರುಸಿನ ಆಟವಾಡಿದ ಸ್ವಿಯಾಟೆಕ್ ಪಂದ್ಯ ಗೆದ್ದರು.
ಇದನ್ನೂ ಓದಿ:ಮಲೇಶ್ಯ ಓಪನ್ ಬ್ಯಾಡ್ಮಿಂಟನ್: ಪ್ರಣಯ್, ಸಾತ್ವಿಕ್-ಚಿರಾಗ್ ಮುನ್ನಡೆ
ಅಮೆರಿಕದ 11ನೇ ಶ್ರೇಯಾಂಕದ ಕೊಕೊ ಗಾಫ್ ಕಠಿನ ಹೋರಾಟದಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ. ಅವರು ರುಮಾನಿಯಾದ ಎಲೆನಾ ಗ್ಯಾಬ್ರಿಯೆಲಾ ರುಸೆ ಅವರನ್ನು 2-6, 6-3, 7-5 ಸೆಟ್‌ಗಳಿಂದ ಕೆಡಹಿ ದ್ವಿತೀಯ ಸುತ್ತಿಗೇರಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಗ್ರೀಸ್‌ನ ಮರಿಯಾ ಸಕ್ಕರಿ ಆಸ್ಟ್ರೇಲಿಯದ ಜೋಯಿ ಹೈವ್ಸ್ ಅವರನ್ನು 6-1, 6-4 ಸೆಟ್‌ಗಳಿಂದ ಉರುಳಿಸಿ ದ್ವಿತೀಯ ಸುತ್ತು ತಲುಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿಂಬಾಬ್ವೆ ಎದುರು 10 ವಿಕೆಟ್ ಗಳ ಗೆಲುವು ಸಾಧಿಸಿದ ಟೀಮ್ ಇಂಡಿಯಾ
ಫಿಬಾ U-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ಗೆ ಸಕಲ ಸಿದ್ಧತೆ
ಇಂದಿನಿಂದ ಏಕದಿನ ಸರಣಿ: ಜಿಂಬಾಬ್ವೆ ವಿರುದ್ಧ ಜಬರ್ದಸ್ತ್ ಆಟದ ನಿರೀಕ್ಷೆ
2023-2027 ಕ್ರಿಕೆಟ್ ಋತು: 38 ಟೆಸ್ಟ್ , 39 ಏಕದಿನ ಪಂದ್ಯ ಆಡಲಿದೆ ಭಾರತ
ವಿನೋದ್ ಕಾಂಬ್ಳಿ ಈಗ ನಿರುದ್ಯೋಗಿ; ಬಿಸಿಸಿಐ ಪಿಂಚಣಿಯೇ ಜೀವನಕ್ಕೆ ಆಧಾರ