ಶೈಕ್ಷಣಿಕ ಅವಧಿ, ಮಧ್ಯಂತರ ರಜೆ ನಿಗದಿ

Team Udayavani, Feb 15, 2020, 3:06 AM IST

ಭರಮಸಾಗರ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಅವಧಿ, ಮಧ್ಯಂತರ ಮತ್ತು ಬೇಸಿಗೆ ರಜಾ ಅವಧಿಗಳನ್ನು ನಿಗದಿಪಡಿಸಿ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಮೊದಲ ಅವ ಧಿ ಮೇ 29ರಿಂದ ಅ.2, ಎರಡನೇ ಅವ ಧಿ ಅ.26- ಏ.14 ಆಗಿದೆ. ಅ.3- 25ರವರೆಗೆ ಮಧ್ಯಂತರ ರಜೆ, ಏ.15- ಮೇ 29ರವರೆಗೆ ಬೇಸಿಗೆ ರಜೆ ನಿಗದಿಪಡಿಸಲಾಗಿದೆ. ವಿವೇಚನಾ ರಜೆ ಒಟ್ಟು 244 ಇದ್ದು, ಅದರಲ್ಲಿ ನಾಲ್ಕನ್ನು ಕಳೆದರೆ 2020-21ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬೋಧನಾ ದಿನಗಳು 240 ದಿನಗಳನ್ನು ನಿರ್ಧರಿಸಲಾಗಿದೆ.

ಪ್ರಾಥಮಿಕ ಶಾಲೆಗಳ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು 2021ಏ.13 ರಂದು, ಪ್ರೌಢಶಾಲೆಗಳಲ್ಲಿ 2021 ಏ.14ರಂದು ನಡೆಸಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2021ರ ಏ.14ರಂದು ನಡೆಯುವ ಅಂಬೇಡ್ಕರ್‌ ಜಯಂತಿಯನ್ನು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ವಿದ್ಯಾರ್ಥಿ ಗ ಳೊಂದಿಗೆ ಕಡ್ಡಾಯವಾಗಿ ಆಚರಿಸಬೇಕು. ಡಿಸೆಂಬರ್‌ ಮಾಹೆಯ ಕ್ರಿಸ್‌ಮಸ್‌ ರಜೆ ಬಯಸುವ ಸಂಸ್ಥೆಗಳು ಆಯಾ ಜಿಲ್ಲೆಗಳ ಡಿಡಿಪಿಐಗಳ ಮಟ್ಟದಲ್ಲಿ ಡಿಸೆಂಬರ್‌ನಲ್ಲಿ ರಜೆ ಪಡೆದು ಅಕ್ಟೋಬರ್‌ ರಜೆಯಲ್ಲಿ ಸರಿದೂಗಿಸಿಕೊಳ್ಳುವಂತೆ ತಿಳಿಸಲಾಗಿದೆ.

ಮುಷ್ಕರ, ಇನ್ನಿತರ ಅನಿರೀಕ್ಷಿತ ಕಾರಣಗಳಿಂದ ರಜೆ ಘೋಷಣೆಗಳು ಆದಲ್ಲಿ ಮುಂದಿನ ರಜಾ ದಿನ ಗಳಲ್ಲಿ ಶಾಲೆಗಳನ್ನು ನಡೆಸಿ ಶಾಲಾ ಕರ್ತವ್ಯದ ದಿನಗಳನ್ನು ಸರಿದೂಗಿಸಿ ಕೊಳ್ಳಬೇಕು. ಗಣರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ, ಮಹಾತ್ಮ ಗಾಂಧಿ  ಜಯಂತಿ ಮತ್ತು ನಾಡಹಬ್ಬಗಳಾದ ಕನ್ನಡ ರಾಜ್ಯೋತ್ಸವಗಳನ್ನು ಆಯಾ ದಿನಗಳಂದು ಕಡ್ಡಾಯವಾಗಿ ಆಚ ರಿಸುವಂತೆ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್‌ ಆದೇಶ ಹೊರಡಿಸಿದ್ದಾರೆ.

