
BJP Tender; ಬಿಜೆಪಿಗೆ ಶಾಕ್ 2.0: 20ಸಾವಿರ ಕೋ.ರೂ. ಮೊತ್ತದ ಟೆಂಡರ್ ರದ್ದು…
ಸಿಎಂ ಸಿದ್ದರಾಮಯ್ಯನವರಿಂದಲೇ ಆದೇಶ
Team Udayavani, May 26, 2023, 8:10 AM IST

ಬೆಂಗಳೂರು: ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತೂಂದು ಶಾಕ್ ನೀಡಿದೆ. ಹಿಂದಿನ ಅವಧಿಯಲ್ಲಿ ಹಣಕಾಸಿನ ಸೂಕ್ತ ಅನುದಾನವಿಲ್ಲದೆ ನಿಯಮಗಳನ್ನು ಉಲ್ಲಂಘಿಸಿ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಟೆಂಡರ್‌ಗಳನ್ನು ಕರೆದಿದೆ ಎಂದು ಆರೋಪಿಸಿ, ಅವುಗಳೆಲ್ಲವನ್ನೂ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದೆ.
ದಿನಗಳ ಹಿಂದಷ್ಟೇ ಬಿಜೆಪಿ ಸರಕಾರ ಆದೇಶಿಸಿದ್ದ ಎಲ್ಲ ಇಲಾಖೆಗಳ ಮತ್ತು ಅವುಗಳ ಅಧೀನಕ್ಕೊಳಪಡುವ ನಿಗಮ/ ಮಂಡಳಿ/ ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಬಿಲ್ ಪಾವತಿಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿತ್ತು. ಪ್ರಾರಂಭವಾಗದಿರುವ ಎಲ್ಲ ಕಾಮಗಾರಿಗಳನ್ನೂ ತಡೆಹಿಡಿಯಲು ಆದೇಶಿಸಲಾಗಿತ್ತು. ಈಗ ಆ ಇಲಾಖೆಗಳು ಯಾವುವು, ವಿವಿಧ ಟೆಂಡರ್‌ಗಳ ಒಟ್ಟಾರೆ ಮೊತ್ತ ಎಷ್ಟು ಎಂಬುದನ್ನು ಸ್ವತಃ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.
20 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಕರೆಯುವಾಗ ಅನುಮೋದನೆ ಅಗತ್ಯ. ಹಣಕಾಸು ಮತ್ತು ಭೂಸ್ವಾಧೀನ ತೊಂದರೆಯಿದ್ದರೂ ತರಾತುರಿಯಲ್ಲಿ ಕರೆಯಲಾಗಿದ್ದು, ಟೆಂಡರ್ ನಿಯಮಗಳನ್ನೂ ಉಲ್ಲಂಘಿಸಲಾಗಿದೆ. ಈ ಕಾಮಗಾರಿ ಅವೈಜ್ಞಾನಿಕವಾಗಿವೆ ಎಂದು ವ್ಯಾಪಕ ದೂರುಗಳು ಬಂದಿವೆ. ಜತೆಗೆ ಕೆಲವು ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ಬಗ್ಗೆಯೂ ಆರೋಪಗಳು ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಟೆಂಡರ್ ಕಾಮಗಾರಿಗಳ ಸೂಕ್ತ ಪರಿಶೀಲನೆ ನಡೆಸಬೇಕಿರುವುದರಿಂದ ಈವರೆಗೆ ಆರಂಭವಾಗಿರದ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು. ಈಗಾಗಲೇ ಕರೆದಿರುವ ಟೆಂಡರ್‌ಗಳನ್ನು ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬಿಜೆಪಿ ಸರಕಾರ ತರಾತುರಿಯಲ್ಲಿ ನೀಡಿದ ಟೆಂಡರ್ ಕಾಮಗಾರಿಗಳನ್ನು ರದ್ದು ಪಡಿಸಲಾಗುವುದು. ಅಕ್ರಮ ಟೆಂಡರ್‌ಗಳ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಚುನಾವಣ ಪ್ರಚಾರದ ವೇಳೆ ಕೂಡ ಹೇಳಿತ್ತು. ಈಗ ಆದ್ಯತೆ ಮೇರೆಗೆ ಟೆಂಡರ್‌ಗಳಿಗೆ ಬ್ರೇಕ್ ಹಾಕಿದೆ.
ಪ್ರಮುಖ ನಿಗಮಗಳೂ ಇವೆ
ವಿಶ್ವೇಶ್ವರಯ್ಯ ಜಲ ನಿಗಮ (ವಿಜೆಎನ್‌ಎಲ್), ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್) ಸೇರಿದಂತೆ ನೀರಾವರಿ, ಇಂಧನ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಜಲಜೀವನ್ ಮಿಷನ್ ಸೇರಿದಂತೆ ನೂರಾರು ಕಾಮಗಾರಿಗಳಿಗೆ ತರಾತುರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಇವುಗಳ ಮೊತ್ತ 20 ಸಾವಿರ ಕೋಟಿ ರೂ. ಆಗುತ್ತದೆ ಎಂದು ಅಂದಾಜಿಸಿದೆ. ಇವ್ಯಾವುದಕ್ಕೂ ಹಣಕಾಸಿನ ಸೂಕ್ತ ಅನುದಾನವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಸರಕಾರದಿಂದ ಗುತ್ತಿಗೆದಾರರಿಗೆ LOC ಕೊಡಲು 5% ಫಿಕ್ಸ್!! : ಹೆಚ್ ಡಿಕೆ ಆರೋಪ

Siddaramaiah ಅವರಿಗೆ ರುದ್ರಾಕ್ಷಿ ಮಾಲೆ ಹಾಕಿ ಆಶೀರ್ವದಿಸಿದ ಸುತ್ತೂರು ಶ್ರೀಗಳು

ಟ್ರಸ್ಟ್ ಗಳ ಕಾರ್ಯ ನಿರ್ವಹಣೆಗೆ ಹೆಚ್ಚಿನ ಬಲ: ಸಚಿವ ಶಿವರಾಜ್ ತಂಗಡಗಿ

Shobha Karandlaje ಅವರಿಗೂ ಫ್ರೀ…; ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಗರಂ

ಬಿಜೆಪಿಯ ಸುಳ್ಳಿನ ಸಂಸ್ಕಾರವನ್ನು ಸೋಲಿಸಿ ಸತ್ಯದ ಘನತೆಯನ್ನು ಗೆಲ್ಲಿಸಿದ್ದಾರೆ:Siddaramaiah