ಐಬಿಪಿಎಸ್‌ ನಿರ್ದೇಶಕರಾಗಿ ಬಿ.ಹರಿದೀಶ್‌ ಕುಮಾರ್‌ ನೇಮಕ

Team Udayavani, Jul 4, 2019, 3:00 AM IST

ಬೆಂಗಳೂರು: ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (ಭಾರತೀಯ ಬ್ಯಾಂಕಿಂಗ್‌ ಸಿಬ್ಬಂದಿ ನೇಮಕ ಸಂಸ್ಥೆ)ನ ನಿರ್ದೇಶಕರಾಗಿ ಬಿ.ಹರಿದೀಶ್‌ ಕುಮಾರ್‌ ನೇಮಕಗೊಂಡಿದ್ದಾರೆ.

ಐಬಿಪಿಎಸ್‌, ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಪಾಲುದಾರಿಕೆಯ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ನಿರ್ದೇಶಕರಾಗಿ ಬಿ.ಹರಿದೀಶ್‌ ಕುಮಾರ್‌ ಅವರನ್ನು ಮೂರು ವರ್ಷಗಳ ಅವಧಿಗೆ ನಿಯೋಜಿಸಲಾಗಿದೆ. ಇವರು ವಿಜಯಾ ಬ್ಯಾಂಕ್‌ ಹಾಗೂ ಕೆನರಾ ಬ್ಯಾಂಕ್‌ನ ವಿವಿಧ ಅಂಗ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಏಕರೀತಿಯ ಸೈಬರ್‌ ಸೆಕ್ಯುರಿಟಿ ಅಂಗರಚನೆಯನ್ನು ಅಭಿವೃದ್ಧಿಗೊಳಿಸುವ ಉಪ ತಂಡದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ರಿಸರ್ವ್‌ ಬ್ಯಾಂಕ್‌ನ ಅಂಗ ಸಂಸ್ಥೆಯಾದ ನ್ಯಾಷನಲ್‌ ಪೇಮೆಂಟ್‌ ಆಫ್ ಇಂಡಿಯಾದಲ್ಲಿ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