ಕರ್ತವ್ಯದಲ್ಲಿರುವಾಗಲೇ ಬಸ್ ಕಂಡಕ್ಟರ್ ಆತ್ಮಹತ್ಯೆ
Team Udayavani, Feb 11, 2020, 3:02 AM IST
ಲಿಂಗಸುಗೂರು: ಕೊಪ್ಪಳ ಜಿಲ್ಲೆ ಯಲಬುರ್ಗಾದ ಡಿಪೋದ ಬಸ್ ಕಂಡಕ್ಟರ್ ಕರ್ತವ್ಯದಲ್ಲಿರುವಾಗಲೇ ಲಿಂಗಸುಗೂರು ಪಟ್ಟಣದ ರಾಯಚೂರು ಮುಖ್ಯ ರಸ್ತೆಯ ಹಳ್ಳದ ಬಳಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈರಪ್ಪ ಉಪ್ಪಾರ ಮೃತ ಕಂಡಕ್ಟರ್. ಯಲಬುರ್ಗಾ ಡಿಪೋದಿಂದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರ ಜಾತ್ರೆ ಅಂಗವಾಗಿ ವಿಶೇಷ ಬಸ್ ಬಿಡಲಾಗಿತ್ತು.
ಈ ಬಸ್‌ನಲ್ಲಿದ್ದ ಕಂಡಕ್ಟರ್ ಭಾನುವಾರ ರಾತ್ರಿ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ವಾಸ್ತವ್ಯ ಮಾಡಿ ನಂತರ ಸೋಮವಾರ ಬೆಳಗ್ಗೆ ತಿಂಥಣಿ ಮೌನೇಶ್ವರಿ ಜಾತ್ರೆಗೆ ತೆರಳಬೇಕಿತ್ತು. ಆದರೆ ಸೋಮವಾರ ಬೆಳಗ್ಗೆ ಕಂಡಕ್ಟರ್ ಈರಪ್ಪ ಉಪ್ಪಾರ ಪಟ್ಟಣದ ರಾಯಚೂರು ಮುಖ್ಯರಸ್ತೆ ಹಳ್ಳದ ಪಕ್ಕದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಈ ಕುರಿತು ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಗರಪುರದ ಕಚೇರಿ ಮೇಲೆ ಆರೆಸ್ಸೆಸ್ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ : ಸಿದ್ದು
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಮಲೆನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರ : ಮನೆಯ ಮೇಲೆ ಮರ ಬಿದ್ದು ಇಬ್ಬರು ಸಾವು
ರಾಜ್ಯದಲ್ಲಿ ಹೆಚ್ಚುತ್ತಿದೆ ಹನಿಟ್ರ್ಯಾಪ್ ಹಾವಳಿ: ಉದ್ಯಮಿ,ರಾಜಕಾರಣಿಗಳೇ ಟಾರ್ಗೆಟ್
MUST WATCH
ಹೊಸ ಸೇರ್ಪಡೆ
ನಾಗರಪುರದ ಕಚೇರಿ ಮೇಲೆ ಆರೆಸ್ಸೆಸ್ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ : ಸಿದ್ದು
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಫಾಝಿಲ್ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