WPL ಫೈನಲ್ ; ಆರ್ ಸಿಬಿ ಬಿಗಿ ದಾಳಿಗೆ ನಲುಗಿದ ಡೆಲ್ಲಿ: 113 ಕ್ಕೆ ಆಲೌಟ್!
Team Udayavani, Mar 17, 2024, 9:05 PM IST
ಹೊಸದಿಲ್ಲಿ:ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ರವಿವಾರ ನಡೆಯುತ್ತಿರುವ ವನಿತಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಗಿ ಬೌಲಿಂಗ್ ದಾಳಿ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 113 ರನ್ ಗಳಿಗೆ ಆಲೌಟ್ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಿಗಿ ದಾಳಿ ನಡೆಸಿದ ಆರ್ ಸಿಬಿ ವನಿತೆಯರು ಘಾತಕವಾಗಿ ಕಾಡಿದರು.
ಆರಂಭಿಕ ಜೋಡಿ ಮೊದಲ 7 ಓವರ್ ಗಳಲ್ಲಿ 64 ಉತ್ತಮ ಜತೆಯಾಟವಾಡಿದರಾದರೂ ತಂಡ ಕುಸಿದು ಹೋಯಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 23, ಶಫಾಲಿ ವರ್ಮ 44 ರನ್ ಗಳಿಸಿದರು. ರಾಧಾ ಯಾದವ್ 12 ಮತ್ತು ಅರುಂಧತಿ ರೆಡ್ಡಿ 10 ರನ್ ಹೊರತು ಪಡಿಸಿ ಉಳಿದ ಆಟಗಾರ್ತಿಯರೆಲ್ಲ ಪೆವಿಲಿಯನ್ ಪರೇಡ್ ನಡೆಸಿದರು.
ಬಿಗಿ ದಾಳಿ ನಡೆಸಿದ ಶ್ರೇಯಾಂಕಾ ಪಾಟೀಲ್ 4, ಸೋಫಿ ಮೊಲಿನೆಕ್ಸ್ 3, ಆಶಾ ಶೋಭನ 2 ವಿಕೆಟ್ ಕಬಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು