ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ : ಪಾಕಿಸ್ಥಾನಕ್ಕೆ ಎದುರಾಗಿದೆ ಭಾರತದ ಭೀತಿ


Team Udayavani, Oct 7, 2022, 7:30 AM IST

thumb cricket women

ಬಾಂಗ್ಲಾದೇಶ: ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾ ವಳಿಯಲ್ಲಿ ಹ್ಯಾಟ್ರಿಕ್‌ ಜಯದೊಂದಿಗೆ ಮುನ್ನುಗ್ಗಿರುವ ಅಜೇಯ ಭಾರತ ಶುಕ್ರವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧ ಸೆಣಸಲಿದೆ. ಇದನ್ನು ಗೆದ್ದರೆ ಹರ್ಮನ್‌ಪ್ರೀತ್‌ ಕೌರ್‌ ಪಡೆಯ ಸೆಮಿಫೈನಲ್‌ ಪ್ರವೇಶ ಬಹುತೇಕ ಖಾತ್ರಿಯಾಗಲಿದೆ.

ಆರಂಭಿಕ ಲೆಕ್ಕಾಚಾರದಂತೆ ಭಾರತ- ಪಾಕಿಸ್ಥಾನ ನಡುವಿನ ಮುಖಾಮುಖೀ ಯನ್ನು ಹೈ ವೋಲ್ಟೆàಜ್‌ ಪಂದ್ಯವೆಂದೇ ಭಾವಿಸಲಾಗಿತ್ತು. ಆದರೆ ಯಾವಾಗ ಥಾಯ್ಲೆಂಡ್‌ನ‌ಂಥ ಸಾಮಾನ್ಯ ತಂಡಕ್ಕೆ ಪಾಕಿಸ್ಥಾನ ಶರಣಾಯಿತೋ, ಅಲ್ಲಿಗೆ ಕೌರ್‌ ಪಡೆಯೇ ಹಾಟ್‌ ಫೇವರಿಟ್‌ ಆಗಿ ಗೋಚರಿಸತೊಡಗಿದೆ.

ಭಾರತದೆದುರಿನ ಪಂದ್ಯಕ್ಕೆ ಕೇವಲ ಒಂದು ದಿನ ಉಳಿದಿರುವಾಗ ಎದು ರಾದ ಈ ಆಘಾತಕಾರಿ ಸೋಲು ಪಾಕಿಸ್ಥಾನದ ಆತ್ಮಸ್ಥೈರ್ಯವನ್ನು ಉಡುಗಿಸಿದ್ದು ಸುಳ್ಳಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ದಲ್ಲಿರುವ ತಂಡಗಳ ನಡುವಿನ ಈ ಹೋರಾಟ ಕಾವೇರಿಸಿಕೊಂಡೀತೇ ಅಥವಾ ಏಕಪಕ್ಷೀಯವಾಗಿ ಸಾಗೀತೇ ಎಂಬುದೊಂದು ಪ್ರಶ್ನೆ. ಒಮ್ಮೆಲೇ ಚೇತ ರಿಕೆ ಕಂಡು ಅಜೇಯ ಭಾರತವನ್ನು ಎದುರಿಸುವುದು ಬಿಸ್ಮಾ ಮರೂಫ್ ಪಡೆಗೆ ಖಂಡಿತವಾಗಿಯೂ ಸುಲಭ ಸಾಧ್ಯವಲ್ಲ.

ದೊಡ್ಡ ಸವಾಲಲ್ಲ
ಶ್ರೀಲಂಕಾ ವಿರುದ್ಧ 41 ರನ್‌ ಅಂತ ರದಿಂದ ಗೆದ್ದು ಅಭಿಯಾನ ಆರಂಭಿಸಿದ ಭಾರತ, ಅನಂತರ ದುರ್ಬಲ ತಂಡ ಗಳಾದ ಮಲೇಷ್ಯಾ ಮತ್ತು ಯುಎಇ ವಿರುದ್ಧ ಸುಲಭ ಜಯವನ್ನೇ ಸಾಧಿ ಸಿತು. ಈಗಿನ ಫಾರ್ಮ್ ಪ್ರಕಾರ ಪಾಕಿಸ್ಥಾನವನ್ನು ಉರುಳಿಸುವುದು ಕೌರ್‌ ಬಳಗಕ್ಕೆ ದೊಡ್ಡ ಸವಾಲೇನೂ ಅನಿಸದು.

ಕೊನೆಯ ಎರಡು ಪಂದ್ಯಗಳನ್ನು ಭಾರತ ತಂಡ ಸಂಪೂರ್ಣ ಪ್ರಯೋಗ ಕ್ಕಾಗಿ ಮೀಸಲಿರಿಸಿತು. ಇಲ್ಲಿ ಬರೋಬ್ಬರಿ 8 ಬದಲಾವಣೆ ಮಾಡಿಕೊಂಡಿತು.

