ವಿಶ್ವಕಪ್‌ ಕ್ರಿಕೆಟ್‌ ನಾಯಕಿಯರ “ಮೀಡಿಯಾ ಡೇ’


Team Udayavani, Feb 18, 2020, 6:30 AM IST

media-day

ಸಿಡ್ನಿ: ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಕ್ಷಣಗಣನೆ ಆರಂಭವಾಗಿದೆ. ಶುಕ್ರ ವಾರದಿಂದ ಆಸ್ಟ್ರೇಲಿಯದಲ್ಲಿ ಈ ಮುಖಾಮುಖೀ ಆರಂಭ ವಾಗಲಿದ್ದು, 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಿಡ್ನಿಯ ವಿಶ್ವವಿಖ್ಯಾತ “ಟರೋಂಗ ಝೂ’ನಲ್ಲಿ ಎಲ್ಲ ನಾಯಕಿಯರು “ಮೀಡಿಯಾ ಡೇ’ ಆಚರಿಸಿ ಮಾಧ್ಯಮದವರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಇದಕ್ಕೆ ಮೃಗಾಲ ಯದ ಪ್ರಾಣಿ ಪಕ್ಷಿಗಳೂ ಸಾಕ್ಷಿಯಾದವು!

ಫೆ. 21ರಿಂದ ಆರಂಭವಾಗಲಿರುವ ವನಿತಾ ಟಿ20 ವಿಶ್ವಕಪ್‌ ಮುಖಾಮುಖೀಯ ಫೈನಲ್‌ “ಅಂತಾರಾಷ್ಟ್ರೀಯ ವನಿತಾ ದಿನ’ವಾದ ಮಾ. 8ರಂದು ನಡೆಯುವುದು ವಿಶೇಷ. ಮೆಲ್ಬರ್ನ್ನಲ್ಲಿ ನಡೆಯುವ ಫೈನಲ್‌ನಲ್ಲಿ ದಾಖಲೆ ಸಂಖ್ಯೆಯ ವೀಕ್ಷಕರು ನೆರೆಯುವ ಸಂಭವವಿದೆ.

ಮಾಧ್ಯಮದವರೊಂದಿಗಿನ ಮುಖಾಮುಖೀ ವೇಳೆ ಎಲ್ಲ ನಾಯಕಿಯರು ತಮ್ಮ ಅಭಿಪ್ರಾಯವನ್ನು ಹಂಚಿ ಕೊಂಡರು. ಈ ಸಂದರ್ಭದಲ್ಲಿ ಮಾತಾಡಿದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌, “ನಮ್ಮ ಗೆಳೆಯರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಪ್ರತಿಷ್ಠಿತ ವಿಶ್ವಕಪ್‌ ಆಡುವುದು ಹೆಮ್ಮೆಯ ಸಂಗತಿ. ಇದು ಜೀವಮಾನದಲ್ಲಿ ಒಮ್ಮೆ ಸಿಗುವ ಅವಕಾಶ. ಸಹಜವಾಗಿಯೇ ಒತ್ತಡ, ನಿರೀಕ್ಷೆ ಎರಡೂ ಇದೆ. ನಮ್ಮಂತೆ ಎಲ್ಲ ತಂಡಗಳೂ ಗೆಲುವಿಗೆ ಹೋರಾಡುತ್ತವೆ. ಸಹಜವಾಗಿಯೇ ಪೈಪೋಟಿ ಇರಲಿದೆ…’ ಎಂದರು.

ಫೆ. 21ರ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯ-ಭಾರತ ಮುಖಾಮುಖೀಯಾಗಲಿವೆ.

ಗೆದ್ದರೆ ಮಹಾನ್‌ ಸಾಧನೆ
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೂಡ ಭರವಸೆಯ ಮಾತಾಡಿದರು. “ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿ. ನಮ್ಮ ತಂಡ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ. 2018ರ ನಮ್ಮ ಸಾಧನೆ, ಇದಕ್ಕೆ ಲಭಿಸಿದ ಪ್ರತಿಕ್ರಿಯೆಯನ್ನೆಲ್ಲ ಕಂಡು ಆಶ್ಚರ್ಯವಾಗಿದೆ. ಕಪ್‌ ಎತ್ತಿದರೆ ಅದೊಂದು ಮಹಾನ್‌ ಸಾಧನೆಯಾಗಲಿದೆ’ ಎಂದು ಕೌರ್‌ ಹೇಳಿದರು.

