ವನಿತಾ ವಿಶ್ವಕಪ್‌: ಕಾಂಗರೂ ನಾಲ್ಕನೇ ಗೆಲುವಿನ ನಾಗಾಲೋಟ

Team Udayavani, Mar 15, 2022, 11:03 PM IST

ವನಿತಾ ವಿಶ್ವಕಪ್‌: ಕಾಂಗರೂ ನಾಲ್ಕನೇ ಗೆಲುವಿನ ನಾಗಾಲೋಟ

ವೆಲ್ಲಿಂಗ್ಟನ್‌: ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ಸತತ 4ನೇ ಜಯ ದೊಂದಿಗೆ ಮುನ್ನುಗ್ಗಿದೆ. ಮಂಗಳವಾರದ ಮುಖಾಮುಖಿಯಲ್ಲಿ ಅದು ವೆಸ್ಟ್‌ ಇಂಡೀಸ್‌ ವಿರುದ್ಧ 7 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವೆಸ್ಟ್‌ ಇಂಡೀಸ್‌ಗೆ ಕಾಂಗರೂ ದಾಳಿಯನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಅದು 45.5 ಓವರ್‌ಗಳಲ್ಲಿ 131 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿಯಿತು. ಜವಾಬಿತ್ತ ಆಸ್ಟ್ರೇಲಿಯ 30.2 ಓವರ್‌ಗಳಲ್ಲಿ 3 ವಿಕೆಟಿಗೆ 132 ರನ್‌ ಬಾರಿಸಿತು.

ಆಸ್ಟ್ರೇಲಿಯ ಈ ಕೂಟದ ನಾಲ್ಕೂ ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿದೆ. ಜತೆಗೆ ಸೆಮಿಫೈನಲ್‌ ಪ್ರವೇಶವೂ ಖಾತ್ರಿಯಾಗಿದೆ. ಇನ್ನೊಂದೆಡೆ ಸತತ 2 ಜಯದೊಂದಿಗೆ ಓಟ ಆರಂಭಿಸಿದ ವೆಸ್ಟ್‌ ಇಂಡೀಸ್‌ ಈಗ ಸತತ 2 ಸೋಲುಗಳ ಆಘಾತಕ್ಕೆ ಸಿಲುಕಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿದೆ.

ಪೆರ್ರಿ ಪ್ರಚಂಡ ದಾಳಿ
ಮಧ್ಯಮ ವೇಗಿ ಎಲ್ಲಿಸ್‌ ಪೆರ್ರಿ ಮತ್ತು ಆಫ್‌ಸ್ಪಿನ್ನರ್‌ ಆ್ಯಶ್ಲಿ ಗಾರ್ಡನರ್‌ ಕೆರಿಬಿಯನ್‌ ಸರದಿಯ ಮೇಲೆ ಘಾತಕವಾಗಿ ಎರಗಿದರು. ಇಬ್ಬರೂ 3 ವಿಕೆಟ್‌ ಉಡಾಯಿಸಿದರು. ಪೆರ್ರಿ ತಮ್ಮ ಮೊದಲ ಓವರ್‌ನಲ್ಲೇ ಹ್ಯಾಲಿ ಮ್ಯಾಥ್ಯೂಸ್‌ ಮತ್ತು ಕೈಸಿಯಾ ನೈಟ್‌ ಅವರನ್ನು ಸತತ ಎಸೆತಗಳಲ್ಲಿ ಕೆಡವಿ ವಿಂಡೀಸಿಗೆ ಬಲವಾದ ಆಘಾತವಿಕ್ಕಿದರು. ಇಬ್ಬರೂ ಖಾತೆ ತೆರೆದಿರಲಿಲ್ಲ.

ನಾಯಕಿ ಸ್ಟಫಾನಿ ಟೇಲರ್‌ ಅರ್ಧ ಶತಕವೊಂದೇ ವಿಂಡೀಸ್‌ ಇನ್ನಿಂಗ್ಸ್‌ನ ಗಮನಾರ್ಹ ಮೊತ್ತವಾಗಿತ್ತು. ಒಂದೆಡೆ ವಿಕೆಟ್‌ಗಳು ಉದುರುತ್ತಿದ್ದರೂ 91 ಎಸೆತ ಎದುರಿಸಿ ನಿಂತ ಟೇಲರ್‌ ಭರ್ತಿ 50 ರನ್‌ ಹೊಡೆದರು.

ಹೇನ್ಸ್‌ ಅಜೇಯ ಆಟ
ಆಸ್ಟ್ರೇಲಿತ ಕೂಡ 2 ವಿಕೆಟ್‌ಗಳನ್ನು 7 ರನ್‌ ಆಗುವುದರೊಳಗೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಎಲ್ಲಿಸ್‌ ಪೆರ್ರಿ (10) ಕೂಡ ಅಗ್ಗಕ್ಕೆ ಔಟಾದರು. ಆದರೆ ಓಪನರ್‌ ರಶೆಲ್‌ ಹೇನ್ಸ್‌ ಅಜೇಯ 83 ರನ್‌ ಬಾರಿಸಿ ತಂಡಕ್ಕೆ ಯಾವುದೇ ಆತಂಕ ಎದುರಾಗದಂತೆ ನೋಡಿಕೊಂಡರು (95 ಎಸೆತ, 9 ಬೌಂಡರಿ). ಇವರೊಂದಿಗೆ ಬೆತ್‌ ಮೂನಿ 28 ರನ್‌ ಮಾಡಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-45.5 ಓವರ್‌ಗಳಲ್ಲಿ 131 (ಟೇಲರ್‌ 50, ಕ್ಯಾಂಬೆಲ್‌ 20, ಡಾಟಿನ್‌ 16, ಪೆರ್ರಿ 22ಕ್ಕೆ 3, ಗಾರ್ಡನರ್‌ 25ಕ್ಕೆ 3, ಜೊನಾಸೆನ್‌ 18ಕ್ಕೆ 2). ಆಸ್ಟ್ರೇಲಿಯ-30.2 ಓವರ್‌ಗಳಲ್ಲಿ 3 ವಿಕೆಟಿಗೆ 132 (ಹೇನ್ಸ್‌ ಔಟಾಗದೆ 83, ಮೂನಿ ಔಟಾಗದೆ 28, ಹೆನ್ರಿ 20ಕ್ಕೆ 1, ಮ್ಯಾಥ್ಯೂಸ್‌ 31ಕ್ಕೆ 1, ಕಾನೆಲ್‌ 32ಕ್ಕೆ 1). ಪಂದ್ಯಶ್ರೇಷ್ಠ: ಎಲ್ಲಿಸ್‌ ಪೆರ್ರಿ.

ಟಾಪ್ ನ್ಯೂಸ್

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.