ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ, ದೆಹಲಿ ಭೇಟಿಯ ಬಗ್ಗೆ ತೀರ್ಮಾನಿಸಿಲ್ಲ: ಬಿಎಸ್ ವೈ
Team Udayavani, Sep 8, 2020, 1:16 PM IST
ಬೆಂಗಳೂರು: ರಾಜ್ಯದ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಈ ಸಂಬಂಧ ದೆಹಲಿಗೆ ಹೋಗಲು ತೀರ್ಮಾನಿಸಿಲ್ಲ. ಭೇಟಿಗೆ ಯಾವುದೇ ದಿನಾಂಕವೂ ನಿಗದಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಜಾಲ ಭೇದಿಸಲು ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದರು. ಪ್ರತಿಷ್ಠಿತರು ಯಾರೇ ಇರಲಿ, ಬಿಗಿ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಒತ್ತಡಕ್ಕೆ ಮಣಿಯದೆ, ಪಿಡುಗು ಹತ್ತಿಕ್ಕುವುದಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು
ಹಲವು ಬಿಜೆಪಿ ನಾಯಕರು ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆಯಲ್ಲಿದ್ದು, ಮತ್ತೊಮ್ಮೆ ನಿರಾಸೆಯಾಗಿದೆ. ಕೋವಿಡ್ ಕಾರಣದಿಂದ ಹಿಂದೊಮ್ಮೆ ವಿಸ್ತರಣೆ ಮುಂದೂಡಿಕೆಯಾಗಿತ್ತು.
ಇದನ್ನೂ ಓದಿ: ಯಾವುದೇ ಪ್ರದರ್ಶನಗಳಿಲ್ಲ, ಜನ ಸೇರುವಂತಿಲ್ಲ, ಅರಮನೆ ಆವರಣದಲ್ಲೇ ಜಂಬೂ ಸವಾರಿ: ಇದು ಸರಳ ದಸರಾ