ಸತತ ಐದು ಗೆಲುವು
ಪಾಕಿಸ್ಥಾನವನ್ನು ಮಣಿಸುವುದು ಭಾರತದ ವನಿತೆಯರಿಗೆ ಯಾವತ್ತೂ ದೊಡ್ಡ ಸವಾಲೆನಿಸಲಿಲ್ಲ. ಕಳೆದ 5 ಪಂದ್ಯಗಳಲ್ಲಿ ಸುಲಭ ಜಯವನ್ನೇ ಸಾಧಿಸಿದೆ. ಇದರಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ನಲ್ಲಿ ಸಾಧಿಸಿದ ಗೆಲುವು ಕೂಡ ಸೇರಿದೆ. ಸತತ ಗೆಲುವು ಆರಕ್ಕೇರುವ ನಿರೀಕ್ಷೆ ಭಾರತದ ಕ್ರಿಕೆಟ್‌ ಪ್ರೇಮಿಗಳದ್ದು.

ಪಾಕ್‌ಗೆ ಆಘಾತವಿಕ್ಕಿದ ಥಾಯ್ಲೆಂಡ್‌
ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅನನುಭವಿ ಥಾಯ್ಲೆಂಡ್‌ ತಂಡ ದೊಡ್ಡದೊಂದು ಏರುಪೇರಿನ ಫ‌ಲಿತಾಂಶ ದಾಖಲಿಸಿದೆ. ಪಾಕಿಸ್ಥಾನವನ್ನು 4 ವಿಕೆಟ್‌ಗಳಿಂದ ಕೆಡವಿ ಅಚ್ಚರಿ ಮೂಡಿಸಿದೆ. ಈ ಆಘಾತಕಾರಿ ಸೋಲಿನಿಂದ ಶುಕ್ರವಾರ ಭಾರತವನ್ನು ಎದುರಿಸಲಿರುವ ಪಾಕ್‌ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.

ಗುರುವಾರದ ಮುಖಾಮುಖೀಯಲ್ಲಿ ಪಾಕಿಸ್ಥಾನವನ್ನು ಹಿಡಿದು ನಿಲ್ಲಿಸಲು ಥಾಯ್ಲೆಂಡ್‌ ಬೌಲರ್ ಧಾರಾಳ ಯಶಸ್ಸು ಕಂಡರು. ಸತತ 3ನೇ ಗೆಲುವಿನ ಯೋಜನೆ ಹಾಕಿಕೊಂಡಿದ್ದ ಪಾಕ್‌ಗೆ ಗಳಿಸಲು ಸಾಧ್ಯವಾದ್ದು 5 ವಿಕೆಟಿಗೆ 116 ರನ್‌ ಮಾತ್ರ. ಥಾಯ್ಲೆಂಡ್‌ 19.5 ಓವರ್‌ಗಳಲ್ಲಿ 6 ವಿಕೆಟಿಗೆ 117 ರನ್‌ ಬಾರಿಸಿ ಅಂಕದ ಖಾತೆ ತೆರೆಯಿತು.

ಇದು ಕಳೆದ 4 ವರ್ಷಗಳಲ್ಲಿ ಥಾಯ್ಲೆಂಡ್‌ ವನಿತೆಯರು ಸಾಧಿಸಿದ 4ನೇ ದೊಡ್ಡ ಗೆಲುವು. ಇದಕ್ಕೂ ಮೊದಲು 2018ರಲ್ಲಿ ಶ್ರೀಲಂಕಾವನ್ನು, 2021ರಲ್ಲಿ ಜಿಂಬಾಬ್ವೆಯನ್ನು 2 ಸಲ ಸೋಲಿಸಿತ್ತು. ಪಾಕಿಸ್ಥಾನವನ್ನು ಪರಾಭವಗೊಳಿಸಿದ್ದು ಇದೇ ಮೊದಲು.

