ಎಂಇಎಸ್‌ ನಾಯಕರಿಗೆ ಕಮಿಷನರ್‌ ತಾಕೀತು


Team Udayavani, Jan 1, 2020, 3:06 AM IST

mes-naya

ಬೆಳಗಾವಿ: ಗಡಿ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದ ಬೆನ್ನಲ್ಲೇ ಸೋಮವಾರ ಕನ್ನಡ ಸಂಘಟನೆಗಳ ಮುಖಂಡರ ಸಭೆ ಕರೆದಿದ್ದ ಪೊಲೀಸ್‌ ಕಮಿಷನರ್‌ ಲೋಕೇಶ ಕುಮಾರ, ಮಂಗಳವಾರ ಎಂಇಎಸ್‌ ಮುಖಂಡರನ್ನು ಕರೆಯಿಸಿ “ಬಾಲ ಬಿಚ್ಚಿದರೆ ಕಾನೂನು ಕ್ರಮ’ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಮಸ್ಯೆ ತರಬೇಡಿ: ಕಮಿಷನರ್‌ ಲೋಕೇಶ ಕುಮಾರ ಮಾತನಾಡಿ, ಗಡಿ ವಿವಾದ ಕುರಿತು ಕನ್ನಡ ಹಾಗೂ ಮರಾಠಿ ಭಾಷಿಕರ ಮಧ್ಯೆ ಯಾವುದೇ ವೈಷಮ್ಯ ನಡೆಯಬಾರದು. ಸದ್ಯ ಈ ವಿಷಯ ಸುಪ್ರೀಂ ಕೋರ್ಟಿನಲ್ಲಿದ್ದು, ವದಂತಿಗಳ ಆಧಾರದ ಮೇಲೆ ಗಲಾಟೆ ನಡೆಸುತ್ತ ಸಾರ್ವಜನಿಕವಾಗಿ ಸಮಸ್ಯೆ ಯನ್ನುಂಟು ಮಾಡಬಾರದು. ಈಗಾಗಲೇ ವಿವಿಧ ಸಂಘಟನೆಯವರನ್ನು ಕರೆಯಿಸಿ ವಿಷಯ ತಿಳಿಸಲಾಗಿದೆ ಎಂದರು.

ಹತ್ತಿಕ್ಕುವ ಕೆಲಸ: ಮಾಜಿ ಶಾಸಕ ಮನೋಹರ ಕಿಣೇಕರ ಮಾತನಾಡಿ, 64 ವರ್ಷಗಳಿಂದ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ವಾಗಿ ಹೋರಾಟ ನಡೆಸುತ್ತಿದ್ದೇವೆ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿಲ್ಲ. ಪ್ರಜಾ ಪ್ರಭುತ್ವದಲ್ಲಿ ಹೋರಾಟ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅದನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು.

ಮೃದು ಧೋರಣೆ ಏಕೆ?: ಎಂಇಎಸ್‌ ಮುಖಂಡ ಪ್ರಕಾಶ ಮರಗಾಳೆ ಮಾತನಾಡಿ, ಕನ್ನಡ ಸಂಘಟನೆಯವರು ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆಸಿ ಹೋರಾಟ ಮಾಡುತ್ತಿದ್ದಾರೆ. ಬೇರೆ ಕಡೆಯಿಂದ ಬಂದವರ ಮೇಲೆ ಪೊಲೀಸರು ಮೃದು ಧೋರಣೆ ತೋರುತ್ತಿರುವುದು ಏಕೆ? ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಮರಾಠಿಗರ ವಿರುದ್ಧ ಅವಹೇಳ ನಾಕಾರಿಯಾಗಿ ಮಾತನಾಡಿದ್ದಾರೆ. ಕನ್ನಡಿಗರು ಹಾಗೂ ಮರಾಠಿಗರನ್ನು ಪ್ರಚೋದಿಸುತ್ತಿದ್ದಾರೆ.

ಹೀಗಾಗಿ ಭೀಮಾಶಂಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪೊಲೀಸ್‌ ಕಮಿಷನರ್‌ ಲೋಕೇಶಕುಮಾರ ಮಾತನಾಡಿ, ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹದಗೆಡಬಾರದು. ಈ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಒಂದು ವೇಳೆ ಯಾರಾದರೂ ಕಾನೂನಿನ ವಿರುದ್ಧ ನಡೆದುಕೊಂಡರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಡಿಸಿಪಿ ಸೀಮಾ ಲಾಟ್ಕರ್‌, ಯಶೋಧಾ ವಂಟಗೋಡಿ, ಎಸಿಪಿ ಎನ್‌.ವಿ.ಬರಮನಿ, ಜಿಪಂ ಸದಸ್ಯೆ ಸರಸ್ವತಿ ಪಾಟೀಲ, ಮುಖಂಡರಾದ ದೀಪಕ ದಳವಿ, ಪ್ರಕಾಶ ಶಿರೋಳಕರ, ಮಾಲೋಜಿರಾವ ಅಷ್ಟೇಕರ, ಅರವಿಂದ ನಾಗನೂರಿ, ನೇತಾಜಿ ಜಾಧವ ಮತ್ತಿತರರಿದ್ದರು.

