ಸ್ಥಳೀಯ ಸಂಸ್ಥೆ ಚುನಾವಣೆ, BJPಗಿಂತ ‘ಕೈ’ ಮೇಲುಗೈ; ಕೆಪಿಸಿಸಿ ಅಂಕಿಅಂಶ
Team Udayavani, Sep 3, 2018, 4:40 PM IST
ಬೆಂಗಳೂರು: ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ ಎಂಬ ಟೀಕೆಗೆ ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದ ಮೂಲಕ ಜನರು ಉತ್ತರ ನೀಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ನಂಬರ್ ವನ್ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಗೆಲುವು ಕಾಂಗ್ರೆಸ್ ಗೆ ದೊಡ್ಡ ಶಕ್ತಿ ತಂದುಕೊಟ್ಟಿದೆ. ನಗರ, ಗ್ರಾಮೀಣ ಪ್ರದೇಶದ ಜನ ಕಾಂಗ್ರೆಸ್ ಮೇಲೆ ವಿಶ್ವಾಸ ಇರಿಸಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ಪ್ರೇರಣೆ ಎಂದರು.
2664 ವಾರ್ಡ್ ಗಳಲ್ಲಿ 982 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ, ಸ್ವಂತ ಬಲದಲ್ಲಿ 35 ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಧಿಕಾರ ಹಿಡಿದಿದ್ದೇವೆ. ಅತಂತ್ರ ಆಗಿದ್ದ ಕಡೆಯಲ್ಲಿ ಮೈತ್ರಿ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯೋದಾಗಿ ತಿಳಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಎಸ್ ಕೂಡಾ ಹಲವೆಡೆ ಪ್ರಾಬಲ್ಯ ಮೆರೆದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇತಿಮಿತಿ ನಡುವೆಯೂ ವಾಸ್ತವಕ್ಕೆ ಹತ್ತಿರವಾದ ಬಜೆಟ್
ಬಜೆಟ್ ವಿಶ್ಲೇಷಣೆ : ಮಾರುಕಟ್ಟೆ ಆಧಾರಿತ ಬಜೆಟ್
ಕಾಂಗ್ರೆಸ್ ನಿಂದ ಮುಂದುವರಿದ ಬಹಿಷ್ಕಾರ: ಸಿಎಂ ಬಂದು ಕಾದರು ಸಭೆಗೆ ಬಾರದ ಸಿದ್ದರಾಮಯ್ಯ!
ಶಿವಮೊಗ್ಗ ವಿಮಾನ ನಿಲ್ದಾಣದ ಬಳಿ ಎರಡು ವಾಹನದಲ್ಲಿ ಭಾರಿ ಪ್ರಮಾಣದ ಸ್ಪೋಟಕ ಪತ್ತೆ!
ಸಿಡಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಿತ್ತು, ನಾನು ನಿರಪರಾಧಿ: ಕಣ್ಣೀರಿಟ್ಟ ರಮೇಶ್ ಜಾರಕಿಹೊಳಿ