ನಡಾಲ್, ಸಿಮೋನಾ ಹಾಲೆಪ್ ಸ್ಥಾನ ಅಬಾಧಿತ
Team Udayavani, Jun 12, 2018, 6:00 AM IST
ಮ್ಯಾಡ್ರಿಡ್: ಫ್ರೆಂಚ್ ಓಪನ್ ಟೆನಿಸ್ ಮುಗಿದ ಬೆನ್ನಲ್ಲೇ ಪ್ರಕಟಿಸಲಾದ ನೂತನ ವಿಶ್ವ ರ್ಯಾಂಕಿಂಗ್ ಯಾದಿಯಲ್ಲಿ ಚಾಂಪಿಯನ್ಸ್ ರಫೆಲ್ ನಡಾಲ್ ಹಾಗೂ ಸಿಮೋನಾ ಹಾಲೆಪ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ರಫೆಲ್ ನಡಾಲ್ ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ 17ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಎಟಿಪಿ ಶ್ರೇಯಾಂಕದಲ್ಲಿ ಒಟ್ಟು 8,770 ಅಂಕ ಪಡೆದುಕೊಂಡಿದ್ದಾರೆ. 2ನೇ ಸ್ಥಾನದಲ್ಲಿ 8,670 ಅಂಕವನ್ನು ಪಡೆದಿರುವ ಸ್ವಿಜರ್ಲ್ಯಾಂಡಿನ ರೋಜರ್ ಫೆಡರರ್, 3ನೇ ಸ್ಥಾನದಲ್ಲಿ 5,965 ಅಂಕ ಪಡೆದಿರುವ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಇದ್ದಾರೆ.
ಮಹಿಳೆಯರ ಶ್ರೇಯಾಂಕದಲ್ಲಿ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯೊಂದಿಗೆ ಮೆರೆದ ಸಿಮೋನಾ ಹಾಲೆಪ್ 7,970 ಅಂಕದೊಂದಿಗೆ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಡೆನ್ಮಾರ್ಕ್ನ ಕ್ಯಾರೋಲಿನಾ ವೋಜ್ನಿಯಾಕಿ (6,745) ಹಾಗೂ ಸ್ಪೇನ್ನ ಗಾರ್ಬಿನ್ ಮುಗುರುಜಾ (6,550) 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.