ರಜೆ-ಬೋಧನಾ ಅವಧಿ ವಿವರ: 2020-21ನೇ ಶೈಕ್ಷಣಿಕ ಸಾಲಿನ ರಜೆ ಹಾಗೂ ಬೋಧನಾ ದಿನಗಳು ಇಂತಿವೆ.
ತಿಂಗಳು ಒಟ್ಟು ದಿನಗಳು ಒಟ್ಟು ರಜೆ ಲಭ್ಯವಿರುವ ಶಾಲಾ ದಿನಗಳು
ಮೇ 2020 03 01 02
ಜೂನ್‌ 2020 30 04 26
ಜುಲೈ 2020 31 04 27
ಆಗಸ್ಟ್‌ 2020 31 07 24
ಸೆಪ್ಟೆಂಬರ್‌ 2020 30 05 25
ಅಕ್ಟೋಬರ್‌ 2020 31 26 05
ನವೆಂಬರ್‌ 2020 30 07 23
ಡಿಸೆಂಬರ್‌ 2020 31 06 25
ಜನವರಿ 2021 31 06 25
ಫೆಬ್ರವರಿ 2021 28 04 24
ಮಾರ್ಚ್‌ 2021 31 05 26
ಏಪ್ರಿಲ್‌ 2021 14 02 12
ಒಟ್ಟು 321 77 244

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂಬಳಕಾಯಿಯಲ್ಲಿ ಸಿಹಿಕುಂಬಳ, ಬೂದು ಕುಂಬಳ ಎಂಬ ಎರಡು ವಿಧಗಳಿವೆ. ಅದರಲ್ಲಿ ಚೀನಿಕಾಯಿ ಎಂದು ಕರೆಯಲ್ಪಡುವ ಸಿಹಿಗುಂಬಳವನ್ನು ತರಕಾರಿಯಾಗಷ್ಟೇ ಅಲ್ಲದೆ, ಮನೆ...

  • ಏಕಾದಶಿ, ಸಂಕಷ್ಟಹರ ಚತುರ್ಥಿ, ಅಂತ ದೇವರ ಹೆಸರಿನಲ್ಲಿ ಉಪವಾಸ ಮಾಡುವವರಿದ್ದಾರೆ. ಹಾಗೆ ತಿಂಗಳಿಗೊಮ್ಮೆ ಉಪವಾಸ ಮಾಡುವುದು ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಹಾಗೆಯೇ,...

  • ಹಿಂದಿನ ಕಾಲದಲ್ಲಿ ಮೆಹಂದಿ ಗಿಡವನ್ನು ಅರೆದು ಬಹುತೇಕ ಎಲ್ಲ ಸಂದರ್ಭದಲ್ಲಿಯೂ ಒಂದೇ ಡಿಸೈನ್‌ ಮಾಡುತ್ತಿದ್ದರಂತೆ. ಆದರೆ ಕಾಲಕ್ರಮೇಣ ಮೆಹೆಂದಿ ಕೊನ್‌ ಪರಿಕಲ್ಪನೆ...

  • ಮಜೂರು - ಮಲ್ಲಾರು ಅವಳಿ ಗ್ರಾಮಗಳ ಕಾರ್ಯ ವ್ಯಾಪ್ತಿಯ ಹೈನುಗಾರರ ಬೆಳವಣಿಗೆಯ ಉದ್ದೇಶವನ್ನು ಇಟ್ಟುಕೊಂಡು ದ. ಕ. ಹಾಲು ಒಕ್ಕೂಟದ ಅಧೀನದಲ್ಲಿ 1989 ಮೇ 5ರಂದು ಮಜೂರು...

  • ಗುಣಮಟ್ಟದ ಹಾಲು, ಗರಿಷ್ಠ ಕೃತಕ ಗರ್ಭಧಾರಣೆ, ಹೆಚ್ಚು ಹಾಲು ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿ, ಅವಿಭಜಿತ ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಮಂಗಳೂರಿನಿಂದ...