ಪರಮೇಶ್ವರ್‌ ಗರಂ, ರೇವಣ್ಣ ಮಾತಿಗೆ ಬ್ರೇಕ್‌

Team Udayavani, Jun 12, 2019, 3:00 AM IST

Udayavani Kannada Newspaper

ಬೆಂಗಳೂರು: ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ವಿಧಾನಸೌಧದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಪರಮೇಶ್ವರ್‌ ಅವರು, ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ, ಯೋಜನೆಗಳ ಅನುಷ್ಠಾನ ಕುರಿತು ಸಿಡಿಮಿಡಿಗೊಂಡರು.

ಒಂದು ಹಂತದಲ್ಲಿ ಇಲಾಖೆಯ ಯೋಜನೆಗಳ ಬಗ್ಗೆ ಅಧಿಕಾರಿಗಳು ವಿವರಣೆ ನೀಡುವ ಮೊದಲೇ ಸಚಿವ ರೇವಣ್ಣ ಅವರು ಮಧ್ಯಪ್ರವೇಶ ಮಾಡಿದರು. ಆಗ “ಅಧಿಕಾರಿಗಳು ಹೇಳಲಿ ರೇವಣ್ಣ ಅವರೇ, ಯೋಜನೆಗಳ ಸ್ಥಿತಿ ಏನಾಗಿದೆ ಎಂಬುದು ಕಣ್ಣಿಗೆ ಕಾಣುತ್ತಿದೆಯಲ್ಲವೇ? ಎಲ್ಲದಕ್ಕೂ ಮುಖ್ಯಮಂತ್ರಿ ಹೇಳಿದ ಮೇಲೆಯೇ ಮಾಡುವುದು ಎಂಬಂತಾಗಿದೆ’ ಎಂದು ರೇವಣ್ಣ ಮಾತಿಗೆ ಬ್ರೇಕ್‌ ಹಾಕಿದರು.

ಆಗ ರೇವಣ್ಣ, ವಿಷಯ ಹೆಚ್ಚು ಬೆಳೆಸಲು ಹೋಗದೆ, “ನೀವು ಸೀನಿಯರ್‌ ಬಿಡಿ ಸರ್‌’ ಎಂದು ಸುಮ್ಮನಾದರೆಂದು ಹೇಳಲಾಗಿದೆ. ನಗರದ ಎಲಿವೇಟೆಡ್‌ ಕಾರಿಡಾರ್‌ ಸೇರಿ ಬೇರೆ ಇಲಾಖೆ ವಾಪ್ತಿಯ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಪರಮೇಶ್ವರ್‌ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

ಅಧಿಕಾರಿಗಳ ತರಾಟೆ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಮೇಶ್ವರ್‌, ಯಾವುದೇ ಕಾಮಗಾರಿಗಳು ನಿಗದಿತ ಸಮಯದಲ್ಲೇ ಪೂರ್ಣವಾಗಬೇಕು. ನೀವು ಗುತ್ತಿಗೆದಾರನಿಗೆ ಮತ್ತಷ್ಟು ಕಾಲಾವಕಾಶ ಕೊಟ್ಟರೆ ಕಾಮಗಾರಿ ವೆಚ್ಚ ಕೂಡ ಕೋಟಿಗಟ್ಟಲೆ ಹೆಚ್ಚಾಗುತ್ತದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣ ಮಾಡಿ ಇಲ್ಲವೇ ಸರ್ಕಾರದ ಹಣ ವ್ಯರ್ಥವಾಗುತ್ತದೆ. ಶಾಲಾ ಸೇತುವೆ ನಿರ್ಮಾಣ ಅಗತ್ಯ ಇದ್ದರೆ ಅದನ್ನು ಮೊದಲೇ ಮಾಡೋಕೆ ಏನು? ಮುಖ್ಯಮಂತ್ರಿಯವರು ಹೇಳಿದ ಮೇಲೆಯೇ ಅದನ್ನು ಮಾಡ್ತೀರಲ್ಲ. ನಿಮಗೆ ಪರಿಜ್ಞಾನ ಇಲ್ಲವಾ” ಎಂದು ಗರಂ ಆದರು. ತೀರ್ಥಹಳ್ಳಿಯಲ್ಲಿ ಶಾಲಾ ಸೇತುವೆ ಮಾಡಿದ್ದಾರೆ. ಆದರೆ, ಆ ಶಾಲೆಗೆ ಸೂಕ್ತ ರಸ್ತೇನೇ ಇಲ್ಲ. ಅದು ಆ ಎಂಜಿನಿಯರ್‌ಗೆ ಯಾಕೆ ಕಾಣಿಸಿಲ್ಲ? ಇಷ್ಟು ಕಾಮನ್‌ಸೆನ್ಸ್‌ ಇಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.

