ವನಿತಾ ಕ್ರಿಕೆಟ್: ಭಾರತ “ಎ’ 3-0 ಕ್ಲೀನ್ಸ್ವೀಪ್ ಸಾಧನೆ
Team Udayavani, Oct 27, 2018, 6:00 AM IST
ಮುಂಬಯಿ: ಟಿ20 ಕ್ರಿಕೆಟ್ನಲ್ಲಿ ಅಜೇಯ ಪರಾಕ್ರಮ ಮುಂದುವರಿಸಿದ ಭಾರತ “ಎ’ ತಂಡ ಪ್ರವಾಸಿ ಆಸ್ಟ್ರೇಲಿಯ “ಎ’ಯನ್ನು ಮೂರನೇ ಪಂದ್ಯದಲ್ಲೂ ಮಣಿಸಿ ಸರಣಿಯನ್ನು ಕ್ಲೀನ್ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ಇದ ರೊಂದಿಗೆ ಏಕದಿನ ಸರಣಿಯಲ್ಲಿ ಅನುಭವಿಸಿದ 3-0 ಸೋಲಿಗೆ ಭಾರತ ಇಷ್ಟೇ ಅಂತರದಿಂದ ಸೇಡು ತೀರಿಸಿಕೊಂಡಿತು.
ಶುಕ್ರವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 8 ವಿಕೆಟಿಗೆ 154 ರನ್ ಗಳಿಸಿದರೆ, ಆಸ್ಟ್ರೇಲಿಯ “ಎ’ 19.2 ಓವರ್ಗಳಲ್ಲಿ 117ಕ್ಕೆ ಕುಸಿದು 37 ರನ್ನುಗಳ ಸೋಲನುಭವಿಸಿತು. ಪೂನಂ ಯಾದವ್ (23ಕ್ಕೆ 3), ಪೂಜಾ ವಸ್ತ್ರಾಕರ್ (21ಕ್ಕೆ 2) ಮತ್ತು ಅನುಜಾ ಪಾಟೀಲ್ (26ಕ್ಕೆ 2) ಆಸೀಸ್ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು.
18 ರನ್ ಆಗುವಷ್ಟರಲ್ಲಿ ಮಿಥಾಲಿ ರಾಜ್ (7) ಮತ್ತು ಸ್ಮತಿ ಮಂಧನಾ (5) ವಿಕೆಟ್ ಕಳೆದುಕೊಂಡ ಭಾರತಕ್ಕೆ ಜೆಮಿಮಾ ರೋಡ್ರಿಗಸ್ (38) ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ (41) ಆಸರೆಯಾಗಿ ನಿಂತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಕೆಕೆಆರ್ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