ಟಾಪ್ ನ್ಯೂಸ್

caste census ವರದಿ ಸ್ವೀಕಾರಕ್ಕೆ ಫೆ. 29ರ ವರೆಗೆ ಕಾಯಿರಿ: ತಂಗಡಗಿ

caste census ವರದಿ ಸ್ವೀಕಾರಕ್ಕೆ ಫೆ. 29ರ ವರೆಗೆ ಕಾಯಿರಿ: ತಂಗಡಗಿ

ಮಾನವೀಯತೆ ಆಧಾರದಲ್ಲಿ 28 ಮಂದಿಗೆ ನೇಮಕಾತಿ ಪತ್ರ: ಪರಮೇಶ್ವರ್‌

Council session; ಮಾನವೀಯತೆ ಆಧಾರದಲ್ಲಿ 28 ಮಂದಿಗೆ ನೇಮಕಾತಿ ಪತ್ರ: ಪರಮೇಶ್ವರ್‌

ಸದನದಲ್ಲಿ ಸಚಿವರ ಮಹಾಪೂರ: ಕಾಲೆಳೆದ ಪ್ರತಾಪಸಿಂಹ ನಾಯಕ್‌

ಸದನದಲ್ಲಿ ಸಚಿವರ ಮಹಾಪೂರ: ಕಾಲೆಳೆದ ಪ್ರತಾಪಸಿಂಹ ನಾಯಕ್‌

Karnataka: ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

Karnataka: ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

Mangaluru ಎಂಡಿಎಂಎ ಮಾರಾಟ: ಆರೋಪಿಯ ಬಂಧನ

Mangaluru ಎಂಡಿಎಂಎ ಮಾರಾಟ: ಆರೋಪಿಯ ಬಂಧನ

1-weqwqe

Belagavi; ಇಂದು ಮತ್ತೊಂದು ಭೀಕರ ಅಪಘಾತ: 6 ಮಂದಿ ದುರ್ಮರಣ!

arrested

IAF; ವಿಂಗ್ ಕಮಾಂಡರ್ ಎಂದು ಏರ್ ಫೋರ್ಸ್ ಸ್ಟೇಷನ್ ಪ್ರವೇಶಿಸಿದವನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

joe

INDvsENG; ಬಾಜ್ ಬಾಲ್ ಬಿಟ್ಟು ಆಡಿದ ರೂಟ್ ಶತಕ; ಆಕಾಶ್ ದೀಪ್ ಸ್ಮರಣೀಯ ಪದಾರ್ಪಣೆ

Shreyas Iyer, Ishan Kishan might lose central contracts

Team India; ಇಶಾನ್ ಕಿಶನ್- ಶ್ರೇಯಸ್ ಅಯ್ಯರ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಬಿಸಿಸಿಐ

England spinner Rehan Ahmed returned home in the middle of the series

INDvsENG ಸರಣಿಯ ಮಧ್ಯೆಯೇ ತವರಿಗೆ ಮರಳಿದ ಇಂಗ್ಲೆಂಡ್ ಸ್ಪಿನ್ನರ್ ರೆಹಾನ್ ಅಹ್ಮದ್

INDvsENG; ಆರ್ ಸಿಬಿ ಬೌಲರ್ ವೇಗಕ್ಕೆ ಕಂಗಾಲಾದ ಆಂಗ್ಲರು; ಮೊದಲ ಪಂದ್ಯದಲ್ಲೇ ಆಕಾಶ್ ಮಿಂಚು

INDvsENG; ಆರ್ ಸಿಬಿ ಬೌಲರ್ ವೇಗಕ್ಕೆ ಕಂಗಾಲಾದ ಆಂಗ್ಲರು; ಮೊದಲ ಪಂದ್ಯದಲ್ಲೇ ಆಕಾಶ್ ಮಿಂಚು

31

WPL: ವನಿತಾ ಪ್ರೀಮಿಯರ್‌ ಲೀಗ್‌-2: ಯುವ ಆಟಗಾರ್ತಿಯರಿಗೆ ವೇದಿಕೆ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

caste census ವರದಿ ಸ್ವೀಕಾರಕ್ಕೆ ಫೆ. 29ರ ವರೆಗೆ ಕಾಯಿರಿ: ತಂಗಡಗಿ

caste census ವರದಿ ಸ್ವೀಕಾರಕ್ಕೆ ಫೆ. 29ರ ವರೆಗೆ ಕಾಯಿರಿ: ತಂಗಡಗಿ

ಮಾನವೀಯತೆ ಆಧಾರದಲ್ಲಿ 28 ಮಂದಿಗೆ ನೇಮಕಾತಿ ಪತ್ರ: ಪರಮೇಶ್ವರ್‌

Council session; ಮಾನವೀಯತೆ ಆಧಾರದಲ್ಲಿ 28 ಮಂದಿಗೆ ನೇಮಕಾತಿ ಪತ್ರ: ಪರಮೇಶ್ವರ್‌

ಸದನದಲ್ಲಿ ಸಚಿವರ ಮಹಾಪೂರ: ಕಾಲೆಳೆದ ಪ್ರತಾಪಸಿಂಹ ನಾಯಕ್‌

ಸದನದಲ್ಲಿ ಸಚಿವರ ಮಹಾಪೂರ: ಕಾಲೆಳೆದ ಪ್ರತಾಪಸಿಂಹ ನಾಯಕ್‌

Karnataka: ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

Karnataka: ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

Mangaluru ಎಂಡಿಎಂಎ ಮಾರಾಟ: ಆರೋಪಿಯ ಬಂಧನ

Mangaluru ಎಂಡಿಎಂಎ ಮಾರಾಟ: ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.