ಮಂಡ್ಯ ಜಿಲ್ಲೆಗೆ ಅಂಬರೀಷ್‌ ಕೊಡುಗೆ ಶೂನ್ಯ

Team Udayavani, Feb 28, 2019, 12:30 AM IST

ಮಂಡ್ಯ: ಮಾಜಿ ಸಚಿವ ದಿವಂಗತ ಅಂಬರೀಷ್‌ ಅವರು ಮಂಡ್ಯ ಜಿಲ್ಲೆಗೆ ಯಾವುದೇ ಕೊಡುಗೆ ನೀಡಲಿಲ್ಲ. ಅವರಿಂದ ಮಾಡಲಾಗದ ಅಭಿ ವೃದ್ಧಿ ಯನ್ನು ನಾನು ಮಾಡಿ ತೋರಿಸುತ್ತೇನೆ ಎಂದು ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಅಂಬರೀಷ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ನಗರದಲ್ಲಿ ಮಾತನಾಡಿ, ಅಂಬರೀಷ್‌ ಅವರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆದರೆ, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ. ಆಗ ಮಂಡ್ಯ ಜಿಲ್ಲೆಯ ಅಮೃತ ಮಹೋತ್ಸವ ಸಮಾರಂಭ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವು ರಸ  ಮಂಜರಿ ಮತ್ತು ಮನೋರಂಜನೆಗೆ ಸೀಮಿತ ವಾಗಿತ್ತು. ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಯಾವುದೇ ಘೋಷಣೆ ಇರಲಿಲ್ಲ. 5 ವರ್ಷ ಅವರು ಜಿಲ್ಲೆಯ ಅಭಿವೃದ್ಧಿಯನ್ನು ಅವಗ‌ಣಿಸಿದ್ದರು ಎಂದರು. 

ಗೌರವ ಸಲ್ಲಿಸಿರುವೆ
ಅಂಬರೀಷ್‌ ಮತ್ತು ನನ್ನ ನಡುವೆ ಉತ್ತಮ ಸ್ನೇಹ ವಿತ್ತು. ಪಕ್ಷ ಬೇರೆಯಾಗಿದ್ದರೂ ಒಗ್ಗಟ್ಟಾಗಿದ್ದೆವು. ಆದರೆ ಅವರ ನಿಧನದ ಬಳಿಕ ಅಂಬಿ ಕುಟುಂಬ ಮತ್ತು ನಮ್ಮ ನಡುವೆ ಬಿರುಕು ಮೂಡಿಸಲು ಕೆಲವರು ಹೊರಟಿದ್ದಾರೆ. ಅಂಬರೀಷ್‌ ನಿಧನ ಹೊಂದಿದ ದಿನ ಮುಖ್ಯ ಮಂತ್ರಿಯಾಗಿ ಅವರಿಗೆ ಸಲ್ಲಿಸ ಬೇಕಾದ ಗೌರವ  ಸಲ್ಲಿಸಿದ್ದೇನೆ. ಅವರ ಮೇಲೆ ಜಿಲ್ಲೆಯ ಜನರು ಇಟ್ಟಿದ್ದ ಅಭಿಮಾನ ವನ್ನು ಅರ್ಥ ಮಾಡಿ ಕೊಂಡು ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದು ಕೊಂಡು ಬಂದು ಅಂತಿಮ ದರ್ಶನಕ್ಕೆ ಅವ ಕಾಶ ಕಲ್ಪಿಸಿದ್ದೆ. ಅಂದು ಅಂಬರೀಷ್‌ರ ಪಾರ್ಥಿವ ಶರೀರ  ಮಂಡ್ಯಕ್ಕೆ ಕೊಂಡೊಯ್ಯುವುದು ಬೇಡ ಎಂದವರು ಈಗ ಜಿಲ್ಲೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಮತ್ತೂಮ್ಮೆ ಕನ್ನಡಿಗ ಪ್ರಧಾನಿಯಾಗಲಿ
ಮೈತ್ರಿ ಪಕ್ಷದ ಅಭ್ಯರ್ಥಿಗಳು ಮಂಡ್ಯ ಕ್ಷೇತ್ರ ಸಹಿತ ರಾಜ್ಯದಲ್ಲಿ  ಕನಿಷ್ಠ 20ರಿಂದ 22 ಕ್ಷೇತ್ರ ಗಳಲ್ಲಿ  ಗೆಲುವು ಸಾಧಿಸಿದರೆ, ಕನ್ನಡಿಗರೊಬ್ಬರು ಮತ್ತೂಮ್ಮೆ ಪ್ರಧಾನಿ ಪಟ್ಟ ಅಲಂಕರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ದೇವೇಗೌಡರು ಪ್ರಧಾನಿ ಯಾಗಿ ಹತ್ತು ತಿಂಗಳು ಅಧಿಕಾರ ನಡೆ ಸಿದ ವೇಳೆ ಭಾರತದಲ್ಲಿ ಉಗ್ರಗಾಮಿ ಚಟು ವಟಿಕೆ ಗಳು ನಡೆಯಲಿಲ್ಲ. ಯೋಧರ ಕುಟುಂಬ ಗಳು ಬೀದಿಪಾಲಾಗಲಿಲ್ಲ. ಈಗ ಏಕೆ ಈ ದುರ್ಘ‌ಟನೆ ಗಳು ನಡೆಯುತ್ತಿವೆ ಎಂದು ಪ್ರಶ್ನಿಸಿದರು. ರೈತರ ಸಾಲ ಮನ್ನಾ ಮಾಡುವುದು ಪಾಪದ ಕೆಲಸ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಅದಕ್ಕೆ ಚುನಾವಣೆಯಲ್ಲಿ  ನೀವೇ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