ಟಾಪ್ ನ್ಯೂಸ್

16arrest

ಉಡುಪಿ: ಹೈಟೆಕ್ ವೇಶ್ಯಾವಾಟಿಕೆ; ನಾಲ್ವರು ಆರೋಪಿಗಳ ಬಂಧನ

1-aff

ನಾನು ಸರಕಾರ ನಡೆಸುತ್ತಿರುವ ಟೀಮಿನ ಒಬ್ಬ ಸದಸ್ಯ: ಬಸವರಾಜ್ ಬೊಮ್ಮಾಯಿ

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್

ನ್ಯೂನತೆಯನ್ನು ಮೆಟ್ಟಿ ನಿಂತು ಜನಪ್ರಿಯತೆಯ ಮೆಟ್ಟಿಲೇರಿದ ಅಪ್ರತಿಮ ಸಾಧಕಿ ಕೌರ್

ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು

ಕೆಲಸದಿಂದ ಜನರ ವಿಶ್ವಾಸ ಗಳಿಸಬೇಕು, ಮಾತಿನಿಂದಲ್ಲ:ಪ್ರತಾಪ್ ಸಿಂಹಗೆ ಬಿಜೆಪಿ ಶಾಸಕರ ತಿರುಗೇಟು

ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ರಫೆಲ್ ನಡಾಲ್: ದಾಖಲೆಗೆ ಬೇಕು ಇನ್ನೊಂದೇ ಗೆಲುವು

ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ರಫೆಲ್ ನಡಾಲ್: ದಾಖಲೆಗೆ ಬೇಕು ಇನ್ನೊಂದೇ ಗೆಲುವು

ಆರಗ ಜ್ಞಾನೇಂದ್ರ

ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಸಿಎಂ ನಿರ್ದೇಶನ: ಆರಗ ಜ್ಞಾನೇಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aff

ನಾನು ಸರಕಾರ ನಡೆಸುತ್ತಿರುವ ಟೀಮಿನ ಒಬ್ಬ ಸದಸ್ಯ: ಬಸವರಾಜ್ ಬೊಮ್ಮಾಯಿ

ಆರಗ ಜ್ಞಾನೇಂದ್ರ

ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಸಿಎಂ ನಿರ್ದೇಶನ: ಆರಗ ಜ್ಞಾನೇಂದ್ರ

vidhana-soudha

ಪೊಲೀಸರ ಮೇಲೆ ಶಾಸಕರಿಂದ ಹಲ್ಲೆ? ಅವಾಚ್ಯ ನಿಂದನೆ ಆರೋಪ

araga

ಸ್ಫೋಟ ಆರೋಪಿಗೆ ರಾಜಾತಿಥ್ಯ : ವರದಿಗೆ ಗೃಹ ಇಲಾಖೆ ಸೂಚನೆ

1-ffsdf

ಸಿಎಂಗೆ ಬಿಜೆಪಿ‌ ಅಭಿನಂದನೆ : ಪಕ್ಷ-ಸರಕಾರದ ನಡುವಿನ ಅಂತರ ತಗ್ಗಿಸಲು ಕ್ರಮ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

16arrest

ಉಡುಪಿ: ಹೈಟೆಕ್ ವೇಶ್ಯಾವಾಟಿಕೆ; ನಾಲ್ವರು ಆರೋಪಿಗಳ ಬಂಧನ

1-aff

ನಾನು ಸರಕಾರ ನಡೆಸುತ್ತಿರುವ ಟೀಮಿನ ಒಬ್ಬ ಸದಸ್ಯ: ಬಸವರಾಜ್ ಬೊಮ್ಮಾಯಿ

15kasapa

ಕಸಾಪಕ್ಕೆ ವಾಹನ ನೀಡಲು ಕ್ರಮ: ಮುರುಗೇಶ ನಿರಾಣಿ

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

ಮುಂಗಡ ಮುನ್ನೋಟ: ಮನೆ ಖರೀದಿದಾರರಿಗೆ ಸಿಗುವುದೇ ಸಿಹಿಸುದ್ದಿ?

14bus

ಬಸ್‌ ನಿಲ್ದಾಣ ಕಾಮಗಾರಿ ಪೂರ್ಣಕ್ಕೆ ತೇಲ್ಕೂರ್‌ಗೆ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.