ಸಿಎಂ ತಾಕೀತು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು, ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್‌ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಅವೈಜ್ಞಾನಿಕವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಇವೆ. ಡಿಪಿಆರ್‌ಗಳನ್ನು ಖಾಸಗಿಯವರಿಗೆ ಕೊಡುವುದು ಅಭ್ಯಾಸ ಆಗಿಬಿಟ್ಟಿದೆ.

ಕಾಮಗಾರಿಗಳು ವೇಗಗತಿಯಲ್ಲಿ ಆಗಬೇಕು ಎಂದು ಮುಖ್ಯಮತಾಕೀತು ಮಾಡಿದರು. ಬೆಂಗಳೂರು-ಮೈಸೂರು ಹೆದ್ದಾರಿ ಶೇ.80 ರಷ್ಟು ಮುಗಿದಿದೆ. ಈಗಾಗಲೇ 21 ಸಾವಿರ ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇವೆ. ಕೆ. ಶಿಪ್‌ ಸೇರಿದಂತೆ ಜಿಲ್ಲಾ ರಸ್ತೆಗಳು ಬೇಗ ಬೇಗ ಆಗಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಟಾಪ್ ನ್ಯೂಸ್

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

1-sddsa

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

PM Modi pay tribute to Subhas Chandra Bose on birth anniversary

ಸುಭಾಷ್ ಚಂದ್ರ ಬೋಸ್ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ: ಪ್ರಧಾನಿ ಮೋದಿ

1-fsfdf

ಭಾರತದ ಅತಿ ಎತ್ತರದ ವ್ಯಕ್ತಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

Imran Tahir played a blinder for World Giants

ಇಮ್ರಾನ್ ತಾಹಿರ್ ಸ್ಪೋಟಕ ಬ್ಯಾಟಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sddsa

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ: ಅಧಿಸೂಚನೆ

15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ: ಅಧಿಸೂಚನೆ

ರಾಜ್ಯಾದ್ಯಂತ “ಗ್ರಾಮ ಒನ್‌’ ಯೋಜನೆ; ಉಡುಪಿ ಸೇರಿ ನಾಲ್ಕು ಜಿಲ್ಲೆ ಆಯ್ಕೆ

ರಾಜ್ಯಾದ್ಯಂತ “ಗ್ರಾಮ ಒನ್‌’ ಯೋಜನೆ; ಉಡುಪಿ ಸೇರಿ ನಾಲ್ಕು ಜಿಲ್ಲೆ ಆಯ್ಕೆ

ಈ ಬಾರಿ ಪರೀಕ್ಷೆ ಪಕ್ಕಾ; 1 ರಿಂದ 9 ತರಗತಿ ಪರೀಕ್ಷೆ ನಡೆಸಲು ಸರ್ಕಾರ ಚಿಂತನೆ 

ಈ ಬಾರಿ ಪರೀಕ್ಷೆ ಪಕ್ಕಾ; 1 ರಿಂದ 9 ತರಗತಿ ಪರೀಕ್ಷೆ ನಡೆಸಲು ಸರ್ಕಾರ ಚಿಂತನೆ 

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

6protest

ಅಬಕಾರಿ ಅಧಿಕಾರಿಯ ವರ್ತನೆಗೆ ಭೀಮನಹಳ್ಳಿ ಗ್ರಾಮಸ್ಥರ ಆಕ್ರೋಶ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

5farmer

ವಿದ್ಯುತ್‌ ತಂತಿ ತಗುಲಿ ರೈತ ಸಾವು

1-sddsa

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.