ವಿಶ್ವಕಪ್ ಶೂಟಿಂಗ್: ಭಾರತಕ್ಕೆ ಮಿಕ್ಸೆಡ್ ತಂಡ ಪ್ರಶಸ್ತಿ
Team Udayavani, May 31, 2019, 6:00 AM IST
ಹೊಸದಿಲ್ಲಿ: ಜರ್ಮನಿಯ ಮ್ಯೂನಿಚ್ನಲ್ಲಿ ಅಂತ್ಯಗೊಂಡ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ನಲ್ಲಿ ಭಾರತ ಐದು ಚಿನ್ನದ ಪದಕಗಳೊಂದಿಗೆ ಮಿಕ್ಸೆಡ್ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಐದು ಚಿನ್ನ ಮತ್ತು 1 ಬೆಳ್ಳಿ ಗೆದ್ದಿರುವ ಭಾರತ ಪದಕಪಟ್ಟಿದಲ್ಲಿ ಅಗ್ರಸ್ಥಾನ ಪಡೆದಿದೆ. ದ್ವಿತೀಯ ಸ್ಥಾನ ಪಡೆದ ಚೀನ ಎರಡು ಚಿನ್ನ, ಎರಡು ಬೆಳ್ಳಿ ಮತ್ತು 5 ಕಂಚು ಗೆದ್ದಿದೆ.
ಸ್ಪರ್ಧೆಯ ಅಂತಿಮ ದಿನವಾದ ಗುರುವಾರ ಭಾರತವು ಮಿಕ್ಸೆಡ್ ತಂಡ ಪ್ರಶಸ್ತಿ ಜಯಿಸಿತಲ್ಲದೇ ಅಪೂರ್ವಿ ಚಂಡೇಲ (10ಮೀ. ಏರ್ರೈಫಲ್), ರಹಿ ಸರ್ನೋಬತ್ (25 ಮೀ. ಪಿಸ್ತೂಲ್) ಮತ್ತು ಸೌರಭ್ ಚೌಧರಿ (10 ಮೀ. ಏರ್ ಪಿಸ್ತೂಲ್) ವೈಯಕ್ತಿಕ ಚಿನ್ನ ಜಯಿಸಿದ್ದಾರೆ.
ಅಂಜುಮ್ ಮೌದ್ಗಿಲ್ ಮತ್ತು ದಿವ್ಯಾಂಶು ಸಿಂಗ್ ಪನ್ವಾರ್ ಮೊದಲಿಗೆ 10 ಮೀ. ಏರ್ ರೈಫಲ್ ಮಿಕ್ಸೆಡ್ ತಂಡ ಗೆದ್ದರು. ಈ ಮೊದಲು ಹದಿಹರೆಯದ ಮನು ಭಾಕರ್ ಮತ್ತು ಸೌರಭ್ ಚೌಧರಿ 10 ಮೀ. ಏರ್ ಪಿಸ್ತೂಲ್ನಲ್ಲಿ ಚಿನ್ನ ದೊರಕಿಸಿಕೊಟ್ಟಿದ್ದರು.