ಬಿಎಸ್‌ವೈ ಸಂಪುಟದ ಪಡಿಯಚ್ಚು

Team Udayavani, Aug 5, 2021, 6:10 AM IST

ಬಿಎಸ್‌ವೈ ಸಂಪುಟದ ಪಡಿಯಚ್ಚು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಕೆಲವು ಹಿರಿಯರನ್ನು ಕೈಬಿಟ್ಟಿರು ವುದು, ಪ್ರಬಲ ಆಕಾಂಕ್ಷಿಗಳಾಗಿದ್ದ ಹಲವರನ್ನು “ಅಚ್ಚರಿ’ಯ ರೀತಿಯಲ್ಲಿ ಹೊರಗಿಟ್ಟಿರುವುದನ್ನು ಬಿಟ್ಟರೆ, ಜಾತೀವಾರು, ಪ್ರಾದೇಶಿಕ ಅಸಮ ತೋಲನ, ಜಿಲ್ಲಾವಾರು ಪ್ರಾತಿನಿಧ್ಯದ ವಿಚಾರ ದಲ್ಲಿ ಹೊಸ ಸಚಿವ ಸಂಪುಟ ಹಿಂದಿನ  ಯಡಿಯೂರಪ್ಪನವರ ಸಚಿವ ಸಂಪುಟದ ಪಡಿಯಚ್ಚಿ ನಂತಿದೆ.

ಆದರೆ, ಬಿಎಸ್‌ವೈ ಸಂಪುಟದಲ್ಲಿ ಮೂವರು ಉಪಮುಖ್ಯಮಂತ್ರಿ ಗಳಿದ್ದರು. ಬೊಮ್ಮಾಯಿ ಸಂಪುಟಕ್ಕೆ ಡಿಸಿಎಂಗಳ “ಹೆಚ್ಚುವರಿ ಭಾರ’ ಇಲ್ಲ. ಬಿಎಸ್‌ವೈ ಸಂಪುಟದಲ್ಲಿ ಮೊದಲ ಹಂತದಲ್ಲಿ 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೆ, ಬೊಮ್ಮಾಯಿ ಸಂಪುಟದಲ್ಲಿ ಮೊದಲ ಹಂತದಲ್ಲಿ 29 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಹುತೇಕರು ಬಿಎಸ್‌ವೈ ಸಂಪುಟದಲ್ಲಿದ್ದವರೇ ಮುಂದುವರಿದಿದ್ದು, ಪ್ರತಿಜ್ಞಾ ವಿಧಿಯನ್ನು “ನವೀಕರಣ’ ಮಾಡಿಸಿಕೊಂಡಂತಾಗಿದೆ.

ಶ್ರೀಮಂತ ಪಾಟೀಲ್‌ ಹೊರತುಪಡಿಸಿ ಎಲ್ಲ ವಲಸಿಗರಿಗೆ ಬೊಮ್ಮಾಯಿ ಸಂಪುಟದಲ್ಲೂ ಸ್ಥಾನ ಸಿಕ್ಕಿದೆ. ಬಿಎಸ್‌ವೈ ಅವಧಿಯಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಪ್ರಕ್ರಿಯೆ ನಾಲ್ಕೈದು ಬಾರಿ ನಡೆದಿತ್ತು. ಆದರೆ, ಬೊಮ್ಮಾಯಿ ಸಂಪುಟದಲ್ಲಿ ಒಂದೇ ಬಾರಿ 29 ಮಂದಿ ಸಚಿವರಾಗಿರುವುದರಿಂದ ಮುಖ್ಯಮಂತ್ರಿ ಸೇರಿ ಸಚಿವ ಸಂಪುಟದ ಗರಿಷ್ಠ ಸಂಖ್ಯೆ 34 ಇದ್ದು, ಹೆಚ್ಚು ವಿಸ್ತರಣೆ, ಪುನಾರಚನೆ ನಡೆಯುವ ಸಾಧ್ಯತೆ ಕಡಿಮೆ ಎನ್ನಬಹುದು. ಬಿಎಸ್‌ವೈ ಸಂಪುಟದಲ್ಲಿ 13 ಮಂದಿ ಮೊದಲ ಬಾರಿಗೆ ಸಚಿವರಾದವರು ಇದ್ದರೆ, ಬೊಮ್ಮಾಯಿ ಸಂಪುಟದಲ್ಲಿ ಆರು ಮಂದಿ ಹೊಸಬರು ಮೊದಲ ಬಾರಿಗೆ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದ ಎಲ್ಲ ಹಂತಗಳಲ್ಲೂ ಬಿಜೆಪಿ ಹೈಕಮಾಂಡ್‌ ಬಿಎಸ್‌ವೈಗೆ “ಅಟ್‌ ಯುವರ್‌ ಓನ್‌ ರಿಸ್ಕ್’ ಅಂತ ಹೇಳಿತ್ತು. ಆದರೆ, ಬೊಮ್ಮಾಯಿ ಸರಕಾರ ಅಸ್ತಿತ್ವಕ್ಕೆ ತರುವ ಎಲ್ಲ ಹಂತಗಳನ್ನು ಹೈಕಮಾಂಡ್‌ ನಿಭಾಯಿಸಿದೆ. ಸದ್ಯ ಪರಿಸ್ಥಿತಿ ಯನ್ನು ಹೈಕಮಾಂಡ್‌ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಬೊಮ್ಮಾಯಿ ಅವರಿಗೆ ನಿರಾಳತೆ ಇದೆ. ಮೇಲಾಗಿ, ಬಂಡಾಯ ಮತ್ತು ಅಪಸ್ವರಗಳನ್ನು ನಿಭಾಯಿಸಲು ಬೊಮ್ಮಾಯಿ ಬೆನ್ನಿಗೆ ಬಿಎಸ್‌ವೈ ಇದ್ದಾರೆ. ಆದರೆ, ಬಿಜೆಪಿ

