ವನಿತಾ ವಿಶ್ವಕಪ್ ಹಾಕಿ: ಭಾರತ-ಇಂಗ್ಲೆಂಡ್ 1-1 ಡ್ರಾ
Team Udayavani, Jul 22, 2018, 9:23 AM IST
ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ದಿಟ್ಟ ಪ್ರದರ್ಶನ ನೀಡಿ ಇನ್ನೇನು ಗೆಲುವನ್ನು ಒಲಿಸಿಕೊಂಡೇ ಬಿಟ್ಟಿತು ಎನ್ನುವ ಹಂತದಲ್ಲಿ ಎಡವಿದ ಭಾರತ, ವನಿತಾ ವಿಶ್ವಕಪ್ ಹಾಕಿ ಕೂಟದ ಆರಂಭಿಕ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಶನಿವಾರ ಇಲ್ಲಿನ “ಲೀ ವ್ಯಾಲಿ ಹಾಕಿ ಆ್ಯಂಡ್ ಟೆನಿಸ್ ಸೆಂಟರ್’ನಲ್ಲಿ ನಡೆದ “ಬಿ’ ವಿಭಾಗದ ಪಂದ್ಯದಲ್ಲಿ ಭಾರತದ ಪರ ನೇಹಾ ಗೋಯಲ್ 25ನೇ ನಿಮಿಷದಲ್ಲಿ ಗೋಲು ಬಾರಿಸಿ ಮೇಲುಗೈ ಒದಗಿಸಿದರು. ಇದನ್ನು ಭಾರತ 53ನೇ ನಿಮಿಷದ ತನಕ ಕಾಯ್ದುಕೊಂಡು ಬಂತು. ಆಗ ಮುನ್ನುಗ್ಗಿ ಬಂದ ಲಿಲಿ ಓವ್ಸ್ಲಿ ಸಮಬಲದ ಗೋಲು ಸಿಡಿಸಿ ಇಂಗ್ಲೆಂಡನ್ನು ಸೋಲಿನ ಸಂಕಟದಿಂದ ಪಾರುಮಾಡಿದರು. ಕೈಲಿದ್ದ ಪಂದ್ಯವನ್ನು ಕಳೆದುಕೊಂಡ ರಾಣಿ ರಾಮ್ಪಾಲ್ ಪಡೆ 1-1 ಡ್ರಾಗೆ ಸಮಾಧಾನ ಪಡಬೇಕಾಯಿತು.
ಸವಿತಾ ಅಮೋಘ ಕೀಪಿಂಗ್
ದ್ವಿತೀಯ ಕ್ವಾರ್ಟರ್ನಲ್ಲೂ ಇಂಗ್ಲೆಂಡ್ 3 ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿ ತಾದರೂ ಗೋಲು ದಾಖಲಾಗಲಿಲ್ಲ. ಈ ಅವಧಿಯಲ್ಲಿ ಸವಿತಾ ಅವರ ಗೋಲ್ ಕೀಪಿಂಗ್ ಅಮೋಘ ಮಟ್ಟದಲ್ಲಿತ್ತು. 25ನೇ ನಿಮಿಷದಲ್ಲಿ ನೇಹಾ ಆಕರ್ಷಕ ಫೀಲ್ಡ್ ಗೋಲ್ ಮೂಲಕ ಭಾರತದ ಪಾಳೆಯದಲ್ಲಿ ಸಂಭ್ರಮ ಉಕ್ಕಿಸಿದರು. ಇಂಗ್ಲೆಂಡ್ ರೆಫರಲ್ ಮೊರೆ ಹೋಯಿ ತಾದರೂ ತೀರ್ಪು ಭಾರತದ ಪರವಾಗಿಯೇ ಬಂತು. ವಿರಾಮದ ವೇಳೆ ಭಾರತ 1-0 ಮುನ್ನಡೆಯಲ್ಲಿತ್ತು.
ಓವ್ಸ್ಲಿ ಸಮಬಲದ ಹೊಡೆತ
3ನೇ ಕ್ವಾರ್ಟರ್ನಲ್ಲಿ ಅಲೆಕ್ಸ್ ಡಾನ್ಸನ್ ಮುನ್ನುಗ್ಗಿ ಬಂದಾಗಲೂ ಗೋಲಿ ಸವಿತಾ ಭಾರತವನ್ನು ಬಚಾಯಿಸಿದರು. ಆದರೆ ಕೊನೆಯ ಕ್ವಾರ್ಟರ್ನಲ್ಲಿ ಓವ್ಸ್ಲಿ ಹೊಡೆತ ವನ್ನು ತಡೆಯಲು ಅವರಿಂದಾಗಲಿಲ್ಲ. ಭಾರತ ತನ್ನ 2ನೇ ಲೀಗ್ ಪಂದ್ಯವನ್ನು ಜು. 26ರಂದು ಅಯರ್ಲ್ಯಾಂಡ್ ವಿರುದ್ಧ ಆಡಲಿದೆ.
ಪೆನಾಲ್ಟಿ ಹೊಡೆತಗಳಿಗೆ ತಡೆ
ಇಂಗ್ಲೆಂಡ್ ಆರಂಭದಿಂದಲೇ ಆಕ್ರಮಣಕಾರಿ ಆಟದ ಮೂಲಕ ಮೇಲುಗೈ ಸಾಧಿಸಿತು. ಭಾರತ ಅಮೋಘ ರಕ್ಷಣಾತ್ಮಕ ಆಟವಾಡಿ ಆತಿಥೇಯರಿಗೆ ತಡೆಯೊಡ್ಡಿತು. ಹೀಗಾಗಿ ಇಂಗ್ಲೆಂಡಿಗೆ ಮೊದಲ ಕ್ವಾರ್ಟರ್ನಲ್ಲಿ ಲಭಿಸಿದ ಎರಡೂ ಪೆನಾಲ್ಟಿ ಕಾರ್ನರ್ಗಳು ವ್ಯರ್ಥವಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