ಈವರೆಗಿನ 6 ಟಿ20 ವಿಶ್ವಕಪ್‌ ಕೂಟಗಳಲ್ಲಿ ಭಾರತ ಒಮ್ಮೆಯೂ ಫೈನಲ್‌ ಪ್ರವೇಶಿಸಿಲ್ಲ. 3 ಸಲ ಸೆಮಿಫೈನಲ್‌ ಪ್ರವೇಶಿಸಿ ಸೋಲನುಭವಿಸಿದೆ. 2016ರ ತವರಿನ ಪಂದ್ಯಾವಳಿಯಲ್ಲೂ ಭಾರತಕ್ಕೆ ಅದೃಷ್ಟ ಕೈ ಹಿಡಿದಿರಲಿಲ್ಲ.

7ನೇ ವಿಶ್ವಕಪ್‌ ಪಂದ್ಯಾವಳಿ
ಇದು ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ 7ನೇ ಆವೃತ್ತಿ. ಆಸ್ಟ್ರೇಲಿಯ ಅತೀ ಹೆಚ್ಚು 4 ಸಲ ಚಾಂಪಿಯನ್‌ ಆಗಿದೆ. ಇಂಗ್ಲೆಂಡ್‌ ಮತ್ತು ವಿಂಡೀಸ್‌ ಒಮ್ಮೆ ಪ್ರಶಸ್ತಿ ಎತ್ತಿವೆ.

ಹಾಗೆಯೇ ಫೈನಲ್‌ನಲ್ಲಿ ಇಂಗ್ಲೆಂಡ್‌ 3 ಸಲ, ನ್ಯೂಜಿಲ್ಯಾಂಡ್‌ 2 ಸಲ ಸೋಲನುಭವಿಸಿವೆ. ಆಸ್ಟ್ರೇಲಿಯ ಒಮ್ಮೆ ರನ್ನರ್ ಅಪ್‌ ಆಗಿದೆ.

ಹಿರಿಯರ ಅನುಪಸ್ಥಿತಿ ಕಾಡಲಿದೆ
“ಅನುಭವಿಗಳಾದ ಮಿಥಾಲಿ ರಾಜ್‌ ಮತ್ತು ಜೂಲನ್‌ ಗೋಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಆಡುತ್ತಿರುವ ಕಾರಣ ನಮಗೆ ಕೊಂಚ ಹಿನ್ನಡೆಯಾಗಲಿದೆ’ ಎಂಬುದು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅಭಿಪ್ರಾಯ.

“ಯುವ ಆಟಗಾರರನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ನಮ್ಮ ತಂಡ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಲಿದೆ. ಆದರೆ ಎಲ್ಲೋ ಒಂದು ಕಡೆ ಹಿರಿಯ ಆಟಗಾರರ ಮಾರ್ಗದರ್ಶನ, ಸಲಹೆ ಲಭಿಸದ ಕಾರಣ ಬೇಸರವೂ ಆಗುತ್ತಿದೆ’ ಎಂದು ಕೌರ್‌ ಅಭಿಪ್ರಾಯಪಟ್ಟರು. ಮಿಥಾಲಿ ರಾಜ್‌ ಕಳೆದ ವರ್ಷ ಟಿ20 ಕ್ರಿಕೆಟಿಗೆ ವಿದಾಯ ಘೋಷಿಸಿದ್ದರು.

ಟಾಪ್ ನ್ಯೂಸ್

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

Untitled-1

ಬ್ಯಾಡಗಿ ಮೆಣಸಿನಕಾಯಿ ಬೆಳೆದ ಅಡಕೆ ಕೃಷಿಕ

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

Untitled-1

ಕಡಬ: ನೂಜಿಬಾಳ್ತಿಲ ಶಾಲೆಯಲ್ಲಿ ಗ್ಯಾಸ್ ಸೋರಿಕೆ; ತಪ್ಪಿದ ದುರಂತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

51

ಪಾಕ್ ವಿರುದ್ಧ ಸೋಲಿನ ನಡುವೆಯೂ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ, ಧೋನಿ

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

ಐಪಿಎಲ್‌: ಇಂದು ಹೊಸ ತಂಡಗಳ ಖರೀದಿಗೆ ಸ್ಪರ್ಧೆ

MUST WATCH

udayavani youtube

ಶಾಲಾ ಪ್ರಾರಂಭೋತ್ಸವ : ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

ಹೊಸ ಸೇರ್ಪಡೆ

20kannada

ಅನ್ಯಭಾಷಿಕರಿಗೆ ಕನ್ನಡ ಕಲಿಸಿ: ಮಹಾದೇವ ಮುರಗಿ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

16 ಪದವಿ ಕಾಲೇಜುಗಳ ಬಿಕಾಂ ಫಲಿತಾಂಶಕ್ಕೆ ತಡೆ

16 ಪದವಿ ಕಾಲೇಜುಗಳ ಬಿಕಾಂ ಫಲಿತಾಂಶಕ್ಕೆ ತಡೆ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.