ಸರಕಾರ ಅಸ್ತಿತ್ವಕೆ ತರುವಾಗ ಎಲ್ಲವನ್ನೂ ಬಿಎಸ್‌ವೈ ಏಕಾಂಗಿಯಾಗಿ ನಿಭಾಯಿಸಬೇಕಾಗಿತ್ತು.

ಹಿರಿಯ-ಕಿರಿಯರ ಸಮಾಗಮ ಸಂಪುಟ :

ಬೆಂಗಳೂರು: ಬೊಮ್ಮಾಯಿ ನೇತೃತ್ವದ ಸಂಪುಟ ದಲ್ಲಿ ಅತೀ ಹಿರಿಯರು ಎಂದರೆ ಕೆ.ಎಸ್‌. ಈಶ್ವರಪ್ಪ, ಅನಂತರ ಗೋವಿಂದ ಕಾರಜೋಳ, ಎಂ.ಟಿ.ಬಿ. ನಾಗರಾಜ್‌. ಕಿರಿಯರು ಎಂದರೆ ಸುನಿಲ್‌ಕುಮಾರ್‌ ಮತ್ತು ಶಂಕರ ಪಾಟೀಲ್‌ ಮುನೇನಕೊಪ್ಪ. ಕೆ.ಎಸ್‌. ಈಶ್ವರಪ್ಪ ಅವರಿಗೆ 73, ಗೋವಿಂದ ಕಾರಜೋಳ ಹಾಗೂ ಎಂ.ಟಿ.ಬಿ. ನಾಗರಾಜ್‌ ಅವರಿಗೆ 70 ವರ್ಷ.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ 61 ವರ್ಷ. ಉಳಿದಂತೆ, ಆರ್‌.ಅಶೋಕ್‌, ಎಸ್‌.ಟಿ. ಸೋಮಶೇಖರ್‌, ಬಿ.ಸಿ.ಪಾಟೀಲ್‌, ಬೈರತಿ ಬಸವ ರಾಜ್‌, ಆರಗ ಜ್ಞಾನೇಂದ್ರ, ಹಾಲಪ್ಪ ಆಚಾರ್‌, ಜೆ.ಸಿ. ಮಾಧುಸ್ವಾಮಿ, ಶಿವರಾಮ್‌ ಹೆಬ್ಟಾರ, ವಿ.ಸೋಮಣ್ಣ, ಉಮೇಶ್‌ ಕತ್ತಿ 60ರ ಆಸುಪಾಸು. ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಮುನಿರತ್ನ, ಗೋಪಾಲಯ್ಯ, ಮುರುಗೇಶ್‌ ನಿರಾಣಿ, ಶಶಿಕಲಾ ಜೊಲ್ಲೆ, ಬಿ.ಸಿ.ನಾಗೇಶ್‌,  ಸಿ.ಸಿ. ಪಾಟೀಲ್‌, ನಾರಾಯಣಗೌಡ, ಪ್ರಭು ಚೌವ್ಹಾಣ್‌, ಕೋಟ ಶ್ರೀನಿವಾಸ ಪೂಜಾರಿ, ಶ್ರೀರಾಮುಲು, ಅಂಗಾರ 50 ಪ್ಲಸ್‌. ಡಾ| ಕೆ.ಸುಧಾಕರ್‌, ಸುನಿಲ್‌ಕುಮಾರ್‌, ಆನಂದ್‌ ಸಿಂಗ್‌, ಶಂಕರ ಪಾಟೀಲ್‌ ಮುನೇನಕೊಪ್ಪ 45 ಪ್ಲಸ್‌.

ಟಾಪ್ ನ್ಯೂಸ್

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.